'ಕಂದೀಲು' ಕಾದಂಬರಿ ಕುರಿತು ಧಾರವಾಡದ ರಂಗಾಯಣದಲ್ಲೊಂದು ಚರ್ಚೆ
ಧಾರವಾಡ, ಡಿಸೆಂಬರ್ 27: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯು ಧಾರವಾಡದ ರಂಗಾಯಣದಲ್ಲಿ ಸೋಮು ರೆಡ್ಡಿ ಅವರ ಕಂದೀಲು ಕಾದಂಬರಿಯ ಬಗ್ಗೆ 'ಅನುಸಂಧಾನ' ಚರ್ಚೆಯನ್ನು ಹಮ್ಮಿಕೊಂಡಿದೆ.
ಡಿಸೆಂಬರ್ 28ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮನ್ವಯ ಭವನದಲ್ಲಿ ಆಯೋಜಿಸಲಾಗಿದೆ.
ಲೇಖಕರಾದ ಸೋಮು ರೆಡ್ಡಿ, ಡಾ. ಬಾಳಾ ಸಾಹೇಬ ಲೋಕಾಪುರ, ಡಾ. ಯಲ್ಲಪ್ಪ ಭಜಂತ್ರಿ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ್ರ, ಚಂದ್ರಶೇಖರ ಮಾಡಲಗೇರಿ ಆಗಮಿಸಲಿದ್ದಾರೆ.
ಸಂವಾದದಲ್ಲಿ ಆನಂದ ನುಚ್ಚಿನ, ಪಾಪು ಗುರು, ಉಷಾ ಬೆಳಟ್ಟಿ, ಸಿಎಂ ಚೆನ್ನಬಸಪ್ಪ, ರಾಜು ದರ್ಗಾದವರ, ಪತ್ರು ಬಾರ್ಕಿ, ಮಾಧವಿ ಕುಲಕರ್ಣಿ, ಜ್ಯೋತಿ ಚಂದ್ರಶೇಖರ, ಆರ್‌ಎಂ ಗೋಗೇರಿ, ಪ್ರತಿಭಾ ಪಾಟೀಲ್ ಶ್ರೀಧರ ಮರ್ಡೇಕರ್ ವೀಣಾ, ಜ್ಯೋತಿ ಚಂದ್ರಶೇಖರ, ಪ್ರೇಮಾ ಭಜಂತ್ರಿ, ಗಣೇಶ ಮೋಟೆಣ್ಣವರ, ಸವಿತಾ ಲಿಂಗಾರೆಡ್ಡಿ, ರಾಜಶೇಖರ ಮಡಿವಾಳರ, ಅನಿಲ್ ಹುಲಮನಿ, ಉಳವಪ್ಪ ಸಲಕಿ, ವೀರಣ್ಣ ಹೂಲಿ, ನೇತ್ರಾ ಸಿದ್ದು ಸೇರಿದಂತೆ ಹಲವು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.