ಸಿದ್ದು ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಮಾಡಿದ ಹಿರೇಮಠ
ಧಾರವಾಡ, ಜನವರಿ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಉತ್ತರ ವಲಯದ ಮಾಚೋಹಳ್ಳಿ ಸರ್ವೇ ನಂಬರ್ 81ರಲ್ಲಿ ಅರಣ್ಯ ಭೂಮಿಯನ್ನು ಸಂಘ-ಸಂಸ್ಥೆಗಳಿಗೆ 30 ವರ್ಷ ಗುತ್ತಿಗೆ ಕೊಟ್ಟಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪ ಮಾಡಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆ ಶಾಸಕ ಆನಂದ ಸಿಂಗ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುತ್ತಿರುವುದು ಸರಿಯಲ್ಲ. ಶ್ರೀರಾಮುಲು 100 ಕೋಟಿ ರುಪಾಯಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.

ಫೆಬ್ರವರಿ 24ರಿಂದ ಕೂಡಲಸಂಗಮದಲ್ಲಿ ಮಹಾಮೈತ್ರಿ ಮೊದಲ ಸಭೆ ನಡೆಯಲಿದೆ. ಚುನಾವಣೆ ಸಂಬಂಧ ಹೊಸದಾಗಿ ಹುಟ್ಟಿಕೊಂಡಿರುವ ಪಕ್ಷಗಳನ್ನು ಮೂಲೆಗೆ ಸೇರಿಸುವುದು ನಮ್ಮ ಉದ್ದೇಶ. ಫೆಬ್ರವರಿಯಲ್ಲಿ ಕೇಂದ್ರ ಸರಕಾರದಿಂದ ಮಂಡನೆಯಾಗಲಿರುವ ಬಜೆಟ್ ಉಪಯೋಗವಿಲ್ಲ. ಬಜೆಟ್ ಬಗ್ಗೆ ಮೋದಿಗೂ ಗೊತ್ತಿಲ್ಲ. ಅರುಣ್ ಜೇಟ್ಲಿಗೂ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications