Dharwad Lok Sabha: ಕ್ಷೇತ್ರದಲ್ಲಿ 18 ಲಕ್ಷ ಮತದಾರರು ಇದ್ದಾರೆ: ಚುನಾವಣೆಗೆ ಸಿದ್ಧತೆ, ಮತಗಟ್ಟೆ ವಿವರ ಇಲ್ಲಿದೆ
ಧಾರವಾಡ, ಮೇ 05: ಕರ್ನಾಟಕ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನಕ್ಕೆ ದಿನಗಣನೇ ಆರಂಭವಾಗಿದೆ. ಒಟ್ಟು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇದರಲ್ಲಿ ಧಾರವಾಡ ಸಹ ಒಂದಾಗಿದೆ. ಇಲ್ಲಿ ಮತದಾನ ತಯಾರಿ ಹೇಗೆಲ್ಲ, ಇದೆ. ಜಿಲ್ಲೆಯ ಒಟ್ಟು ಮತದಾರರು ಎಷ್ಟು?, ಮತಗಟ್ಟೆಗಳು ಎಷ್ಟು? ಎಂಬೆಲ್ಲ ಮಾಹಿತಿಯನ್ನು ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳಾದ ದಿವ್ಯ ಪ್ರಭು ತಿಳಿಸಿದ್ದಾರೆ.
ಭಾನುವಾರ ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿವ್ಯ ಪ್ರಭು ಅವರು, ಎರಡನೆಯ ಹಂತದ ಮತದಾನಕ್ಕೆ (ಮೇ 7) ಎರಡೇ ದಿನ ಬಾಕಿ ಇದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೆತ್ರಗಳು ಬರುತ್ತವೆ. ಇಲ್ಲಿ ಒಟ್ಟು 18,31,975 ಮಂದಿ ಮತದಾರರು ಮತದಾನ ಮಾಡಲಿದ್ದಾರೆ.

ಮಹಿಳೆ-ಪುರಷರ ಮತದಾರರ ಮಾಹಿತಿ
ಒಟ್ಟು ಮತದಾರರಲ್ಲಿ ಪುರುಷ ಮತದಾರರ ಸಂಖ್ಯೆ 9,17,926 ಮತ್ತು ಮಹಿಳಾ ಮತದಾರರ ಸಂಖ್ಯೆ 9,13,949 ಇದೆ. ಇಲ್ಲಿ ಒಟ್ಟು 85 ವರ್ಷದ ಮೆಲ್ಪಟ್ಟ ಮತದಾರರ ಸಂಖ್ಯೆ 25,787 ಇದ್ದು, ಇದರಲ್ಲಿ ಪರುಷರು 14772 ಹಾಗೂ ಮಹಿಳಾ ಮತದಾರರು 11012 ಇದ್ದಾರೆ.
1901 ಮತಗಟ್ಟೆ, 40 ಪಿಂಕ್ ಬೂತ್
ಜಿಲ್ಲೆಯಲ್ಲಿ ಒಟ್ಟು 47,204 ಯುವ ಮತದಾರರಿದ್ದು, ಅದರಲ್ಲಿ ಪರುಷ 25,005 ಮತ್ತು ಮಹಿಳಾ ಮತದಾರರು 22,194 ರಷ್ಟಿದ್ದಾರೆ. ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಒಟ್ಟು 1901 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು. ಜಿಲ್ಲೆಯಲ್ಲಿ 40 ಪಿಂಕ್ ಮತಗಟ್ಟೆಗಳನ್ನ ಆಯ್ಕೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೆತ್ರದಲ್ಲಿ 5 ಪಿಂಕ್ ಮತದಾನ ಕೇಂದ್ರ ಗಳನ್ನ ಸ್ಥಾಪನೆ ಮಾಡಲಾಗಿದೆ.
ಒಟ್ಟು ಮತಗಟ್ಟೆಗಳಿಗಾಗಿ ಕಾರ್ಯ ನಿರ್ವಹಿಸಲು 7740 ಸಿಬ್ಬಂದಿಗಳ ನಿಯೋಜಿಸಲಾಗಿದೆ. ಚುಣಾವಣೆಗೆಂದೆ ಎಸ್ ಪಿ ವ್ಯಾಪ್ತಿಯಲ್ಲಿ 1200 ಪೋಲಿಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಇನ್ನು ಪೊಲೀಸ್ ಆಯುಕ್ತ ವ್ಯಾಪ್ತಿಯಲ್ಲಿ 2,100 ಪೋಲಿಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.

6000ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ
ಒಟ್ಟು 300 ಜನ ಹೋಮ್ ಗಾರ್ಡ್ ಕಾರ್ಯನಿರ್ವಹಿಸಲಿದ್ದರೆ, ಇಡೀ ಜಿಲ್ಲೆಯಾದ್ಯಂತ ಒಟ್ಟು 6000 ಸಾವಿರ ಪೋಲಿಸ್ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ. 114 ಅತೀ ಸೂಕ್ಮ, ಮತ ಕೇಂದ್ರಗಳ ಸ್ಥಾಪನೆ ಒಟ್ಟು ಬಸ್ ಸಂಖ್ಯೆ 200 KSRTC ಬಸ್ ಗಳು, 110 ಮಿನಿ ಬಸ್ ಗಳು, 65 ಕ್ರೂಸರ್ ಗಳನ್ನು ಗಸ್ತು ಸಿಬ್ಬಂದಿಗಾಗಿ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವ್ಯಾಪ್ತಿಯಲ್ಲಿ 55 , ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 35, ಅಬಕಾರಿ ವ್ಯಾಪ್ತಿಯಲ್ಲಿ 1378 ನೀತಿ ಸಂಹಿತೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1468 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.
ಮದ್ಯ, ವಸ್ತು, ನಗರ ಚಿನ್ನ ಜಪ್ತಿ
ಧಾರವಾಡದಲ್ಲಿ ಈವರೆಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ವಿವಿಧ ವಸ್ತುಗಳು, 11,429 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ. 1,14,177 ಕೆಜಿ ಮಾಧಕ ವಸ್ತು (ಡ್ರಗ್ಸ್) ,778 ಕೆಜಿ ಬಂಗಾ ಮತ್ತು 2,172 ಸೀರೆಗಳು ಹಾಗೂ ಒಟ್ಟು 21,51,18,217 ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಮೇ 5 ಸಂಜೆ 7 ರಿಂದ ಮೇ 7 ರಾತ್ರಿ 12 ಘಂಟೆಯವರೆಗೆ ಮದ್ಯ ಮಾರಾಟ, ಸಂಗ್ರಹಣೆ ನಿಷೇಧ ಮಾಡಲಾಗಿದೆ. 2019 ರಲ್ಲಿ ಧಾರವಾಡ ಲೋಕಸಭಾ ಕ್ಷೆತ್ರದಲ್ಲಿ ಶೇಕಡಾ 70.12 ರಷ್ಟು ಮತದಾನ ಆಗಿತ್ತು. ಈ ಬಾರಿ ಮತದಾನ ಪ್ರಮಾಣ ಕಲೆದ ಬಾರಿಗಿಂತ ಹೆಚ್ಚಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications