ಕಾಂಗ್ರೆಸ್ ಎಡಬಿಡಂಗಿತನದಿಂದ ಉಗ್ರವಾದಿ ಚಟುವಟಿಕೆ: ಪ್ರಹ್ಲಾದ್ ಜೋಶಿ ಹೇಳಿದ್ದೇನು?

ಧಾರವಾಡ, ಏಪ್ರಿಲ್ 10: ದೇಶ ಮತ್ತು ರಾಷ್ಟ್ರೀಯ ವಿಚಾರಗಳನ್ನು ಮುನ್ನೆಲೆ ಬರಲು ಬಿಡದ ಕಾಂಗ್ರೆಸ್‌ನ ಎಡಬಿಡಂಗಿತನದ ಕಾರಣದಿಂದಲೇ ಉಗ್ರವಾದಿ ಚಟುವಟಿಕೆಗಳು ಸೃಷ್ಟಿಯಾಗಿವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಆರೋಪಿಸಿದರು.

ಧಾರವಾಡದಲ್ಲಿ ಬುಧವಾರ ಬೆಳಗ್ಗೆ ಅವಾರು, ಟೆಂಪಲ್ ರನ್ ಮಾಡಿದರು. ನಗರದ ಕಾಳಿಕಾ ದೇವಿ ದೇವಸ್ಥಾನ, ನಗರೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

Dharwad Lok Sabha Pralhad Joshi Slams Congress After Temple Run on Wednesday

ದೇಶದ ಸ್ಥಿತಿಗತಿ ಬಗ್ಗೆ ಮಾತನಾಡ ಕಾಂಗ್ರೆಸ್

ಕಾಂಗ್ರೆಸ್‌ನವರು ಎಂದಿಗೂ ದೇಶದ ಬೆಳವಣಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಿತಿಗತಿ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರ ಮೇಲೆ ಬರಲು ಅವರು ಬಿಡುವುದಿಲ್ಲ. ಹೀಗಾಗಿ ತಮಗೆ ಬೇಕಾದ ವಿಚಾರಗಳನ್ನು ಮಾತ್ರವೇ ಅವರು ಮಾತನಾಡುತ್ತಾರೆ ಎಂದು ದೂರಿದರು.

ಬಿಜೆಪಿ ಅಡಳಿತ ಪೂರ್ವದಲ್ಲಿ ಈ ದೇಶದಲ್ಲಿ ಯಾವೆಲ್ಲ ಅಭಿವೃದ್ಧಿಗಳು ಆಗಿದ್ದವು? ಎಷ್ಟು ರೈಲು, ಎಷ್ಟು ರಾಷ್ಟ್ರೀಯ ಹೆದ್ದಾರಿಗಳು ಆಗಿದ್ದವು?. ಈಗ ಏನೆಲ್ಲ ಅಭಿವೃದ್ಧಿ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬೆಳವಣಿಗೆ, ಪ್ರಗತಿ ಕುರಿತು ಕಾಂಗ್ರೆಸ್‌ನವರು ಮಾತನಾಡುವುದಿಲ್ಲ.

Dharwad Lok Sabha Pralhad Joshi Slams Congress After Temple Run on Wednesday

ಉಗ್ರವಾದಿ ಚಟುವಟಿಕೆಗೆ ಆರ್ಟಿಕಲ್ 370 ಕಾರಣ

ಇತ್ತೀಚೆಗೆ ಕರ್ನಾಟಕದಲ್ಲಿ ಆರ್ಟಿಕಲ್ 370 ರದ್ದು ಬಗ್ಗೆ ಯಾಕೆ ಮಾತನಾಡುತ್ತೀರಾ ಎಂದು ಹೇಳಿದ್ದೀರಾ ಎಂದರು. ಕಾಂಗ್ರೆಸ್ ಎಡಬಿಡಂಗಿ ತನದಿಂದ ಕರ್ನಾಟಕದಲ್ಲಿ ಉಗ್ರವಾದಿ ಚಟುವಟಿಕೆಗಳು ನಡೆದಿದ್ದವು. ಇಂತಹ ಉಗ್ರವಾದಿ ಚಟುವಟಿಕೆಗೆ ಆರ್ಟಿಕಲ್ 370 ಕಾರಣವಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.‌ಕೆ.ಶಿವಕುಮಾರ್ ಅವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಕಾಂಗ್ರೆಸ್ ನಲ್ಲೇ ಬೇರೆ ಬೇರೆ ಕಾಂಗ್ರೆಸ್ ಇವೆ. ಈಗ ಇರುವುದು ನಕಲಿ ಕಾಂಗ್ರೆಸ್. ಈ ನಕಲಿ ಕಾಂಗ್ರೆಸ್ ಲೋವೆಸ್ಟ್ ಎವರ್ ಸ್ಪರ್ಧೆ ಮಾಡಿದ್ದಾರೆ. ಆದರೂ ಪ್ರಧಾನಿ ಮೋದಿಯವರಿಗೆ ಬೈಯುವುನ್ನೆ ಕಾಯಕ ಮಾಡಿಕೊಂಡಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.

ಬರ ಪರಿಹಾರ ಕ್ರಮದ ಬಗ್ಗೆ ಜೋಶಿ ಪ್ರತಿಕ್ರಿಯೆ

ಕರ್ನಾಟಕ ಬರ ಪರಿಹಾರ ವಿಷಯ ಸದ್ಯ ಕೋರ್ಟ್‌ನಲ್ಲಿದೆ. ಕೇಂದ್ರ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಚುನಾವಣೆ ಆಯೋಗ ಏನು ಅನುಮತಿ ಕೊಡುತ್ತದೆ ಎಂದು ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಧಾರವಾಡದಲ್ಲಿ ಶಿರಹಟ್ಟಿ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಸ್ಪರ್ಧೆ ವಿಚಾರ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅವರು ಏನೇ ಹೇಳಿದರೂ ಅದೆಲ್ಲವೂ ನನಗೆ ಆರ್ಶಿವಾದ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+