ಕರ್ನಾಟಕ ವಿಧಾನಸಭಾ ಚುನಾವಣೆ 2023: ಧಾರವಾಡ ಜಿಲ್ಲೆಯ ಮತಗಟ್ಟೆಗಳ ಸಂಪೂರ್ಣ ವಿವರ
ಧಾರವಾಡ, ಮೇ 04:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ, ಮೇ.10 ರಂದು ಜರುಗುವ ಮತದಾನ ಹೆಚ್ಚಳಕ್ಕೆ ಭಾರತ ಚುನಾವಣಾ ಆಯೋಗದ ನಿರ್ದೇಶನದಲ್ಲಿ ಧಾರವಾಡ ಜಿಲ್ಲಾ ಆಡಳಿತವು ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿ ಆಯ್ದ ಮತಗಟ್ಟೆಗಳನ್ನು ವಿಶೇಷವಾಗಿ ರೂಪಿಸಲು ಕ್ರಮ ಕೈಗೊಂಡಿದೆ.
ಜಿಲ್ಲೆಯಲ್ಲಿ ಮಹಿಳಾ ಸ್ನೇಹಿಯಾದ 14 ಸಖಿ, ವಿಕಲಚೇತನರನ್ನು ಪ್ರೇರೆಪಿಸುವ 7 ಪಿಡಬ್ಲ್ಯೂಡಿ ಮತಗಟ್ಟೆ, ಯುವಕರನ್ನು ಆಕರ್ಷಿಸುವ 7 ಯುವ ಮತಗಟ್ಟೆ ಮತ್ತು ಸಾಂಪ್ರದಾಯಿಕತೆಯನ್ನು ಸಾರುವ 6 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿವರಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ, ಆಯಾ ಚುನಾವಣಾಧಿಕಾರಿಗಳು ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈ ವಿಶೇಷ ಮತಗಟ್ಟೆಗಳನ್ನು ಜಿಲ್ಲಾ ಸ್ವೀಪ್ ಸಮಿತಿಯ ಮಾರ್ಗದರ್ಶನ ಮತ್ತು ತಾಲೂಕಾ ಪಂಚಾಯತ್‍ಗಳ ಸಹಕಾರದಲ್ಲಿ ಸ್ಥಾಪಿಸಲಾಗುತ್ತಿದೆ. ಕಳೆದ ಚುನವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗಮನಲ್ಲಿಟ್ಟುಕೊಂಡು ಮತ್ತು ಮತದಾರರಲ್ಲಿ ವಿಶೇಷ ಆಸಕ್ತಿ ಹಾಗೂ ಗಮನ ಸೆಳೆಯಲು ಈ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿವೆ.
ಈಗಾಗಲೇ ಮತದಾರರ ಪಟ್ಟಿಯಲ್ಲಿ ನೊಂದಾಯಿತರಾಗಿರುವ ಪ್ರತಿಯೊಬ್ಬ ಮತದಾರರು ತಪ್ಪದೇ ಮೇ.10 ರಂದು ಮತದಾನ ಮಾಡಬೇಕು. ಪ್ರತಿ ಸಲಕ್ಕಿಂತ ಈ ಬಾರಿ ಹೆಚ್ಚು ಶೇಕಡಾವಾರು ಮತದಾನವಾಗಲು ಜನರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶೇಷ ಮತಗಟ್ಟೆಗಳ ವಿವರ
ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಳಗವಾಡಿಯ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ ನಂ.18 ಮತ್ತು ತುಪ್ಪದಕುರಹಟ್ಟಿಯ ಮಾದರಿ ಸೆಂಟ್ರಲ್ ಶಾಲೆಯಲ್ಲಿನ ಮತಗಟ್ಟೆ ನಂ.109 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಇಂಗಳಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ರೂಮ ನಂ.01 ರಲ್ಲಿನ ಮತಗಟ್ಟೆ ನಂ.161 ರಲ್ಲಿ (ಪಿಡಬ್ಲೂಡಿ) ವಿಕಲಚೇತನರ ಮತಗಟ್ಟೆಯನ್ನು ಮತ್ತು ಬೆಳಹಾರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.116ರಲ್ಲಿ ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದೆ. ನಲವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.206 ಮತ್ತು ಶಲವಡಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ ನಂ.37ರಲ್ಲಿ ಸಾಂಪ್ರದಾಯಿಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಕುಂದುಗೊಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕುಂದಗೋಳ ಪಟ್ಟಣ ಪಂಚಾಯಿತಿಯ ಮತಗಟ್ಟೆ ನಂ.39 ಮತ್ತು ಸಂಶಿ ಗ್ರಾಮ ಪಂಚಾಯಿತಿ ಕಛೇರಿಯ ಮತಗಟ್ಟೆ ನಂ.128ನ್ನು ಸಖಿ ಮತಗಟ್ಟೆಯನ್ನಾಗಿ, ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ ರೂಮ ನಂ.05 ರಲ್ಲಿನ ಮತಗಟ್ಟೆ ನಂ.81 ರಲ್ಲಿ ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಕೊಂಕಣಕುರಹಟ್ಟಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.29ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬೇಲೂರಿನ ಸರಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಮತಗಟ್ಟೆ ನಂ. 88 ಮತ್ತು ಕಾಮನಕಟ್ಟಿಯ ಮಾದರಮಡ್ಡಿಯ ಶಹರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಮತಗಟ್ಟೆ ನಂ.211 ರಲ್ಲಿ ಸಖಿ ಮತಗಟ್ಟೆಯನ್ನು, ಮಾದನಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೂಮ-01 ರ ಮತಗಟ್ಟೆ ನಂ.01 ರಲ್ಲಿ ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಮುಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸಕಟ್ಟಡದಲ್ಲಿನ ಮತಗಟ್ಟೆ ನಂ.39 ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಜಿರಿಗವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.13 ಸಾಂಪ್ರದಾಯಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪಿಯ ಎಸ್.ಎಂ.ಕೃಷ್ಣ ನಗರದ ರಾಜೀವ ಗಾಂಧಿ ಕನ್ನಡ ಮತ್ತು ಉರ್ದು ಶಾಲೆಯ ರೂಮ ನಂ.01 ರಲ್ಲಿನ ಮತಗಟ್ಟೆ ನಂ.187 ಮತ್ತು ಕಾರವಾರ ರೋಡ ಸಿದ್ದರೂಢ ಹೈಸ್ಕೂಲ್ ಶಿಶುವಿಹಾರ ರೂಮ.04 ರಲ್ಲಿನ ಮತಗಟ್ಟೆ ನಂ.142 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಸೆಟಲ್‍ಮೆಂಟ್ ರೋಡ್ ಕನ್ನಡ ಗಂಡು ಮಕ್ಕಳ ಶಾಲೆಯ ರೂಮ ನಂ. 05 ರಲ್ಲಿನ ಮತಗಟ್ಟೆ ನಂ.56 ರಲ್ಲಿ ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ನೇಕಾರ ನಗರದ ಅಮರಜ್ಯೋತಿ ಶಾಲೆ ರೂಮ ನಂ.01 ರಲ್ಲಿನ ಮತಗಟ್ಟೆ ನಂ.199 ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿದ್ಯಾನಗರದ ಸಿದ್ದೇಶ್ವರ ಪಾರ್ಕ್‌ನ ವೆಲಂಗನಿ ವಿದ್ಯಾಸಂಸ್ಥೆ ಸೆಂಟ ಆಂಟೋನಿ ಐ.ಟಿ.ಐ ಕಟ್ಟಡ ರೂಮ ನಂ.04 ರಲ್ಲಿನ ಮತಗಟ್ಟೆ ನಂ.91 ರಲ್ಲಿ ಮತ್ತು ಶಿವನಗರ ಲೇಔಟ್ ಕೆ.ಇ.ಬಿ. ಹಿಂದುಗಡೆ ಕೇಶ್ವಪುರ ಸಹಸರ್ಜುನ ಪ್ರಿ ಪ್ರೈಮರಿ ಶಾಲೆಯ ರೂಮ ನಂ. 02 ರಲ್ಲಿನ ಮತಗಟ್ಟೆ ನಂ.127 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಉಣಕಲ್ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ ನಂ.57 ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಬೆಂಗೇರಿಯ ವೆಂಕಟೇಶ್ ಕಾಲನಿ ರೋಟರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ರೂಮ ನಂ.02ರಲ್ಲಿನ ಮತಗಟ್ಟೆ ನಂ.82 ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಅಂಬೇಡ್ಕರ್ ಕಾಲನಿ ಡಾ. ಅಂಬೇಡ್ಕರ್ ಸಮಾಜ ಮಂದಿರ ಚನ್ನಪೇಟ್ ರೋಡ್‍ನಲ್ಲಿನ ಮತಗಟ್ಟೆ ನಂ.248 ರಲ್ಲಿ ಸಾಂಪ್ರದಾಯಿಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಪಕ್ಷಿಮ ವಿಧಾನಸಭಾ ಮತಕ್ಷೇತ್ರ ವ್ಯಾಪಿಯ ವನಿತಾ ಸೇವಾ ಸಮಾಜದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದಲ್ಲಿನ ಮತಗಟ್ಟೆ ನಂ.81 ಮತ್ತು ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜು ಅಂಧ ಮಕ್ಕಳ ಶಾಲೆ ರೂಮ ನಂ.01 ರಲ್ಲಿ ಮತಗಟ್ಟೆ ನಂ.261 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಧಾರವಾಡದ ತೇಜಸ್ವಿನಿ ನಗರದ ತೇಜಸ್ವಿನಿ ಕನ್ನಡ ಪ್ರಾಥಮಿಕ ಶಾಲೆಯ ಸಭಾ ಭವನದ ಹೊಸ ಕಟ್ಟಡದಲ್ಲಿ ಮತಗಟ್ಟೆ ನಂ.187 ರಲ್ಲಿ ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಹಾಗೂ ಅಮರಗೋಳದ 5ನೇ ಕ್ರಾಸ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.118 ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಧಾರವಾಡದ ಪ್ರಜೆಂಟೇಶನ್ ಹೆಣ್ಣು ಮಕ್ಕಳ ಶಾಲೆಯ ರೂಮ ನಂ.03ರಲ್ಲಿನ ಮತಗಟ್ಟೆ ನಂ.15 ರಲ್ಲಿ ಸಾಂಪ್ರದಾಯಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಳ್ನಾವರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿನ ಮತಗಟ್ಟೆ ನಂ.48 ಮತ್ತು ಕಲಘಟಗಿ ಪಟ್ಟಣ ಪಂಚಾಯಿತಿ ಮತಗಟ್ಟೆ ನಂ.144 ರಲ್ಲಿ ಸಖಿ ಮತಗಟ್ಟೆಯನ್ನು, ಉಗ್ನಿಕೇರಿ ಸರಕಾರಿ ಪ್ರಾಥಮಿಕ ಶಾಲೆ ರೂಮ ನಂ.03 ರಲ್ಲಿನ ಮತಗಟ್ಟೆ ನಂ.126 ರಲ್ಲಿ ವಿಕಲಚೇತನರ (ಪಿಡಬ್ಲ್ಯೂಡಿ) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಹಾಗೂ ಜಿ. ಬಸವನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡದ ರೂಮ ನಂ.01ರಲ್ಲಿನ ಮತಗಟ್ಟೆ ನಂ.90 ರಲ್ಲಿ ಯುವ ಮತದಾರರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಬಿ.ಶಿಗಿಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೂಮ ನಂ.01 ರಲ್ಲಿನ ಮತಗಟ್ಟೆ ನಂ.105 ಮತ್ತು ಕಲಘಟಗಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರೂಮ ನಂ. 01ರಲ್ಲಿನ ಮತಗಟ್ಟೆ ನಂ.149 ಸಾಂಪ್ರದಾಯಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಆಕರ್ಷಕ ಚಿತ್ರಗಳು, ಅಂದವಾದ ಬಣ್ಣ ಮತ್ತು ಸುಂದರವಾದ ವಸ್ತುಗಳಿಂದ ಈ ಮತಗಟ್ಟೆಗಳನ್ನು ಶೃಂಗರಿಸಲಾಗುತ್ತಿದ್ದು, ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಯುವ ಮತಗಟ್ಟೆಗಳಲ್ಲಿ ಯುವಸಿಬ್ಬಂದಿ ಇರಲಿದ್ದಾರೆ. ಎಥ್ನಿಕ್ (ಸಾಂಪ್ರದಾಯಿಕ) ಮತಗಟ್ಟೆಗಳನ್ನು ಥೀಮ್ ಆಧಾರಿತ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications