ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ

By Mahesh
|
Google Oneindia Kannada News

ಹುಬ್ಬಳ್ಳಿ, ಸೆ.13: ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ರೈತರು ನಡೆಸಿರುವ ಪ್ರತಿಭಟನೆ ಕನ್ನಡ ಚಿತ್ರರಂಗದ ಹಿರಿಯ ಕಿರಿಯ ತಾರೆಗಳು ಸಾಥ್ ನೀಡಿದ್ದಾರೆ. ಕಾವೇರಿ ಹೋರಾಟ, ಗೋಕಾಕ್ ಚಳವಳಿ ನೆನಪಿಸುವಂತೆ ಗಂಡು ಮೆಟ್ಟಿನ ನಾಡಿನಲ್ಲಿ ಸ್ಯಾಂಡಲ್ ವುಡ್ ಮಂದಿ ಮೆರವಣಿಗೆ ನಡೆಸಿದರು. ನಂತರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಭಾಷಣ ಮಾಡಿದರು.

ಹುಬ್ಬಳ್ಳಿಯ ಮೂರು ಸಾವಿರ ಮಠದ ನಿರಂಜನ ಗುರುಸಿದ್ಧ ಯೋಗರಾಜೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದ ಶಿವರಾಜ್ ಕುಮಾರ್ ನೇತೃತ್ವದ ತಂಡ ಮೆರವಣಿಗೆ ಯಶಸ್ವಿಯಾಗಿಸಿದರು. ಮೆರವಣಿಗೆ ಹಾಗೂ ವೇದಿಕೆ ಭಾಷಣದ ಮುಖ್ಯಾಂಶಗಳು ಇಲ್ಲಿವೆ: [ರೈತರಿಗೆ ಚಿತ್ರರಂಗದ ಬೆಂಬಲ, ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ]

* ನಮ್ಮ ಕೂಗು ದೆಹಲಿಗಷ್ಟೆ ಅಲ್ಲ, ವಿಶ್ವಕ್ಕೆ ಕೇಳಬೇಕು. ನಾವು ಎಲ್ಲರಿಗೂ ನೀರು ಕೊಟ್ಟಿದೇವೆ. ನಮಗೆ ನೀರು ಕೊಡುವುದಿಲ್ಲ ಎಂದರೆ ಹೇಗೆ? ನಾವೇನು ಪಾಕಿಸ್ತಾನ, ಬಾಂಗ್ಲಾದೇಶದಿಂದ ನೀರು ಕೇಳಿಲ್ಲ : ಶಿವರಾಜ್ ಕುಮಾರ್.
*
ನಾನು ರೈತರ ಮೊಮ್ಮಗನಾಗಿ ಬಂದಿದ್ದೇನೆ. ನೀರಿಗಾಗಿ ಕಷ್ಟಪಡುತ್ತಿರುವುದು, ರೈತರು ನಮ್ಮ ದೇಶದ ಬೆನ್ನಲುಬು, ನಾವು ನಮ್ಮವರನ್ನು ಕಾಪಾಡದಿದ್ದರೆ, ನಮ್ಮನ್ನು ಕಾಪಾಡೋಕೆ ಯಾರು ಇರಲ್ಲ. ಜನರೆ ಕೋಪವಾಗಿರಬಾರದು. ಈ ಹೋರಾಟದಲ್ಲಿ ಕಿಚ್ಚು, ದಮ್ ಇದೆ. ನಮ್ಮ ನೆಲ ಜಲಕ್ಕಾಗಿ ಹೋರಾಟ. ನ್ಯಾಯ ಸಿಗದಿದ್ದರೆ ಎಲ್ಲರೂ ಸಂಗೊಳ್ಳಿ ರಾಯಣ್ಣ ಆಗುವುದರಲ್ಲಿ ಆಶ್ಚರ್ಯವಿಲ್ಲ- ಧ್ರುವ ಸರ್ಜಾ
*
ನಾನು ಡಿಗ್ರಿ ಮಾಡಿರುವುದು ಧಾರವಾಡದಲ್ಲಿ. ನನ್ನ ತಂದೆಯವರು ಬೆಳೆದ ಊರು ಧಾರವಾಡ. ಇಲ್ಲಿಯ ಕಷ್ಟ ಏನು ಎನ್ನುವುದು ನನಗೆ ಗೊತ್ತು. ಹೀಗಾಗಿ ನಾನು ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ: ಅನುಪ್ರಭಾಕರ್

Darshan-Shivaraj

*
ಇಂಥ ಪರಿಸ್ಥಿತಿ ಬರಲೇಬಾರದು. ಏನೇ ಸಮಸ್ಯೆಯಿದ್ದರೂ ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕು. ಕಾನೂನು ಮೂಲಕ ನ್ಯಾಯ ಸಿಗಬಹುದು ಆದರೆ, ನೆಮ್ಮದಿ ಸಿಗುವುದಿಲ್ಲ. ಎಲ್ಲರೂ ಚೆನ್ನಾಗಿರಬೇಕು. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಿ ಎಂದಿದ್ದಾರೆ : ಯಶ್
*
ನಮ್ಮ ರೈತರ ಸಮಸ್ಯೆ ಬಗ್ಗೆ ಕೇಂದ್ರ ಸರಕಾರ ಬೇಗನೇ ಗಮನಹರಿಸಲಿ. 21ನೇ ಶತಮಾನದಲ್ಲಿ ನಾವು ನೀರಿಗಾಗಿ ಈ ರೀತಿ ಹೋರಾಟ ಮಾಡುವ ಸ್ಥಿತಿ ಬಂದಿರುವುದು ದೌರ್ಭಾಗ್ಯ. ಈಗಲೇ ತಡವಾಗಿದೆ. ನರೇಂದ್ರ ಮೋದಿ ನಮ್ಮ ಕೂಗು ಕೇಳಿಸಲಿ: ಎಂದು ಉಗ್ರಂ ಖ್ಯಾತಿಯ ಶ್ರೀಮುರಳಿ ಅವರು ಹೇಳಿದರು. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

* ಗೋವಾಕ್ಕೆ ಹೋಗುವುದನ್ನು ನಿಲ್ಲಿಸಿ, ಅಲ್ಲಿನ ಪ್ರವಾಸೋದ್ಯಮಕ್ಕೆ ತೊಂದರೆಯಾದರೆ ಅವರಿಗೆ ನೋವು ಗೊತ್ತಾಗುತ್ತದೆ : ದುನಿಯಾ ವಿಜಯ್.
*
ನಟ ಶರಣ್, ದುನಿಯಾ ವಿಜಯ್, ಅನಿರುಧ್, ಧ್ರುವ ಸರ್ಜಾ, ನಟಿ ಶ್ರುತಿ, ಬಿ ಸರೋಜಾದೇವಿ, ಜಯಮಾಲಾ ಮುಂತಾದವರು ಮಾತನಾಡಿದರು.

Sri Murali

12.20: ರಾಣಿ ಚೆನ್ನಮ್ಮ ವೃತ್ತದ ಬಳಿ ಸಂಗೊಳ್ಳಿ ರಾಯಣ್ಣ ವೇದಿಕೆಗೆ ಬಂದ ತಾರೆಯರು. ಪುನೀತ್ ಪಕ್ಕದಲ್ಲಿ ಯಶ್, ದರ್ಶನ್ ಪಕ್ಕದಲ್ಲಿ ಗಣೇಶ್, ಉಪೇಂದ್ರ ಪಕ್ಕದಲ್ಲಿ ರವಿಚಂದ್ರನ್ ಉಪಸ್ಥಿತಿ.
* 1982ರ ಗೋಕಾಕ್ ಚಳವಳಿಯಲ್ಲಿ ಅಪ್ಪಾಜಿ ಭಾಗವಹಿಸಿದ್ದರು. ಅಪ್ಪಾಜಿ ಸ್ಪೂರ್ತಿಯಿಂದ ನಾವು ಇಂದು ಈ ಹೋರಾಟಕ್ಕೆ ಬಂದಿದ್ದೇವೆ. ರೈತರು ಯಾವುದೇ ಕಾರಣಕ್ಕೂ ಭಯಪಡಬೇಕಿಲ್ಲ, ನಿಮ್ಮ ಪ್ರತಿ ಹೋರಾಟ ಚಿತ್ರರಂಗ ಭಾಗಿಯಾಗುತ್ತೆ : ಶಿವರಾಜ್ ಕುಮಾರ್.

* ಮಹದಾಯಿ ನೀರಿಗಾಗಿ ನರಗುಂದದ ರೈತ ವೀರಗಲ್ಲಿನ ಎದುರು ಆರಂಭವಾದ ಸತ್ಯಾಗ್ರಹ ಸೆ.13ರಂದು 60ನೇ ದಿನ ಪೂರೈಸಲಿದೆ. [ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]

* ಮೂರುಸಾವಿರ ಮಠ ಮೈದಾನದಿಂದ ಆರಂಭವಾಗಲಿರುವ ರ‍್ಯಾಲಿ ದಾಜಿಬಾನ ಪೇಟೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮೂಲಕ ಸಂಚರಿಸಲಿದೆ.
* ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ನಂತರ, ಕಿತ್ತೂರು ಚನ್ನಮ್ಮ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. [ಏನಿದು ಕಳಸಾ-ಬಂಡೂರಿ ಯೋಜನೆ?]

Kannada Film Industry Artist Protest Rally

* ಎರಡು ತೆರೆದ ವಾಹನಗಳಲ್ಲಿ ಮೆರವಣಿಗೆ ನಡೆದಿದೆ. ಎಲ್ಲಾ ನಟ ನಟಿಯರು ಕಡ್ಡಾಯ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಕೊರಳಲ್ಲಿ ಕೆಂಪು-ಹಸಿರು ಕನ್ನಡ ಬಾವುಟ ಬಣ್ಣದ ಮಫ್ಲರ್ ಗಳಿವೆ.
* ತಾರೆಗಳನ್ನು ಕಂಡ ಖುಷಿಯಲ್ಲಿ ಹುಬ್ಬಳ್ಳಿಯ ಮಂದಿ ಫೋಟೋ ಕ್ಲಿಕ್ ಮಾಡುತ್ತಿದ್ದಾರೆ. ಕೈ ಬೀಸುತ್ತಿದ್ದಾರೆ.
* ತಾರೆಗಳ ಮೆರವಣಿಗೆಗೆ ಭಾರಿ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದಲೇ ಮೆರವಣಿಗೆ ಹಾದಿಯನ್ನು ಕಾಯಲಾಗುತ್ತಿದೆ ಎಂದು ಹುಬ್ಬಳ್ಳಿ ಧಾರಾವಾಡ ಪೊಲೀಸ್ ಆಯುಕ್ತ ಎಚ್ ಎನ್ ರಾಣೆ ಹೇಳಿದ್ದಾರೆ.

ಭಾಗವಹಿಸಿರುವ ಕಲಾವಿದರು:
ನಟರಾದ ಶಿವರಾಜಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ರಮೇಶ್ ಅರವಿಂದ್, ಚಿರಂಜೀವಿ ಸರ್ಜಾ, ಗಣೇಶ್, ದುನಿಯಾ ವಿಜಯ್. [ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]

ರವಿಚಂದ್ರನ್, ದೊಡ್ಡಣ್ಣ, ಅಶೋಕ್, ಅವಿನಾಶ್, ರಾಕ್​ಲೈನ್ ವೆಂಕಟೇಶ್, ಶ್ರೀನಿವಾಸಮೂರ್ತಿ, ವಿಜಯ ರಾಘವೇಂದ್ರ, ಮಾಲಾಶ್ರೀ, ನೀನಾಸಂ ಸತೀಶ್, ಅನಿರುದ್ಧ, ಭಾರತಿ ವಿಷ್ಣುವರ್ಧನ್, ವಿಧಾನಪರಿಷತ್ ಸದಸ್ಯೆ ಜಯಮಾಲಾ, ಹೇಮಾ ಚೌಧರಿ, ಬಿ. ಸರೋಜಾದೇವಿ, ಸುಂದರ ರಾಜ್, ಪ್ರಮೀಳಾ ಜೋಷಾಯ್, ಶ್ರುತಿ, ಅನು ಪ್ರಭಾಕರ್,

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ಸೇರಿದಂತೆ 300ಕ್ಕೂ ಅಧಿಕ ಚಿತ್ರರಂಗದ ಮಂದಿ.

English summary
Farmers agitation demanding implementation of Kalasa-Banduri Nala project gets Star Power. Kannada film industry has joined farmers protest. Film stars, producers, directors and technicians are protesting at Hubballi today(Sept 13)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X