ಆಟಿಸಮ್ ಕಾಯಿಲೆ ಗುಣಪಡಿಸಿದ ಹುಬ್ಬಳ್ಳಿ ವೈದ್ಯರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 13: ಆ ಮಗು ಸಮಸ್ಯೆಗಳೊಂದಿಗೆ ಹುಟ್ಟಿಕೊಂಡಿತ್ತು. ತಾಯಿ ಆರೋಗ್ಯ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಮಗು ಅಳುತ್ತಿರಲಿಲ್ಲ. ಮಾತು ಬರುತ್ತಿರಲಿಲ್ಲ. ಮಗುವಿಗೆ ಏಕಾಗ್ರತೆ ಇರಲಿಲ್ಲ.

ಇಂಥ ಸಮಸ್ಯೆ ಅಂದರೆ ಆಟಿಸಮ್ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಬಾಳಲ್ಲಿ, ಆಕೆಯ ಪಾಲಕರ ಬಾಳಲ್ಲಿ ಇಂದು ಹೊಸ ಬೆಳಕು ಮೂಡಿದೆ. ಅದಕ್ಕೆ ಕಾರಣ ಮುಂಬಯಿಯ ನ್ಯುರೋಜಿನ್ ಬ್ರೈನ್ ಆಂಡ್ ಸ್ಪೈನ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಮತ್ತು ಹುಬ್ಬಳ್ಳಿಯ ವೈದ್ಯರು.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

ಆಟಿಸಮ್ ನಿಂದ್ ಬಳಲುತ್ತಿದ್ದ ಬೆಳಗಾವಿ ಜಿಲ್ಲೆ ನಿಪ್ಪಾಣಿ ಮೂಲದ ಮೂರೂವರೆ ವರ್ಷದ ಬಾಲಕಿ ಸಾದಿಯಾ ನದಾಫಗೆ ಸ್ಟೆಮ್ ಸೆಲ್ ಚಿಕಿತ್ಸೆ ನೀಡಿ ಆಕೆಯನ್ನು ರೋಗದಿಂದ ಹೊರಕ್ಕೆ ತರಲಾಗಿದೆ.

After the treatment Nippani girl cured from Autism

ಈ ಕುರಿತು ವೈದ್ಯೆ ಡಾ.ನಂದಿನಿ ಗೋಕುಲಾಚಂದ್ರನ್ ಬುಧವಾರ ಮಾಹಿತಿ ನೀಡಿ, ಆಟಿಸಮ್ ಸ್ಟೆಕ್ಟರ್ ಕಾಯಿಲೆಗೆ ಸಾದಿಯಾ ತುತ್ತಾಗಿದ್ದಳು. ನಮ್ಮ ಸಂಸ್ಥೆಯ ವೈದ್ಯರು ವಿಶಿಷ್ಟ ಥೆರಪಿ ಚಿಕಿತ್ಸೆ ನೀಡುವುದರ ಮೂಲಕ ಈಗ ಸಾದಿಯಾ ಚೇತರಿಸಿಕೊಂಡಿದ್ದಾಳೆ ಎಂದರು.[ಭಿಕ್ಷೆ ಬೇಡದ ಮಗಳನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ]

ಚಿಕಿತ್ಸೆ ಪಡೆದುಕೊಂಡ ಬಾಲಕಿ ಸಾದಿಯಾರನ್ನು ತೋರಿಸಿದ ಡಾ. ನಂದಿನಿ ಗೋಕುಲಾಚಂದ್ರನ್, ಈಕೆಯ ತಾಯಿ ಗರ್ಭಾವಸ್ಥೆಯಲ್ಲಿದ್ದಾಗ ಕೆಲವೊಂದು ರೋಗಳಿಗೆ ತುತ್ತಾಗಿ ಸಮಸ್ಯೆಯಿಂದ ಬಳಲುತ್ತಿದ್ದರು. ತುಂಬು ಗರ್ಭಿಣಿಯಿದ್ದಾಗಲೆ ಅವರಿಗೆ ವಿಪರೀತ ಜ್ವರ ಕಾಡುತ್ತಿತ್ತು. ಪರಿಣಾಮ ಮಗು ಜನಿಸಿದ ಮೇಲೆ ಅದು ಅಳುತ್ತಲೇ ಇರಲಿಲ್ಲ. ಇನ್ನು ಇದೇ ರೀತಿ ಮಗು ದೊಡ್ಡದಾಗುತ್ತ ಬಂದರೂ ಮಾತು ಬರುತ್ತಿರಲಿಲ್ಲ.['ಮೂಲವ್ಯಾಧಿ'ಗೆ ಯೋಗ ಮತ್ತು ನಿಸರ್ಗ ಚಿಕಿತ್ಸೆ]

ಆಟಿಸಮ್ ಎಂದರೇನು?

ತದನಂತರ ಸಾದಿಯಾ ಪೋಷಕರು ಕೊಲ್ಲಾಪುರದ ಕೆಲವೊಂದು ವೈದ್ಯರಲ್ಲಿ ತೋರಿಸಿದಾಗ ಅವರು ಆಟಿಸಮ್ ರೋಗ ಇರುವುದನ್ನು ಪತ್ತೆ ಹಚ್ಚಿದ್ದರು. ಅಲ್ಲಿಂದ ನಮ್ಮ ಸಂಸ್ಥೆಯ ಆಸ್ಪತೆಗೆ ದಾಖಲಿಸಲಾಯಿತು. ಆಗ ನಾನು ಮತ್ತು ಡಾ. ಅಲೋಕ ಶರ್ಮಾ ಇಬ್ಬರೂ ಚಿಕಿತ್ಸೆ ನೀಡಲಾರಂಭಿಸಿದೆವು. ಕ್ರಮೇಣ ಚೇತರಿಸಿಕೊಳ್ಳುತ್ತಿರುವ ಸಾದಿಯಾ ಈಗ ಎಲ್ಲವನ್ನೂ ಗಮನಿಸುತ್ತಾಳೆ ಮಾತನಾಡುತ್ತಾಳೆ ಮತ್ತು ಎಲ್ಲ ಮಕ್ಕಳಂತೆ ಓಡಾಡುತ್ತಿದ್ದಾಳೆ ಎಂದರು.

ಮೊದಲು ಯಾವುದೇ ಏಕಾಗ್ರತೆ ಇರಲಿಲ್ಲ, ಹೇಳಿದ್ದು ಕೇಳಿಕೊಂಡು ತಿಳಿದುಕೊಳ್ಳುತ್ತಿರಲಿಲ್ಲ ಮತ್ತು ಮಾತೇ ಬರುತ್ತಿರಲಿಲ್ಲ. ಈಗ ತಮ್ಮ ಸಂತಸಕ್ಕೆ ಪಾರವೇ ಇಲ್ಲವೆಂದು ಸಾದಿಯಾ ತಂದೆ-ತಾಯಿ ಹೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the treatment Nippani girl Sadhiya Nadhafa completely cured from Autism. Autism spectrum disorder (ASD) and autism are both general terms for a group of complex disorders of brain development. These disorders are characterized, in varying degrees, by difficulties in social interaction, verbal and nonverbal communication and repetitive behaviors.
Please Wait while comments are loading...