ಹಿಮಾಲಯ ಹತ್ತಿಳಿದ ಹುಬ್ಬಳ್ಳಿ ಬೆಡಗಿ ನಂದಿತಾ
ಹುಬ್ಬಳ್ಳಿ, ಮೇ. 29: ನಗರದ ನಂದಿತಾ ನಾಗನಗೌಡರ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯ ಒಂದು ಹಂತವನ್ನು ಯಶಸ್ವಿಯಾಗಿ ಏರಿ ಬಂದಿದ್ದಾರೆ.
ಭಾರತ ಮತ್ತು ನೇಪಾಳ ಮಧ್ಯದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್ ಎವರೆಸ್ಟ್ ಸಾಲಿನಲ್ಲಿರುವ 7,906 ಮೀಟರ್ ಎತ್ತರದ ಸೌಥ ಪೋಲ್ ಮುಟ್ಟಿ ಬಂದಿರುವ ನಂದಿತಾ ಎಂಬಿಎ ಪದವೀಧರೆಯಾಗಿದ್ದಾಳೆ. 27 ವರ್ಷದ ನಂದಿತಾ ಅವರು ದಿ.ಚಂದ್ರಶೇಖರ ಪುತ್ರಿಯಾಗಿದ್ದಾಳೆ. [ಎವರೆಸ್ಟ್ ಏರಿದ ಆಂಧ್ರದ ಕಿರಿಯ ಸಾಹಸಿ]

ಈ ಸಾಧನೆ ಮಾಡಲು 52 ದಿನಗಳ ಕಾಲ ಮೌಂಟ ಎವರೆಸ್ಟ್ ಕಳೆದಿರುವ ನಂದಿತಾ, ಮಾರ್ಚ್ 15 ರಿಂದ ತಮ್ಮ ಸಾಹಸವನ್ನು ಆರಂಭಿಸಿದ್ದರು. ಮೇ. 6 ಕ್ಕೆ ಶಿಖರ ತಲುಪಿದ ಇವರು, ಒಟ್ಟು 400 ಜನರೊಂದಿಗೆ ಈ ಸಾಹಸಕ್ಕೆ ಮುಂದಾಗಿದ್ದರು. ವಿವಿಧ ದೇಶಗಳ ಮತ್ತು ಭಾರತದ ಹಲವಾರು ಜನರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು ಇವರೊಬ್ಬರೇ ಎನ್ನುವುದು ವಿಶೇಷ. ನಗರದಿಂದ ವಿಮಾನದ ಮೂಲಕ ಬೆಂಗಳೂರು, ಹೊಸದಿಲ್ಲಿ ಮಾರ್ಗವಾಗಿ ತೆರಳಿ ಕಠ್ಮಂಡು ತಲುಪಿದ್ದಾರೆ. [ಎವರೆಸ್ಟ್ ಹತ್ತಿದ್ದ ಚಂದಾ, ಕಾಂಚನಜುಂಗಾದಲ್ಲಿ ನಾಪತ್ತೆ]
ಪರ್ವತಾರೋಹಣ ಮಾಡಲು ಕೆಲವರು 1 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತಾರೆ. ತಾವು 35 ರಿಂದ 40 ಲಕ್ಷ ರೂ. ಖರ್ಚು ಮಾಡಿದ್ದೇನೆ ಎಂದು ಹೇಳುತ್ತಾರೆ.
ನಗರದ ಬಿವಿಬಿ ಕಾಲೇಜಿನಲ್ಲಿ ಇಂಜೀನಿಯರಿಂಗ್ ಮುಗಿಸಿ ನಂತರ ಇಂಗ್ಲೆಂಡ್ ನ ಇಂಟರನ್ಯಾಶನಲ್ ಬಿಸಿನೆಸ್ ವಿಭಾಗದಲ್ಲಿ ಎಂಬಿಎ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ನಲ್ಲಿ ಸ್ವಂತ ಉದ್ಯಮ ಆರಂಭಿಸುವುದಾಗಿ ಸಂತಸದಿಂದ ಹೇಳುತ್ತಾರೆ.












Click it and Unblock the Notifications