ಸಾವರ್ಕರ್‌ಗೆ ಅವಮಾನ ಆಗುವುದಕ್ಕೆ ಸರ್ಕಾರವೇ ಕಾರಣ: ಪ್ರಮೋದ್ ಮುತಾಲಿಕ್
ಧಾರವಾಡ, ಆಗಸ್ಟ್, 16: ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಈ ಬಗ್ಗೆ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಮಾತನಾಡಿ
"ಸಾವರ್ಕರ್‌ಗೆ ಅವಮಾನ ಮಾಡಿದವರನ್ನು ಅಂದೇ ಮಟ್ಟ ಹಾಕಿದ್ದರೆ ಇವತ್ತಿನ ಕೃತ್ಯ ಆಗುತ್ತಿರಲಿಲ್ಲ." "ನಾನು ಮೊದಲು ಸರ್ಕಾರಕ್ಕೆ ಧಿಕ್ಕಾರ ಹಾಕುತ್ತೇನೆ," ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
"ಸಾವರ್ಕರ್‌ಗೆ ಅವಮಾನ ಮಾಡಿದರೆ ಸುಮ್ಮನೆ ಬಾಯಿ ಮುಚ್ಚಿಕೊಂಡು ಇರುತ್ತೀರಿ ಅಂದರೆ ಏನು ಅರ್ಥ,"? ಎಂದು ಕೆರಳಿ ಕೆಂಡವಾಗಿದ್ದಾರೆ. ಶಿವಮೊಗ್ಗದಲ್ಲಿ ಮೇಲಿಂದ ಮೇಲೆ ಕೃತ್ಯಗಳು ಆಗುತ್ತಲೇ ಇವೆ. ನಿಮ್ಮ ಕೋಟೆಯಲ್ಲಿ ಹೊಕ್ಕು ಅವಮಾನ ಮಾಡುತ್ತಿರುವವರನ್ನು ಒದ್ದು ಒಳಗೆ ಹಾಕುವುದು ಅಷ್ಟೇ ಅಲ್ಲ. ಅವರ ಸೊಕ್ಕು ಮುರಿಯಬೇಕು ಎಂದರು. "ಸರ್ಕಾರ ಮಾಡಿದ ತಪ್ಪಿನಿಂದ ಇಷ್ಟೊಂದು ಅಹಿತಕರ ಘಟನೆಗಳು ನಡೆಯುತ್ತಿವೆ". ಸರ್ಕಾರ ಒಂದು ವೇಳೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಹಿಂದೂಗಳು ಮನೆ ಮನೆ ಹೊಕ್ಕು ಹೊಡೆಯಬೇಕಾಗುತ್ತದೆ," ಹಾಗೂ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧಾರವಾಡ: ಅನುಷ್ಠಾನಗೊಂಡ ರೈತಸ್ನೇಹಿ ಮಹತ್ವಾಕಾಂಕ್ಷಿ ಯೋಜನೆಗಳ ವಿವರ
ಇಡೀ ದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಧ್ವಜಾರೋಹಣ ಮಾಡಲು ಪ್ರಧಾನಿ ಅವರು ಕರೆ ನೀಡಿದ್ದರು. ಆದ್ದರಿಂದ ಮನೆ ಮನೆಗಳಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರಪ್ರೇಮ ಮೊಳಗಿಸಲಾಯಿತು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಿಎಫ್‌ಐ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಫೋಟೋ ಇಟ್ಟು ಅಶಾಂತಿ ಉಂಟು ಮಾಡಿದರು. "ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಸಾಕಷ್ಟು ಹಿಂದೂ ದೇವಾಲಯಗಳನ್ನು ಒಡೆದು ಹಾಕಿದ ಬಗ್ಗೆ ದಾಖಲೆಗಳಿವೆ. ಲಕ್ಷಾಂತರ ಜನರನ್ನು ಖಡ್ಗದ ಮೇಲೆ ಮತಾಂತರ ಮಾಡಿರುವ ಬಗ್ಗೆ ಪೂರಕವಾದ ದಾಖಲೆಗಳು ಇವೆ." "ಕನ್ನಡ ದ್ರೋಹಿ ಆಗಿದ್ದ ಟಿಪ್ಪು ಸುಲ್ತಾನ್ ಫೋಟೋ ಇಟ್ಟು ಇಲ್ಲಿನ ಮುಸ್ಲಿಂರು ಸೊಕ್ಕು ತೋರಿಸಿದ್ದಾರೆ." ಸ್ವಾತಂತ್ರ್ಯ ದಿನಾಚರಣೆಯಂದು ಮೆರೆದು ಹಿಂದೂಗಳನ್ನು ಕೆಣಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಸಾವರ್ಕರ್ ಒಬ್ಬ ಮಹಾನ್ ರಾಷ್ಟ್ರಭಕ್ತ, ಅವರು ದೇಶದ ಸ್ವಾತಂತ್ರ್ಯಕ್ಕೆ ಸೆರೆವಾಸ ಅನುಭವಿಸಿದ್ದವರು. ಸಾವರ್ಕರ್‌ನನ್ನು ಬ್ರಿಟೀಷರು 23 ವರ್ಷಗಳ ಕಾಲ ಅಂಡಮಾನ್ ಜೈಲ್‌ನಲ್ಲಿ ಇಟ್ಟಿದ್ದರು. ಅಷ್ಟೇ ಅಲ್ಲ ಅವರ ಇಡೀ ಕುಟುಂಬ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಇಂತಹ ಮಹಾನ್ ನಾಯಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಅಂತಹ ತ್ಯಾಗಿಗಳ ಫೋಟೋ ತೆಗೆಯಬೇಕು ಎಂದು ಉದ್ಧಟತನ ತೋರುವುದು ಎಷ್ಟು ಸರಿ. ಸಾವರ್ಕರ್‌ಗೆ ಅವಮಾನ ಮಾಡಿರುವ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಗುಡುಗಿದರು.