ದಾವಣಗೆರೆ: 1-10ನೇ ತರಗತಿ ಮಾನ್ಯತೆ ರದ್ದು

ದಾವಣಗೆರೆ, ಏಪ್ರಿಲ್‌, 27: ರಾಜ್ಯದಲ್ಲಿ ಯಾವುದೇ ಶಾಲೆಯಲ್ಲಾಗಲಿ ಸಮಸ್ಯೆ ಕಂಡುಬಂದರೆ, ಕ್ರಮ ಕೈಗೊಳ್ಳುವ ಅಧಿಕಾರ ಶಿಕ್ಷಣ ಇಲಾಖೆಗೆ ಇರುತ್ತದೆ. ಇದೀಗ ದಾವಣಗೆರೆ ಜಿಲ್ಲೆಯೊಂದ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಹಿನ್ನೆಲೆ 1-10ನೇ ತರಗತಿ ಮಾನ್ಯತೆ ರದ್ದುಪಡಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಅಗತ್ಯ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ 1-10ನೇ ತರಗತಿ ಮಾನ್ಯತೆ ರದ್ದು ಮಾಡಲಾಗಿದೆ.

This school s 1st-10th Classes accreditation has been cancelled in Honnali

ಯಾವುದೇ ಮೂಲಸೌಕರ್ಯ ಇಲ್ಲದೆ, ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘಿಸಿರುವ ಕಾರಣ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1-10ನೇ ತರಗತಿಗೆ ನೀಡಿದ್ದ ಮಾನ್ಯತೆಯನ್ನು ಡಿಡಿಪಿಐ ಹಿಂಪಡೆದಿದ್ದಾರೆ. ಅಲ್ಲದೆ, ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಟಿ. ಬಿಇಒ ನಿಂಗಪ್ಪ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನೋಟಿಸ್ ಜಾರಿಗೆ ಶಾಲಾ ಆಡಳಿತ ಮಂಡಳಿ ಉತ್ತರಿಸದ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪೀಠೋಪಕರಣ, ಮೈದಾನ, ಶೌಚಾಲಯ, ಸುರಕ್ಷತಾ ಕ್ರಮ ಇಲ್ಲ. ಆದ್ದರಿಂದ ಈ ಶಾಲೆಯಲ್ಲಿನ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವಂತೆ ಶಿಕ್ಷಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಶಾಲೆಯಲ್ಲಿ ಅಗ್ನಿಸುರಕ್ಷಾ, ಗ್ರಂಥಾಲಯ, ಶೌಚಾಲಯಗಳ , ಪೀಠೋಪಕರಣಗಳ ವ್ಯವಸ್ಥೆಯಿಲ್ಲ. ಮಕ್ಕಳ ಸುರಕ್ಷತೆಗೆ ಗ್ರಿಲ್ಸ್ ಅಳವಡಿಕೆ ಮಾಡಿಲ್ಲ. ಆಟದ ಮೈದಾನ ಹಾಗೂ ಕಾಂಪೌಂಡ್ ಇನ್ನಿತರೆ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಈ ಸೌಲಭ್ಯಗಳನ್ನು ನೀಡದ ಹಿನ್ನೆಲೆ ಈ ಶಾಲೆಯ ಮಾನ್ಯತೆ ಹಿಂಪಡೆಯಲಾಗಿದೆ ಎಂದು ಹೇಳಿದರು.

ಈಗಾಗಲೇ ಈ ಬಗ್ಗೆ ಅನೇಕ ದೂರುಗಳು ಬಂದಿವೆ. ಆದ್ದರಿಂದ ಶಾಲೆಗೆ ಭೇಟಿ ನೀಡಿ, ವರದಿ ನೀಡುವಂತೆಯೂ ಡಿಡಿಪಿಐ ಕಚೇರಿಯಿಂದ ಆದೇಶ ಆಗಿತ್ತು. ಅದರ ಅನ್ವಯ ನಮ್ಮ ಕಚೇರಿಯಿಂದಲೂ ಪರಿಶೀಲಿಸಿ ಡಿಡಿಪಿಐ ಕಚೇರಿಗೆ ವರದಿ ನೀಡಿದ್ದೇವೆ. ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಆಡಳಿತ ಮಂಡಳಿ ಉತ್ತರಿಸಿರಲಿಲ್ಲ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮತ್ತು ಪೋಷಕರ ಹಿತದೃಷ್ಟಿಯಿಂದ ನಾವು ಶಾಲೆ ಆರಂಭಕ್ಕೂ ಮೊದಲೇ ಪೋಷಕರಲ್ಲಿ ಮನವಿ ಮಾಡುತ್ತಿದ್ದೇವೆ. ಸದರಿ ಶಾಲೆಯಲ್ಲಿದ್ದ ಮಕ್ಕಳ ದಾಖಲೆಗಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸೇರಿಸಿರುತ್ತೇವೆ. ಅಲ್ಲಿ ತಮ್ಮ ಮಕ್ಕಳ ದಾಖಲೆಗಳನ್ನು ಪಡೆದು, ಬೇರೆ ಶಾಲೆಗಳಿಗೆ ತಮ್ಮ ತಮ್ಮ ಮಕ್ಕಳನ್ನು ದಾಖಲು ಮಾಡಬಹುದೆಂದು ತಿಳಿಸಿದರು.

ಇದೀಗ ಈ ಶಾಲೆಯಲ್ಲಿ 1-10ನೇ ತರಗತಿವರೆಗೆ 259 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳ ದಾಖಲೆಗಳು ಬೇಕಾದರೆ, ಸ್ಥಳಿಯ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತದೆ. ಅಲ್ಲಿಗೆ ಹೋಗಿ ನಿಮ್ಮ ಮಕ್ಕಳ ದಾಖಲೆ ಪಡೆಯಬಹುದೆಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+