ಕುಡಿಯುವ ನೀರು ಪೂರೈಕೆ, ಇನ್ಫೋಸಿಸ್ ಗೆ ಸರ್ಕಾರಿ ಅಧಿಕಾರಿಗಳ ಕಿರಿಕ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಏಪ್ರಿಲ್,೦2: ಬರದ ಬೇಗೆಯಲ್ಲಿ ಬೇಯುತ್ತಿರುವ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಇನ್ಫೋಸಿಸ್ ಸಂಸ್ಥೆಗೆ ಸರಕಾರಿ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯು 'ಸಂಕಲ್ಪ ರೂರಲ್ ಡೆವಲೆಪಮೆಂಟ್' ಎಂಬ ಸೊಸೈಟಿಯ ಸಹಯೋಗದಲ್ಲಿ ಕುಡಿಯುವ ನೀರನ್ನು ಹಲವಾರು ಗ್ರಾಮಗಳಿಗೆ ಪೂರೈಸುತ್ತಿತ್ತು. ನೀರು ಪೂರೈಸಲೆಂದು ಆಯಾ ಗ್ರಾಮಗಳ ಪಿಡಿಓಗಳು ಸಂಸ್ಥೆಗಳಿಗೆ ಸಲ್ಲಿಸಿದ ಮನವಿ ಪತ್ರಗಳನ್ನು ವಾಪಸ್ ಪಡೆದುಕೊಳ್ಳುವಂತೆ ಜಿಲ್ಲಾಡಳಿತದ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ಸರಕಾರವೇ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತದೆ ಎಂದುಕೊಂಡ ಪಿಡಿಓಗಳು ಮನವಿ ಪತ್ರ ವಾಪಸ್ ಪಡೆದುಕೊಂಡಿದ್ದರು.[ಆಕ್ರೋಶಕ್ಕೆ ಮಣಿದ ಜಲಮಂಡಳಿ, ಬೋರ್ ವೆಲ್ ಶುಲ್ಕ ಇಳಿಕೆ]

Infosys company supply drinking water to some districts

ನೀರು ಪೂರೈಕೆ ಹೇಗೆ?

ಇನ್ಫೋಸಿಸ್ ಸಂಸ್ಥೆಯು ನೀರು ಪೂರೈಸುವುದಕ್ಕಾಗಿ 15 ಟ್ಯಾಂಕರ್ ಗಳನ್ನು ವ್ಯವಸ್ಥೆ ಮಾಡಿತ್ತು. ಗ್ರಾಮ ಪಂಚಾಯಿತಿಗಳೇ ಡ್ರೈವರ್ ಗಳಿಗೆ ವೇತನ, ಊಟ ಮತ್ತು ವಸತಿ ವ್ಯವಸ್ಥೆ ಮಾಡಬೇಕಿತ್ತು. ನಗರದ ನೃಪತುಂಗ ಬೆಟ್ಟದಲ್ಲಿರುವ ಜಲಮಂಡಳಿಯ ವಾಟರ್ ಟ್ಯಾಂಕ್ ನಿಂದ ಒಂದು ಟ್ಯಾಂಕರಿಗೆ 200 ರೂ. ಕೊಟ್ಟು ನೀರನ್ನು ಖರೀದಿಸಿ ಗ್ರಾಮಗಳಿಗೆ ಪೂರೈಸಲಾಗುತ್ತಿತ್ತು.[ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ..]

ಏನಿದು ಜಲಧಾರೆ ಯೋಜನೆ?

ಸಂಕಲ್ಪ ಸಂಸ್ಥೆಯು ಜಲಧಾರೆ ಯೋಜನೆಯಡಿ ಗ್ರಾಮಗಳಿಗೆ ತೆರಳಿ ನೀರಿನ ತೊಂದರೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿತ್ತು. ಈಗ ಅಧಿಕಾರಿಗಳ ಅಡ್ಡಗಾಲಿನಿಂದ ಧೃತಿಗೆಡದ ಸಂಸ್ಥೆಗಳು ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಮತ್ತು ಅಯಾ ಭಾಗದ ಶಾಸಕರನ್ನು ಸಂಪರ್ಕಿಸಿ ನೀರು ಪೂರೈಸುವುದಾಗಿ ಹೇಳಿದೆ.[ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys company supply drinking water to Gadag, Haveri, Dharwad districts from some days. But some government officials rejected and avoid their social work.
Please Wait while comments are loading...