• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ ಜೊತೆಗಿನ ರೈಲ್ವೆ ಕ್ವಾರ್ಟರ್ಸ್ ದಿನಗಳನ್ನು ನೆನೆದ ಬಾಲ್ಯ ಸ್ನೇಹಿತ

|

ಧಾರವಾಡ, ನವೆಂಬರ್ 12: ರೈಲ್ವೆ ಇಲಾಖೆಯ ನೌಕರನ ಪುತ್ರ ಮಧ್ಯಮ ಕೆಳವರ್ಗದ ಕುಟುಂಬದಿಂದ ಬಂದ ಕೇಂದ್ರ ಸಚಿವ ಅನಂತ ಕುಮಾರ್ ಹುಬ್ಬಳ್ಳಿಯ ರೈಲ್ವೆ ಕ್ವಾರ್ಟರ್ಸ್ ನಲ್ಲಿ ಸರಿ ಸುಮಾರು ಎರೆಡು ದಶಕಗಳ ಕಾಲ ತಮ್ಮ ಯವ್ವನದ ದಿನಗಳನ್ನು ಕಳೆಯುವಾಗ ಅವರ ಜೊತೆ ಜೊತೆಗೇ ಬೆಳೆದುಬಂದವರು ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ.

ರೈಲ್ವೆ ಕ್ವಾರ್ಟರ್ಸ್ ನಲ್ಲಿ ಬಾಲ್ಯದ ದಿನಗಳನ್ನು ಇಬ್ಬರೂ ನೆರೆಹೊರೆಯವಾಗಿದ್ದ ಜೋಶಿ ಹಾಗೂ ಅನಂತ ಕುಮಾರ್ ಒಂದೇ ಕುಟುಂಬದವರಂತೆ ಬೆಳೆದುಬಂದವರು, ಅನಂತ ಕುಮಾರ್ ತಂದೆ ನಾರಾಯಣ ಶಾಸ್ತ್ರಿ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಯವರ ತಂದೆ ವೆಂಕಟೇಶ್ ಜೋಶಿ ಇಬ್ಬರೂ ರೈಲ್ವೆ ಉದ್ಯೋಗಿಯಾಗಿದ್ದರಿಂದ ಹುಬ್ಬಳ್ಳಿಯ ಎಂಟಿಎಫ್ ಕಾಲೊನಿಯೆಂಬ ರೈಲ್ವೆ ಕ್ವಾಟರ್ಸ್ ನಲ್ಲಿ ಜೊತೆಯಲ್ಲೇ ಬೆಳದವರು.

ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ

ಅನಂತ ಕುಮಾರ್ ತಾಯಿ ಗಿರಿಜಾ ಸಂಸದ ಪ್ರಹ್ಲಾದ್ ಜೋಶಿಯವರನ್ನು ತಮ್ಮ ಮಗನಂತೆಯೇ ಕಂಡು ಕೈತುತ್ತುಹಾಕಿದ ದಿನಗಳನ್ನು ನೆನೆದು ಜೋಶಿ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಾಲ್ಯದ ದಿನಗಳಿಂದಲೂ ಅನಂತ ಕುಮಾರ್ ಹಾಗೂ ಪ್ರಹ್ಲಾದ್ ಜೋಶಿ ಒಂದೇ ಮನೆಯಲ್ಲಿ ಬೆಳೆದ ಅಣ್ಣ-ತಮ್ಮಂದಿರಂತೆ ಬದುಕಿದವರು.

ಅನಂತ ಕುಮಾರ್ ಹುಬ್ಬಳ್ಳಿಯ ಲ್ಯಾವಿಂಗ್ ಟನ್ ಶಾಲೆಯ ವಿದ್ಯಾರ್ಥಿಯಾಗಿದ್ದರೆ ಜೋಶಿ ನ್ಯೂ ಹಿಲ್ಸ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದರು. ಅನಂತ ಕುಮಾರ್ ಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಕಿರಿಯರಾದ ಜೋಶಿಯವರನ್ನು ಸ್ವಂತ ತಮ್ಮನಂತೆಯೇ ಅನಂತ ಕುಮಾರ್ ಕಾಣುತ್ತಿದ್ದರು.

ಪ್ರಹ್ಲಾದ್ ಜೋಶಿ ಮೂವರು ಸಹೋದರರಲ್ಲಿ ಅನಂತ ಕುಮಾರ್ ಎಲ್ಲರಿಗಿಂತ ಹಿರಿಯರಾಗಿ ನಾಲ್ಕನೇ ಸಹೋದರನಂತೆ ಇದ್ದವರು. ಹೀಗಾಗಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ಜೋಶಿ ಅನಂತ ಕುಮಾರ್ ಎಂದಬ ವ್ಯಕ್ತಿ ತಮ್ಮ ಕುಟುಂಬದ ಅವಿಭಾಜ್ಯ ಅಂಗವೇ ಆಗಿದ್ದರು ಎಂದು ಬಣ್ಣಿಸಿದ್ದಾರೆ.

ಶ್ರದ್ಧಾಂಜಲಿ:ರಾಜ್ಯ ನಾಯಕರ ಮನದಲ್ಲಿ 'ಅನಂತ'ಭಾವ

ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಹೊಂದಿದ್ದ ಅನಂತ ಕುಮಾರ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾರ್ವಜನಿಕ ಬದುಕಿನಲ್ಲಿ ಪ್ರವರ್ಧಮಾನಕ್ಕೆ ಬರುವ ಜತೆಗೆ ತಮ್ಮ ಹಿರಿ-ಕಿರಿಯ ವಯಸ್ಸಿನ ಗೆಳೆಯರನ್ನೂ ಸಕ್ರಿಯರಾಗಿ ತೊಡಗಿಸುತ್ತಿದ್ದರು.

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ನಂತರ ಬಿಜೆಪಿ ಸೇರ್ಪಡೆಗೊಂಡಾಗಲೂ ತಮ್ಮ ಜೊತೆಗಿದ್ದ ಅನೇಕರನ್ನು ಕೈ ಹಿಡಿದು ನಡೆಸಿದ ಅನಂತ ಕುಮಾರ್ ರಾಜ್ಯ ರಾಜಕೀಯಕ್ಕೆ ಹಲವಾರು ನಾಯಕರನ್ನು ಕೊಟ್ಟಿದ್ದಾರೆ ಆ ಪೈಕಿ ಸಂಸದ ಪ್ರಹ್ಲಾದ್ ಜೋಶಿ ಕೂಡ ಒಬ್ಬರು.

English summary
Dharwad MP Prahlad Joshi has recalled childhood memory with union minister Ananth Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X