ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ
ಧಾರವಾಡ, ಅಕ್ಟೋಬರ್ 27: ವೃದ್ಧ ಅಪ್ಪನನ್ನು ಸಾಕಲಾಗದ ಮಗನೊಬ್ಬ ಅಪ್ಪನನ್ನು ಮನೆಯಿಂದ ದೂರ ಕರೆದುಕೊಂಡು ಹೋಗಿ ನಡು ರಸ್ತೆಯಲ್ಲೇ ಬಿಟ್ಟು ಬಂದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಹೊರವಲಯದ ಗರಗ ಎಂಬಲ್ಲಿ ವೃದ್ಧನನ್ನು ಕಾರಿನಿಂದ ಇಳಿಸಿ, ವೇಗವಾಗಿ ಕಾರು ಚಲಾಯಿಸಿಕೊಂಡು ಹೊರಟು ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಯಾರೋ ವೃದ್ಧ ಡ್ರಾಪ್ ತೆಗೆದುಕೊಂಡಿರಬೇಕು ಎಂದುಕೊಂಡಿದ್ದಾರೆ ಆದರೆ ಯಾವಾಗ ವೃದ್ಧ ದಾರಿ ತಿಳಿಯದೇ ಒದ್ದಾಡುತ್ತಿದ್ದರೋ ಆಗ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವೃದ್ಧನನ್ನು ಕರೆದುಕೊಂಡು ಹೋಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ, ವೃದ್ಧನ ಹೆಸರು ವಿನ್ಸೆಟ್ ಚರ್ಚಿಲ್ ಎಂದೂ ಆತ ಬೆಂಗಳೂರಿನ ಮತ್ತಿಕೆರೆಯವನೆಂದು ಗೊತ್ತಾಗಿದೆ. ಅಲ್ಲದೆ ಆತನ ಮಗನೇ ಆತನನ್ನು ನಡು ರಸ್ತೆಯಲ್ಲಿ ಬಿಟ್ಟುಹೋಗಿದ್ದಾಗ್ಯೂ ವೃದ್ಧ ವಿನ್ಸೆಟ್ ಹೇಳಿಕೊಂಡಿದ್ದಾರೆ.

ವಿನ್ಸೆಟ್ ಅವರನ್ನು ತಪಾಸಣೆ ಮಾಡಿದ ವೈದ್ಯರು ವಿನ್ಸೆಟ್‌ಗೆ ಅಲ್‌ಜೈಮರ್ (ಮರೆವಿನ ಖಾಯಿಲೆ) ಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಆದರೆ ವಿನ್ಸೆಟ್‌ಗೆ ಸಾಮಾನ್ಯ ಸಂಗತಿಗಳಾದ, ಹೆಸರು, ವಿಳಾಸ ಇನ್ನಿತರೆ ವಿಷಯಗಳ ನೆನಪಿದೆ.
ಪ್ರಸ್ತುತ ವಿನ್ಸೆಟ್ ಆಸ್ಪತ್ರೆಯ ಬಳಿ ಇರುವ ಅನಾಥಾಶ್ರಮದಲ್ಲಿ ಇದ್ದಾರೆ. ಆದರೆ ಅವರು ಮನೆಗೆ ವಾಪಸ್ ಹೋಗಲು ಚಡಪಡಿಸುತ್ತಿದ್ದಾರೆ. ಮನೆಗೆ ಅಲ್ಲದಿದ್ದರೆ ಕನಿಷ್ಟ ಸಮೀಪದ ಕ್ಯಾಥೊಲಿಕ್ ಚರ್ಚಾಗದರೂ ನನ್ನನ್ನು ಬಿಡಿ ಅಲ್ಲೇ ಇರುತ್ತೇನೆ ಎಂದು ಅನಾಥಾಶ್ರಮದ ಸಿಬ್ಬಂದಿ ಬಳಿ ನಿನ್ಸೆಟ್ ಅಂಗಲಾಚುತ್ತಿದ್ದಾರೆ.
ಮಾನವೀಯ ಆಯಾಮದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಧಾರವಾಡ ಉಪನಗರ ಠಾಣೆ ಇನ್ಸ್‌ಪೆಕ್ಟರ್ ಬಸಪುರ ಅವರು ವಿನ್ಸೆಟ್ ಅವರ ಸಂಬಂಧಿಗಳ ಹುಡುಕಾಟಕ್ಕಾಗಿ ಮತ್ತಿಕೆರೆ ಠಾಣೆಗೆ ಮನವಿ ಮಾಡಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications