ಕಿರುಕುಳ ದೂರು: ಸಿಪಿಐ ಮತ್ತು ಪೇದೆ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 12 : ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂಬ ಆರೋಪದಡಿ ಕಲಘಟಗಿ ಸಿಪಿಐ ಮತ್ತು ಪೊಲೀಸ್ ಪೇದೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಕಲಘಟಗಿ ಜೆಎಂಎಫ್ ಸಿ ನ್ಯಾಯಾಲಯ ಶುಕ್ರವಾರ ಮಹತ್ವದ ಆದೇಶ ನೀಡಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಮತ್ತು ಪೇದೆ ಆರ್.ವಿ. ಕುಂಬಾರ ತಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಲಟಘಗಿ ತಾಲೂಕಿನ ಅರಳಿಹೊಂಡ ಗ್ರಾಮದ ಶಿವಪ್ಪ ಹುಲಿಕಟ್ಟಿ ಎನ್ನುವರು 20-1-2015 ರಂದು ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶುಕ್ರವಾರ ಸಿಪಿಐ ಮತ್ತು ಪೇದೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಆದೇಶ ನೀಡಿದೆ.

harassment kalghatgi JMFC court orders probe against kalghatgi cpi

ಧಾರವಾಡದಲ್ಲಿ ಮತ್ತೋರ್ವ ಯುವತಿ ನಾಪತ್ತೆ:
ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಾ ಕಾಲೋನಿ ನಿವಾಸಿ,ಲಕ್ಷ್ಮೀ ಹನುಮಂತಪ್ಪ ಹೆಬ್ಬಳ್ಳಿ(22) ಎಂಬ ಯುವತಿ ನಾಪತ್ತೆ ಪ್ರಕರಣ ನಡೆದಿದೆ.

ತಂದೆ- ತಾಯಿಗೆ ಬಟ್ಟೆ ಹೊಲಿಯಲಿಕ್ಕೆ ಹಾಕಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಹನಮಂತಪ್ಪ ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
kalghatgi JMFC court orders probe against kalghatgi cpi and constable on November 12. Kalghatagi taluk Aralihonda village Shivappa Hulikatte has given harassment complant in lock court aginst Kalghatagi Police station CPI Manjunath and constable RV Kumbar.
Please Wait while comments are loading...