ಧಾರವಾಡದಲ್ಲಿ ಸರ್‌ಪ್ರೈಸ್ ಫಲಿತಾಂಶ ಬರಲಿದೆ: ಪ್ರಧಾನಿಗೆ ಬೈದ ವಿಚಾರ ಸಂತೋಷ್ ಲಾಡ್ ಹೇಳಿದ್ದೇನು?
ಧಾರವಾಡ, ಮಾರ್ಚ್ 24: ಬಿಜೆಪಿಯು ಹತ್ತು ವರ್ಷ ಹೇಳಿದ ಸುಳ್ಳುಗಳನ್ನು ಜನರಿಗೆ ನಾವು ತಲುಪಿಸುತ್ತೇವೆ. ನಾನು ಪ್ರಧಾನಿ ಮೋದಿಯವರ ಬಗ್ಗೆ ವೈಯಕ್ತಿಕವಾಗಿ ಬೈದಿಲ್ಲ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಧಾರವಾಡದಲ್ಲಿ ಈ ಬಾರಿ ಸರ್‌ಪ್ರೈಸ್ ಫಲಿತಾಂಶ ಬರಲಿದೆ ಎಂದು ಅವರು ಭವಿಷ್ಯ ನುಡಿದರು.
ಭಾನುವಾರ ಧಾರವಾಡದಲ್ಲಿ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ವೇಳೆ ಚುನಾವಣೆ ಎದುರಿಸುವುದು ಹೇಗೆ, ಎಂಬೆಲ್ಲ ವಿಷಯಗಳನ್ನು ಸ್ಥಳೀಯ ನಾಯಕರ ಜತೆ ಚರ್ಚಿಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ, ಕಾರ್ಯಕರ್ತರು ಇದ್ದರು.

ಸಭೆ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಇಂದಿನಿಂದ ಧಾರವಾಡ ಕ್ಷೇತ್ರದಲ್ಲಿ ನಮ್ಮ ಅಧೀಕೃತ ಪ್ರಚಾರ ಆರಂಭ ಮಾಡಿದ್ದೇವೆ. ಕಳೆದ ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ. ನಾವು ಮಾಡಿದ ಕಾರ್ಯಕ್ರಮಗಳೇನು ಎಂದು ಜನರಿಗೆ ಹೇಳುತ್ತೇವೆ. ಭಾರತದ 70 ವರ್ಷದ ಇತಿಹಾಸ ಹೇಳುತ್ತೇವೆ ಎಂದರು.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ
ಜನರ ಮನೆ ಮನೆಗೆ ಹೋಗಿ ಹೇಳುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಯುವ ನಾಯಕರ ರಜತ್ ಸಹ ಟಿಕೆಟ್ ಕೇಳಿದ್ದರು ಆಕಾಂಕ್ಷಿಗಳೆಲ್ಲ ಒಪ್ಪಿ ವಿನೋದ್ ಅಸೂಟಿ ಪರ ಬಂದಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಈ ಬಾರಿ ಒಂದು ಸರಪ್ರೈಸ್ ಫಲಿತಾಂಶ ಬರುತ್ತದೆ ಎಂದು ಅವರು ಪುನರುಚ್ಚರಿಸಿದರು.
ಎಲ್ಲರೂ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದು, ಇದರ ಪರಿಣಾಮವಾಗಿ ಕಾರ್ಯಕರ್ತರು, ಮುಖಂಡರು ಸೇರಿ ಕಾಂಗ್ರೆಸ್ ಗೆಲ್ಲುತ್ತೇವೆ. ಎದುರಾಳಿ ಅಭ್ಯರ್ಥಿ ಬಹಳ ಸಲ ಗೆದ್ದವರು. ಕಳೆದ ನಾಲ್ಕು ಸಲ ಗೆದ್ದಿದ್ದಾರೆ ಎಂದು ಬಿಜೆಪಿ ಪ್ರಹ್ಲಾದ್ ಜೋಶಿ ಸ್ಪರ್ಧೆ ಕುರಿತು ಹೇಳಿದರು.

ಪ್ರತಿಸ್ಪರ್ಧಿಯನ್ನು ಗೇಲಿ ಮಾಡಲ್ಲ
ಎದುರಾಳಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವರಿದ್ದಾರೆ. ಅವರ ಬಗ್ಗೆ ನಾವು ಗೇಲಿ ಮಾಡುವುದಿಲ್ಲ. ಆದರೆ ಈಗ ಇರುವ ಪರಿಸ್ಥಿತಿ ಬೇರೆ ಇದೆ. ಮಾಧ್ಯಮಗಳಲ್ಲಿ ಪ್ರಧಾನಿ ಮಿಂಚುತ್ತಲೇ ಇದ್ದಾರೆ. ಅವರು ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ನನನ್ನು ಪ್ರಧಾನಿ ಮೋದಿಯವರನ್ನು ಬೈಯೋಕೆ ಇಟ್ಟಿದ್ದಾರೆಂದು ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದ್ದರು.
ಪ್ರಧಾನಿಗೆ ವೈಯಕ್ತಿಕವಾಗಿ ಬೈದಿಲ್ಲ: ಸಂತೋಷ್ ಲಾಡ್
ನಾನು ಈವರೆಗೆ ಒಮ್ಮೆಯು ಪ್ರಧಾನಿ ನರೇಂದ್ರ ಮೋದಿಯವರನ್ನು ವೈಯಕ್ತಿಕವಾಗಿ ಬೈದಿಲ್ಲ. ಮೋದಿಯವರಾಗಲಿ, ಇಲ್ಲ ಮೋದಿ ಮತ್ತು ಜೋಶಿಯವರಿಗಾಗಲಿ ನಾನು ವ್ಯಕ್ತಿಗತವಾಗಿ ಬೈದಿಲ್ಲ. ನಾನು ಆ ಮಟ್ಟಕ್ಕೆ ಬೆಳೆದಿಲ್ಲ. ರಾಜಕೀಯ ಜೀವನದಲ್ಲಿ ವೈಯಕ್ತಿಕವಾಗಿ ಬೈದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗಿಲ್ಲ. ಇವರೆಲ್ಲ ಜನರ ಹೀಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಅವರು ತಿರುಗೇಟು ಕೊಟ್ಟರು. ಸದ್ಯ ಕ್ಷೇತ್ರದ ಪ್ರಮುಖರ ಸಭೆ ಮಾಡಿದ್ದೇವೆ. ಸಂಘಟಿತವಾಗಿ ಕೆಲಸ ಮಾಡಲು ಚರ್ಚೆ ನಡೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications