ಧಾರವಾಡದ ದೃಷ್ಟಿ ಭ್ರಾಂತಿ ಪ್ರದರ್ಶನಾಲಯದ ವಿಶೇಷವೇನು?

Subscribe to Oneindia Kannada

ಧಾರವಾಡ, ಮಾರ್ಚ್, 19: ಇಲ್ಲಿನ ಕವಿವಿ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ದೃಷ್ಟಿ ಭ್ರಾಂತಿ' ತಾತ್ಕಾಲಿಕ ಪ್ರದರ್ಶನಾಲಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕೇಂದ್ರದ ಸಹ ಅಧ್ಯಕ್ಷ ಪ್ರೊ. ಪಿ.ಬಿ. ಗಾಯಿ ಶನಿವಾರ ಉದ್ಘಾಟಿಸಿದರು.

ಪ್ರೊ.ಗಾಯಿ ಮಾತನಾಡಿ, ದೃಷ್ಟಿಭ್ರಾಂತಿ ಚಿತ್ರಗಳಲ್ಲಿ ಬಣ್ಣ, ಬೆಳಕು ಮತ್ತು ಮಾದರಿಗಳನ್ನೊಳಗೊಂಡಿದ್ದು, ದೃಷ್ಟಿಭ್ರಾಂತಿ ಕೇವಲ ಮೆದುಳನ್ನು ಮೋಸಗೊಳಿಸಬಹುದು ಅಥವಾ ನಿಜವಾಗಿ ಅಲ್ಲದೆ ಇರಬಹುದಾದ ವಸ್ತುಗಳನ್ನು ಮಾತ್ರ ನೋಡಬಹುದು. ಮೆದುಳಿಗೆ ತಪ್ಪು ಅಥವಾ ಮೋಸಗೊಳಿಸಿದಂತೆ, ಕಣ್ಣುಗಳು ಕಲೆ ಹಾಕುವ ಮಾಹಿತಿಯನ್ನು ಹೊಂದಿದೆ. ಕಣ್ಣುಗಳಿಂದ ನೋಡಿದ್ದನ್ನು ಮೆದುಳಿನ ಸಹಾಯದಿಂದ ಸುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಬಗೆ ನಿಮಗೆ ಇಲ್ಲಿ ತಿಳಿಯುವುದು.[ಧಾರವಾಡ ಕೃಷಿ ವಿವಿಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್]

dharwad

ಪ್ರದರ್ಶನಾಲಯ ನಿರಂತರವಾಗಿ ಚಾಲನೆಯಲ್ಲಿ ಇರುತ್ತದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ ಕೋರಿದ್ದಾರೆ.[ಕೈಗಡಿಯಾರದ ಗಲಾಟೆಯಲ್ಲಿ ದೊರೆಗೆ ಕಾಣದ ಕರುನಾಡ ಕುವರ]

ಎಸ್.ಕೆ. ರಂಜಣಗಿ, ಅಡಿವೆಪ್ಪ ಅಂತಣ್ಣವರ, ಎಸ್.ಎಫ್. ಆಡಿನ, ಅಭಿಷೇಕ ಸಿ, ಶ್ಯಾಮ್ ತೇಲಗಾರ, ಎಂ.ಕೆ. ಹೊರಕೇರಿ, ಪ್ರಮೋದ ಆರ್., ಶಶಿಧರ ಬಿ, ಬಿ.ಎಸ್. ಗಾಂವಕರ, ಎಂ.ಸಿ. ಶಂಕರೆಗೌಡ, ಆರ್.ಪಿ.ಗಾಳಿ, ವಿಶಾಲಾಕ್ಷಿ ಎಸ್.ಜೆ. ಎಂ.ಸಿ. ಕಂದಗಲ್, ಸಿ.ಎಫ್. ಚಂಡೂರ, ಕೆ.ಎನ್. ಲಕ್ಷ್ಮಣ, ಎಸ್.ಎಫ್. ಮಾದರ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Darwad: Karnataka University had done a another mile stone. Temporary Vision illusion gallery inaugurated on 19 March, 2016.
Please Wait while comments are loading...