• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರಿಗೆ ಚಿತ್ರರಂಗದ ಬೆಂಬಲ, ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ

By Mahesh
|
Google Oneindia Kannada News

ಹುಬ್ಬಳ್ಳಿ, ಸೆ. 13: ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ನರಗುಂದದ ರೈತರು 60ದಿನಗಳಿಂದ ನಡೆಸಿರುವ ಪ್ರತಿಭಟನೆ, ಹೋರಾಟದ ಬಗ್ಗೆ ಕನ್ನಡ ಚಿತ್ರರಂಗಕ್ಕೆ ಈಗ ನೆನಪು ಮಾಡಿಕೊಟ್ಟವರು ಯಾರು? ಹುಬ್ಬಳ್ಳಿಯಲ್ಲಿ ಮೆರವಣಿಗೆ, ಭಾಷಣ ಮಾಡಿ ಸಾಧಿಸಿದ್ದಾದರೂ ಏನು? ವೇದಿಕೆ ಮೇಲೆ ರೈತರಿಗೆ ಜಾಗ ಏನಾರಾ ಕೊಟ್ಟಿದ್ರಾ? ಟ್ವಿಟ್ಟರ್ ನಲ್ಲಿ ನಾವು ಬೆಂಬಲಿಸುತ್ತೇವೆ ಎಂದು ಟ್ರೆಂಡಿಂಗ್ ಮಾಡಬೇಕಾ? ಹೀಗೆ ನಾನಾ ರೀತಿ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಕಾವೇರಿ ಹೋರಾಟ, ಗೋಕಾಕ್ ಚಳವಳಿ ನೆನಪಿಸುವಂತೆ ಗಂಡು ಮೆಟ್ಟಿನ ನಾಡಿನಲ್ಲಿ ಸ್ಯಾಂಡಲ್ ವುಡ್ ಮಂದಿ ಮೆರವಣಿಗೆ, ವೇದಿಕೆಯಲ್ಲಿ ಭಾಷಣ ಕನ್ನಡ ಸಿನಿತಾರೆಗಳಿಂದ ಕೇಳಿ ಬಂದಿದೆ. [ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]

ನಟ, ನಟಿಯರು, ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರು ಸೇರಿದಂತೆ 300ಕ್ಕೂ ಅಧಿಕ ಸಿನಿಮಾ ಮಂದಿ ಎರಡು ವಾಹನಗಳಲ್ಲಿ ಮೆರವಣಿಗೆ ಬಂದು ಸಂಗೊಳ್ಳಿ ರಾಯಣ್ಣ ವೇದಿಕೆ ಏರಿ ಭಾಷಣ ಮಾಡಿ ಹೋಗಿದ್ದಾರೆ.[ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]

ಅಪ್ಪಾಜಿ ಸ್ಪೂರ್ತಿಯಿಂದ ನಾವು ಈ ಹೋರಾಟಕ್ಕೆ ಬಂದಿದ್ದೇವೆ. ರೈತರು ಯಾವುದೇ ಕಾರಣಕ್ಕೂ ಭಯಪಡಬೇಕಿಲ್ಲ,ನಿಮ್ಮ ಪ್ರತಿ ಹೋರಾಟ ಚಿತ್ರರಂಗ ಭಾಗಿಯಾಗುತ್ತೆ.ತಕ್ಷಣ ಸರ್ಕಾರ ಸಮಸ್ಯೆ ಬಗೆ ಹರಿಸಬೇಕು. ನೆಲ, ಜಲ, ಭಾಷೆಗೆ ಸಂಬಂಧಿಸಿದ ಹೋರಾಟಕ್ಕೆ ಸದಾ ಸಿದ್ಧನಿದ್ದೇನೆ. ಯಾವಾಗ ಕರೆದರೂ ಹೋರಾಟಕ್ಕೆ ಹೋಗಲು ರೆಡಿ. ಹುಬ್ಬಳ್ಳಿಯಲ್ಲಿನ ಬೃಹತ್ ಸಮಾವೇಶ ಚಿತ್ರರಂಗದ ಪಾಲಿಗೆ ಐತಿಹಾಸಿಕವಾಗಲಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ತಾರೆಗಳ ಭಾಷಣಕ್ಕೆ ಬಂದ ಪ್ರತಿಕ್ರಿಯೆಗಳನ್ನು ಮುಂದೆ ಓದಿ...

ವಾಣಿಜ್ಯ ಮಂಡಳಿ ಆಯೋಜನೆಯ ಮೆರವಣಿಗೆ

ವಾಣಿಜ್ಯ ಮಂಡಳಿ ಆಯೋಜನೆಯ ಮೆರವಣಿಗೆ

ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಕಳೆದ ಹಲವಾರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲವಿದೆ ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವ ನಿಟ್ಟಿನಲ್ಲಿ ಇಡೀ ಚಿತ್ರರಂಗವೇ ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಘೋಷಿಸಿಕೊಂಡಿದೆ.

ಪ್ರತಿಭಟನೆಗೂ ಮುನ್ನವೇ ಸಾರ್ವಜನಿಕರ ಪ್ರಶ್ನೆ

ಕನ್ನಡ ಚಿತ್ರರಂಗಕ್ಕೆ ಏಕೆ ಇಷ್ಟು ಕಾಳಜಿ ಇದ್ದಕ್ಕಿದ್ದಂತೆ ಬಂದಿದೆ ಪ್ರತಿಭಟನೆಗೂ ಮುನ್ನವೇ ಸಾರ್ವಜನಿಕರ ಪ್ರಶ್ನಿಸಿದ್ದರು.

ನಟಿ ರಾಗಿಣಿ ದ್ವಿವೇದಿ ಸಂದೇಶ

ನಟಿ ರಾಗಿಣಿ ದ್ವಿವೇದಿ ಟ್ವೀಟ್ ಸಂದೇಶ ಕಳಿಸಿ, ನಾನು ಹುಷಾರಿಲ್ಲದ ಕಾರಣ, ನಿಮ್ಮ ಜೊತೆ ಪ್ರತಿಭಟನೆಗೆ ಬರಲಾಗಿಲ್ಲ. ರೈತರ ಪ್ರತಿಭಟನೆಗೆ ನನ್ನ ಬೆಂಬಲ ಸದಾಕಾಲ ಇರುತ್ತದೆ ಎಂದಿದ್ದಾರೆ.

ಕಳಸಾ ಪ್ರತಿಭಟನೆ. ಸಿನಿ ತಾರೆಯರ ಮೆರವಣಿಗೆ

ಕಳಸಾ ಪ್ರತಿಭಟನೆ. ಸಿನಿ ತಾರೆಯರ ಮೆರವಣಿಗೆ

ಮೂರು ಸಾವಿರ ಮಠದ ರಸ್ತೆ

ಮೂರು ಸಾವಿರ ಮಠದ ರಸ್ತೆ ಪ್ರತಿಭಟನೆ ಮೆರವಣಿಗೆಗೂ ಮುನ್ನ ಹಾಗೂ ನಂತರ

ರೈತ ಬಂಧುಗಳ ಜೊತೆ ನಾವಿದ್ದೇವೆ

ರೈತ ಬಂಧುಗಳ ಜೊತೆ ನಾವಿದ್ದೇವೆ ಎನ್ನುವ ಚಿತ್ರರಂಗ 60 ದಿನ ಆದಮೇಲೆ ಬಂದಿದ್ದೇಕೆ? #WeSupportKalasaBanduri ಟ್ರೆಂಡ್ ಮಾಡಬೇಕಾ?

ಪ್ರಧಾನಿಗೆ ಮನವಿ ಸಲ್ಲಿಸಿದ ಟ್ವೀಟ್

ಪ್ರಧಾನಿ ಕಚೇರಿ ಟ್ವಿಟ್ಟರ್ ಐಡಿಗೆ ಮನವಿ ಸಲ್ಲಿಸಿದ ಟ್ವೀಟ್

ರೋಡ್ ಶೋ, ಮೆರವಣಿಗೆಯಿಂದ ಯಾರಿಗೆ ಲಾಭ

ರೋಡ್ ಶೋ, ಮೆರವಣಿಗೆಯಿಂದ ಯಾರಿಗೆ ಲಾಭ, ಕನ್ನಡ ಚಿತ್ರರಂಗದ ಮಂದಿ ಏನಾದರೂ ಮನವಿ ಪತ್ರ ಯಾರಿಗಾದರೂ ಕೊಟ್ರಾ?

ತಾರೆಗಳು ಬಂದರೆ ಮಾಧ್ಯಮಗಳಿಂದ ಲೈವ್

ತಾರೆಗಳು ಬಂದರೆ ಮಾಧ್ಯಮಗಳಿಂದ ಲೈವ್ ಕವರೇಜ್ ಸಿಗುತ್ತಿದೆ. ಇಷ್ಟು ದಿನ 10 ನಿಮಿಷದ ಕಾರ್ಯಕ್ರಮವೂ ಪ್ರಸಾರವಾಗಿಲ್ಲ.

English summary
Farmers agitation gets demanding Kalasa-Banduri Nala project Kannada film industry expressed support for farmers protest. Road show,stage n dialogues.What kind of protest is this? Did they submit any request letter? Met any concerned? Rubbish KFI #KalasaBanduri reacted Tweeples
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X