ಡಿ. 26ರಿಂದ ಮೂರು ದಿನಗಳ ಧಾರವಾಡ ಉತ್ಸವ
ಧಾರವಾಡ, ಡಿ.15 : ಮೈಸೂರು ದಸರಾ, ಹಂಪಿ ಉತ್ಸವದ ಮಾದರಿಯಲ್ಲಿ ಧಾರವಾಡ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ಚಿಂತನೆ ಇದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಡಿ.26ರಿಂದ ಮೂರು ದಿನಗಳ ಕಾಲ 2014ರ ಧಾರವಾಡ ಉತ್ಸವ ನಡೆಯಲಿದೆ.
2014ರ ಧಾರವಾಡ ಉತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಉತ್ಸವಕ್ಕಾಗಿ 75 ಲಕ್ಷ ರೂ. ಸಂಗ್ರಹವಾಗಿದೆ. ಇನ್ನು ಅಗತ್ಯವಿರುವ ಹಣವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಜಿಲ್ಲೆಯ ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಮಾನ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲ್ಲಿನ ಸಾಹಿತ್ಯ, ನೆಲ, ಜಲ, ಭಾಷೆಗೆ ಕೊಡುಗೆ ನೀಡಿದ ಮಹನೀಯರ ಸಾಧನೆ, ವ್ಯಕ್ತಿತ್ವವನ್ನು ಇಂದಿನ ಪೀಳಿಗೆಗೆ ಉತ್ಸವದ ಮೂಲಕ ತಿಳಿಸಿಕೊಡಲಾಗುವುದು ಎಂದರು. [ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
ಸೈಕಲ್ ಜಾಥಾ : 2014ರ ಧಾರವಾಡ ಉತ್ಸವಕ್ಕೆ ಜನರನ್ನು ಆಹ್ವಾನಿಸಲು ಸೋಮವಾರ ಸೈಕಲ್ ಜಾಥಾ ನಡೆಯಿತು. ಕಲಾಭವನದಿಂದ ಹೊರಟ ಜಾಥಾಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಜೋಳನ್ ಚಾಲನೆ ನೀಡಿದರು. ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸೈಕಲ್ ಜಾಥಾ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗತ್ತದೆ.












Click it and Unblock the Notifications