ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಮುಂಬೈ ನಡುವೆ ಪ್ರತಿದಿನ ರೈಲು ಸೇವೆ

|
Google Oneindia Kannada News

ಹುಬ್ಬಳ್ಳಿ, ಡಿ.15 : ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯನ್ನು ನೈಋತ್ಯ ರೈಲ್ವೆ ಈಡೇರಿಸಿದೆ. ಹುಬ್ಬಳ್ಳಿ-ಲೋಕಮಾನ್ಯ ಟರ್ಮಿನಸ್ ಮುಂಬೈ ನಿತ್ಯ ರೈಲಿಗೆ ಒಪ್ಪಿಗೆ ದೊರೆತಿದ್ದು, ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ ಜಂಕ್ಷನ್-ಲೋಕಮಾನ್ಯ ಟರ್ಮಿನಸ್ ಮುಂಬೈ ರೈಲು ಸೇವೆಗೆ ಭಾನುವಾರ ಹಸಿರು ನಿಶಾನೆ ತೋರಿಸಿದ್ದಾರೆ. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ನೈಋತ್ಯ ರೈಲ್ವೆ ಮಹಾ ಪ್ರಬಂಧಕ ಪ್ರದೀಪ ಸಕ್ಸೇನಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Hubli

ರೈಲು ವೇಳಾಪಟ್ಟಿ : ಪ್ರತಿನಿತ್ಯ ಹುಬ್ಬಳ್ಳಿ ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆ 45 ನಿಮಿಷಕ್ಕೆ ಹೊರಡುವ ರೈಲು ಬೆಳಗಾವಿ, ಪುಣೆ ಮಾರ್ಗವಾಗಿ ಮುಂಬೈಅನ್ನು ಮರುದಿನ ಬೆಳ್ಳಗ್ಗೆ 7 ಗಂಟೆಗೆ ತಲುಪಲಿದೆ. [ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನು ಓದಿ]

ಅದೇ ರೀತಿ ಪ್ರತಿದಿನ ಮುಂಬೈನ ಲೋಕಮಾನ್ಯ ಟರ್ಮಿನಸ್‌ನಿಂದ ರೈಲು ಬೆಳ್ಳಗ್ಗೆ 9 ಗಂಟೆಗೆ ಹೊರಡುವ ರೈಲು ಹುಬ್ಬಳ್ಳಿ ಜಂಕ್ಷನ್‌ಗೆ ಮರುದಿನ ಮುಂಜಾಣೆ 3 ಗಂಟೆಗೆ ಬಂದು ಸೇರಲಿದೆ.

ಮತ್ತೊಂದು ರೈಲಿಗೂ ಚಾಲನೆ : ಹುಬ್ಬಳ್ಳಿ ಜಂಕ್ಷನ್-ಲೋಕಮಾನ್ಯ ಟರ್ಮಿನಸ್ ಮುಂಬೈ ರೈಲಿನ ಜೊತೆಗೆ ಹುಬ್ಬಳ್ಳಿ-ಸಿಕಂದರಾಬಾದ್-ಹುಬ್ಬಳ್ಳಿ ರೈಲು ಇನ್ನು ಮುಂದೆ ಪ್ರತಿನಿತ್ಯ ಸಂಚರಿಸಲಿದೆ. ಮೊದಲು ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು.

English summary
South Western Railway (SWR) has increased the frequency of two trains operating from Hubballi Railway Station with effect from Sunday. Hubli-Lokmanya Tilak Terminus-Hubli Express and Hubli-Secunderabad-Hubli Express will now run daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X