ಧಾರವಾಡದಲ್ಲೊಂದು ವಿಸ್ಮಯಕಾರಿ ಗಣೇಶನ ವಿಗ್ರಹ

ಧಾರವಾಡ, ಸೆ 6: ಜನ ಮರುಳೋ, ಜಾತ್ರೆ ಮರುಳೋ ಅನ್ನುವ ಹಾಗೆ ಈ ಹಿಂದೆ ಗಣೇಶ ಹಾಲು ಹೀರಿದ ಎಂದು ಊರೆಲ್ಲಾ ಸುದ್ದಿಯಾಗಿತ್ತು. ಈಗ ಇದೇ ರೀತಿಯ ಸುದ್ದಿಯೊಂದು ಧಾರವಾಡದಿಂದ ವರದಿಯಾಗಿದೆ.

ನಗರದ ಮನೆಯೊಂದರಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ವಿಗ್ರಹ ಉಸಿರಾಡುತ್ತಿದೆ ಎನ್ನುವ ಸುದ್ದಿ ನಗರವೆಲ್ಲಾ ಕಾಳ್ಗಿಚ್ಚಿನಂತೆ ಹಬ್ಬಿ, ಮನೆಯ ಮುಂದೆ ಜನ ಜಾತ್ರೆಯೇ ಜಮಾಯಿಸಿದೆ.

ಮನೆಯೊಂದರಲ್ಲಿ ಇರಿಸಲಾಗಿದ್ದ ಗಣೇಶನ ವಿಗ್ರಹಕ್ಕೆ ಭಕ್ತರೊಬ್ಬರು ಕೈಮುಗಿಯಲು ಹತ್ತಿರ ಬಂದಾಗ, ಗಣೇಶನ ವಿಗ್ರಹದಲ್ಲಿ ಚಲನವಲನ ಉಂಟಾಯಿತಂತೆ. (ಸಾರ್ವಜನಿಕ ಗಣೇಶೋತ್ಸವದಲ್ಲಿ ಬೀದಿ ಪಾಲಾದ ಗಣೇಶ)

Different type of Ganesh Idol attracting huge devotees in Dharwad


ಇದರಿಂದ ಕುತೂಹಲಕ್ಕೊಳಗಾದ ಯುವಕ ಮತ್ತಷ್ಟು ವಿಗ್ರಹದ ಹತ್ತಿರ ಬಂದಾಗ ಗಣೇಶನ ವಿಗ್ರಹದ ಕೈ ಸ್ವಲ್ಪ ಮಟ್ಟಿಗೆ ಅಲುಗಾಡಲು ಆರಂಭಿಸಿತಂತೆ. ಇಷ್ಟೂ ಸಾಲದೆಂಬತೆ ಗಣೇಶನ ವಿಗ್ರಹದಲ್ಲಿ ಸಣ್ಣಮಟ್ಟಿನ ಸಂಚಲನ ಉಂಟಾಯಿತು ಎಂದು ಜನರ ಮುಂದೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

ಇದನ್ನು ಪರೀಕ್ಷಿಸಲು ಇನ್ನಷ್ಟು ಯುವಕರು ಮುಂದಾಗಿದ್ದಾರೆ. ಗಣೇಶನ ವಿಗ್ರಹದ ಬಳಿ ಹೋದ ಇವರಿಗೂ ಅದೇ ರೀತಿಯ ಅನುಭವವಾಗಿದೆ. ಅಷ್ಟು ಹೊತ್ತಿಗಾಗಲೇ ಗಣೇಶ ಉಸಿರಾಡುತ್ತಿದ್ದಾನೆ ಎನ್ನುವ ಸುದ್ದಿ ದೊಡ್ದ ಮಟ್ಟಿಗೆ ಸದ್ದು ಮಾಡಿತ್ತು.

ಅಲ್ಲಿಗೆ ದೌಡಾಯಿಸಿದ ಬಂದ ಮಾಧ್ಯಮ ಪ್ರತಿನಿಧಿಗಳಿಗೂ ಅಲ್ಲಿ ಸೇರಿರುವ ಯುವಕರು ಇದೊಂದು 'ವಿಸ್ಮಯಕಾರಿ ಗಣೇಶ' ಎಂದು ವಿವರಿಸಲಾರಂಭಿಸಿದರು. ಜನರೂ ಸರತಿ ಸಾಲಿನಲ್ಲಿ ಗಣೇಶನ ದರುಶನ ಪಡೆಯಲಾರಂಭಿಸಿದ್ದಾರೆ.

ಒಟ್ಟಿನಲ್ಲಿ ಗಣೇಶ ನಿನ್ನ ಮಹಿಮೆ ಅಪಾರ... (ಸಾಂದರ್ಭಿಕ ಚಿತ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+