Hubballi-Dharwad Metro: ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಸಂಚರಿಸಲಿದೆಯಾ ಮೆಟ್ರೋ? ಬಜೆಟ್‌ನತ್ತ ಎಲ್ಲರ ಚಿತ್ತ

ಹುಬ್ಬಳ್ಳಿ, ಫೆಬ್ರವರಿ, 16: ಬೆಂಗಳೂರಿನಲ್ಲಿ ಮೆಟ್ರೋ ಅತ್ಯಂತ ಜನಪ್ರಿಯ ಸಾರಿಗೆಗಳಲ್ಲಿ ಒಂದಾಗಿದೆ. ನಗರದಲ್ಲಿ ಟ್ರಾಫಿಕ್‌ನಿಂದ ಪಾರಾಗಿ ಸಮಯ ಉಳಿತಾಯ ಮಾಡಲು ಬಹುತೇಕ ಪ್ರಯಾಣಿಕರು ಮೆಟ್ರೋವನ್ನೇ ಆಯ್ಕೆ ಮಾಡುತ್ತಾರೆ. ಇನ್ನು ಇಂದು (ಫೆಬ್ರವರಿ 16) ಸಿಎಂ ಸಿದ್ದರಾಮಯ್ಯ ಅವರು 15ನೇ ಬಜೆಟ್‌ ಮಂಡನೆ ಮಾಡಲಿದ್ದು, ಈ ವೇಳೆ ಮೆಟ್ರೋ ವಿಸ್ತರಣೆ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಮೆಟ್ರೋ ಘೋಷಣೆಯಾಗಲಿದ್ಯಾ ಎಂದು ಕಾದುನೋಡಬೇಕಿದೆ. ಈ ವಿಚಾರ ಯಾಕೆ ಬಂತು ಅಂತೀರಾ ಇಲ್ಲಿದೆ ಮಾಹಿತಿ

ಈಗಾಗಲೇ ಸಂಸದ ಪ್ರತಾಪ್‌ ಸಿಂಹ ಅವರು ಮುಂದಿನ ದಿನಗಳಲ್ಲಿ ಬೆಂಗಳೂರು-ಮೈಸೂರು ನಡುವೆ ಮೆಟ್ರೋ ಬರಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಇವತ್ತಿನ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಮೆಟ್ರೋ ಘೋಷಣೆ ಮಾಡುವ ಸಾಧ್ಯೆತೆಗಳಿವೆ ಎನ್ನುವ ಮಾತಗಳು ಕೂಡ ಕೇಳಿಬರುತ್ತಿವೆ.

Hubballi-Dharwad Metro: CM Siddaramaiah Will announce metro between Hubballi-Dharwad?, know details

ವಾಣಿಜ್ಯ ನಗರಿ ಅಂತಲೇ ಹೆಸರುವಾಸಿಯಾಗಿರುವ ಹುಬ್ಬಳ್ಳಿ ವ್ಯಾಪಾರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಲೇ ಇದೆ. ಇಲ್ಲಿನ ಜನಸಂಖ್ಯೆಯು ಕೂಡ ಹೆಚ್ಚಾಗುತ್ತಲಿದ್ದು, ಇದು ವಾಹನದಟ್ಟಣೆ, ಜನದಟ್ಟಣೆಗೂ ಕಾರಣವಾಗುತ್ತಿದೆ. ಅಲ್ಲದೆ ಹುಬ್ಬಳ್ಳಿ-ಧಾರವಾಡಗಳ ನಡುವೆ ಮೆಟ್ರೋ ಆದರೆ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೂ ಕೂಡ ತುಂಬಾ ಸಹಾಯಕವಾಗಲಿದೆ. ಸಂಚಾರ ದಟ್ಟಣೆಯೂ ಕೂಡ ನಿಯಂತ್ರಣಕ್ಕೆ ಬರಬಹುದು ಎನ್ನುವ ಅಭಿಪ್ರಾಯ ಇಲ್ಲಿನ ಜನರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+