ಫೆ. 14 : ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟ ಮುತಾಲಿಕ್

ಹುಬ್ಬಳ್ಳಿ, ಫೆ. 11 : 'ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನವನ್ನು ಆಚರಿಸುವವರು ಕಂಡು ಬಂದರೆ ತಾಳಿ ಕಟ್ಟಿಸಿ ಮದುವೆ ಮಾಡಿಸುತ್ತೇವೆ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಫೆ.14ರಂದು ತಂದೆ-ತಾಯಿಯನ್ನು ಪೂಜಿಸಿ ಎಂದು ಅವರು ಕರೆ ನೀಡಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನವನ್ನು 'ಮಾತಾಪಿತ ಪೂಜನೀಯ ದಿನಾಚರಣೆ'ಯಾಗಿ ಆಚರಣೆ ಮಾಡುವಂತೆ ಕರೆ ನೀಡಿದರು. ನಮ್ಮ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಬಾರದು ಎಂದರು. [ಪ್ರೇಮಿಗಳೇ ಎಚ್ಚರ... ಸಿಕ್ಕಿಬಿದ್ದರೆ ಮದುವೆ ಗ್ಯಾರಂಟಿ]

Pramod Muthalik

ಪ್ರೇಮಿಗಳ ದಿನವನ್ನು ಆಚರಿಸುವವರು ಕಂಡು ಬಂದರೆ ತಾಳಿ ಕಟ್ಟಿಸಿ ಮದುವೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಮುತಾಲಿಕ್, ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಬದಲು ತಂದೆ-ತಾಯಿಗಳನ್ನು ಪೂಜಿಸಿ ಎಂದು ಹೇಳಿದರು. [ಪ್ರೇಮಿಗಳ ದಿನ ಸರ್ಕಾರದ ಆದೇಶವೇನು?]

ಛತ್ತೀಸ್‌ಗಢ್‌ ಸರ್ಕಾರ ಈಗಾಗಲೇ ಫೆ. 14ನ್ನು 'ಮಾತಾಪಿತೃ ದಿನ'ವಾಗಿ ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕು. ಮಕ್ಕಳು ಪಾಲಕರಿಗೆ ಪೂಜೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ.ಮತ್ತೊಂದೆಡೆ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಅವರು ಪ್ರೇಮಿಗಳ ದಿನಾಚರಣೆ ಮಾಡಿದರೆ ಮದುವೆ ಮಾಡಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+