ಚಾಕು ಇರಿತಕ್ಕೆ ಬಾಲಕ ಸಾವು, ಆತಂಕದಲ್ಲಿ ಹುಬ್ಬಳ್ಳಿ ಜನತೆ

ಹುಬ್ಬಳ್ಳಿ, ಡಿಸೆಂಬರ್, 17: ಕಳೆದ ಕೆಲವು ದಿನಗಳ ಹಿಂದೆ ಬಾಲಕರಿಬ್ಬರನ್ನು ಅಪಹರಿಸಿ ಕೊಲೆಗೈದ ಘಟನೆ ಮರೆಯುವ ಮುನ್ನವೇ ಛೋಟಾ ಮುಂಬಯಿ ಎಂದು ಕರೆಯುವ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಫತೇಷಾ ನಜೀರ್ಹುಸೇನ್ ಬೇಪಾರಿ (17) ಎಂಬ ಬಾಲಕನಿಗೆ ಕೆಲವು ದುಷ್ಕರ್ಮಿಗಳು ನಗರದ ಸನಾ ಕಾಲೇಜು ಬಳಿ ಮಂಗಳವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.[ಮೂವರು ಶಾಲಾ ಮಕ್ಕಳನ್ನು ಕೊಂದ ಪಾಪಿ]

A 17 year old boy found murdered in Hubballi

ಭೈರಿದೇವರಕೊಪ್ಪ ಗ್ರಾಮದ ಫತೇಷಾ ನಜೀರ್ಹುಸೇನ್ ಬೇಪಾರಿ ಸನಾ ಕಾಲೇಜ್ ಸಮೀಪದಲ್ಲಿರುವ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಎಂದಿನಂತೆ ಮಂಗಳವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದನು.

ಆಗ ಬಂದ ದುಷ್ಕರ್ಮಿಗಳು ಈತನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆಮಾಡಿ ಶವವನ್ನು ಈಶ್ವರ ನಗರ ಸಮೀಪದ ಸೇತುವೆ ಹತ್ತಿರ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವ ಆದ ಕಾರಣ ಫತೇಷಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.[ಮಂಡ್ಯ: ಗ್ರಾಮ ಸಹಾಯಕನ ಹತ್ಯೆ, ಪೊದೆಯಲ್ಲಿ ಸಿಕ್ಕ ಶವ]

ಈತನ ಕೊಲೆ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಬಾಲಕನ ತಂದೆ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+