ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಮೇ.17: ಸ್ಥಳೀಯ ದೇಶಪಾಂಡೆ ನಗರದ ಜಿಮ್ಖಾನ್ ಮೈದಾನದಲ್ಲಿ ಸೋಮವಾರ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮದಿಂದ ನಡೆಸಲಾಯಿತು.
ಶ್ರೀವಾರಿ ಫೌಂಡೇಶನ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀನಿವಾಸ ಕಲ್ಯಾಣವನ್ನು ಕಣ್ತುಂಬಿಕೊಂಡರು.

ತಿರುಮಲದಲ್ಲಿ ತಿಮ್ಮಪ್ಪನ ದೇವಸ್ಥಾನದಂತೆಯೇ ಪ್ರತಿರೂಪ ಮಾಡಲಾಗಿತ್ತು. ಅಲ್ಲಿಯೇ ವಿಶಿಷ್ಠ ಶೈಲಿಯ ಕಲ್ಯಾಣ ಮಂಟಪವನ್ನು ಕೂಡ ನಿರ್ಮಿಸಲಾಗಿತ್ತು. ಶ್ರೀನಿವಾಸ ಮತ್ತು ಪದ್ಮಾವತಿಯವರ ವಿವಾಹವನ್ನು ಪದ್ಧತಿಯಂತೆ ವೈಶಾಖ ಶುದ್ಧ ದಶಮಿಯಂದು ಆಯೋಜಿಸಲಾಗಿತ್ತು.[ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]

Hubballi: Srinivasa Kalyanotsava celebration

ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ವೈವಾಹಿಕ ಆಚರಣೆಗಳಲ್ಲಿ ಪಾಲ್ಗೊಂಡರು. ಮೊದಲು ವಿಜಯನಗರದ ನಂಜನಗೂಡು ರಾಯರಮಠದಿಂದ ವೆಂಕಟೇಶ್ವರ ಮತ್ತು ಪದ್ಮಾವತಿಯವರ ಮೂರ್ತಿಯನ್ನು ವಧು-ವರರಂತೆ ಸಿಂಗರಿಸಿಕೊಂಡು ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು.

ನಂತರ ಸಂಸದ ಪ್ರಹ್ಲಾದ ಜೋಶಿಯವರು ವರನ ಕಡೆಯವರಾಗಿ ಮದುವೆಯ ಸಿದ್ಧತೆಯನ್ನು ನಡೆಸಿದ್ದರು. ವಧು ಪದ್ಮಾವತಿ ಬರುತ್ತಿದ್ದಂತೆ ಒಂದು ತಾಸಿಗೂ ಹೆಚ್ಚು ಕಾಲ ಅಲಂಕಾರ ಮಾಡಲಾಯಿತು. ವೈದಿಕ ಪರಂಪರೆಯಂತೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜನಿವಾರ ಹಾಕಿ ಶ್ರೀನಿವಾಸನ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

ಹೆಗಡೆ ಸ್ವಾಗತ :
ವಿವಾದಿತ ಸ್ಥಳವಾಗಿರುವ ಜಿಮ್ಖಾನ್ ಮೈದಾನವನ್ನು ಶ್ರೀನಿವಾಸ ಕಲ್ಯಾಣೋತ್ಸವ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಿಸಿದ್ದನ್ನು ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ, ವಕೀಲ ಸಿಬಿ ಲಕ್ಷ್ಮೀನಾರಾಯಣ ಹೆಗಡೆ ಸ್ವಾಗತಿಸಿದ್ದಾರೆ. ಇದೇ ರೀತಿ ಸಾರ್ವಜನಿಕರಿಗೆ ಸದುಪಯೋಗವಾಗುವಂತಹ ಮೈದಾನದಲ್ಲಿ ಮಾಡುತ್ತಿದ್ದರೆ ನಮ್ಮ ಸಮಿತಿಯು ಸ್ವಾಗತಿಸುತ್ತದೆ ಎಂದು ಹೆಗಡೆ ಹೇಳಿದ್ದಾರೆ.

-
-
-
-
-
ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ

ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi witnessed Srinivasa Kalyanotsava on 17 May, 2016. BJP Leader, Hubballi-Dharwad MP Pralhad Joshi participated in this event.
Please Wait while comments are loading...