ಭಯೋತ್ಪಾದಕನ ರೀತಿ ನನ್ನನ್ನು ಬಂಧಿಸಿ ದಾವಣಗೆರೆಗೆ ಬಿಟ್ಟು ಹೋಗಿದ್ದು ಖಂಡನೀಯ-ಪ್ರಮೋದ್ ಮುತಾಲಿಕ್
ದಾವಣಗೆರೆ, ಅಕ್ಟೋಬರ್ 18: ಶಿವಮೊಗ್ಗದ ರಾಗಿ ಗುಡ್ಡಕ್ಕೆ ಭೇಟಿ ನೀಡಲು ಪೊಲೀಸರು ಅನುಮತಿ ನೀಡಲಿಲ್ಲ. ತೀರ್ಥಹಳ್ಳಿ ತಾಲೂಕಿನ ಮಾಸ್ತಿಕಟ್ಟೆ ಬಳಿ ಇಂದು ಬೆಳಿಗ್ಗೆ ಸುಮಾರು 50 ಪೊಲೀಸರು ಹಾಗೂ ಜೀಪು ತಂದು ಬಂಧನ ಮಾಡಿದರು.
ಭಯೋತ್ಪಾದಕರನ್ನು ಬಂಧಿಸುವ ರೀತಿ ನನ್ನನ್ನು ಬಂಧಿಸಿ ದಾವಣಗೆರೆಗೆ ಬಿಟ್ಟು ಹೋಗಿದ್ದು ಖಂಡನೀಯ. ಶಿವಮೊಗ್ಗದ ರಾಗಿ ಗುಡ್ಡಕ್ಕೆ 15 ದಿನಗಳ ಕಾಲ ನಿರ್ಬಂಧ ಹೇರಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಶ್ನಿಸುತ್ತೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಭಯೋತ್ಪಾದಕರಿಗೆ ತಂದೆ ನೋಡಲು, ಮದುವೆಗೆ ಹಾಜರಾಗಲು ಜಾಮೀನಿನ ಮೇಲೆ ಅವಕಾಶ ಕೊಡಲಾಗುತ್ತದೆ. ನಾನು ರಾಗಿಗುಡ್ಡಕ್ಕೆ ತೆರಳಿ ಹಿಂದೂಗಳ ಮೇಲೆ ಆಗಿರುವ ಹಲ್ಲೆ ಖಂಡಿಸಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೆ. ನಾನೇನೂ ಬಾಂಬ್ ಹಾಕುತ್ತಿರಲಿಲ್ಲ. ಮಾರಕಾಸ್ತ್ರ ಹೊಂದಿರಲಿಲ್ಲ. ಮಂಗಳೂರಿನಿಂದ ಬಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುವ ಮಾರ್ಗ ಮಧ್ಯೆ ಬಂಧನ ಮಾಡಿದ್ದು ಖಂಡನೀಯ ಎಂದು ಹೇಳಿದರು.
ನನ್ನ ಬಂಧನ ಹಿಂದೂ ವಿರೋಧಿ ಕ್ರಮ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದಾಗಿನಿಂದಲೂ ಹಿಂದೂ ವಿರೋಧಿ ಕ್ರಮ ಅನುಸರಿಸುತ್ತಿದೆ. ಏಳು ಜಿಲ್ಲೆಗಳ ಪಿಎಫ್ ಐ ಕಾರ್ಯಕರ್ತರ ಕೇಸ್ ಹಿಂಪಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಲು ಚರ್ಚೆ ನಡೆಸುತ್ತಿದೆ. ಇದೊಂದು ದೇಶ ದ್ರೋಹ ಹಾಗೂ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಡುವ ಕೆಲಸ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಬಾರದು ಎಂದು ಒತ್ತಾಯಿಸಿದರು.
ಭಯೋತ್ಪಾದಕರು ಎಲ್ಲಿ ಬೇಕಾದರೂ ಓಡಾಡಬಹುದು. ಆದರೆ ಹಿಂದೂ ಮುಖಂಡರು ಭೇಟಿ ನೀಡಲು ಮಾತ್ರ ಅವಕಾಶ ಕೊಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹದಿನೈದು ದಿನ ನಾನು ಶಿವಮೊಗ್ಗದ ರಾಗಿಗುಡ್ಡಕ್ಕೆ ಹೋಗದಂತೆ
ನಿರ್ಬಂಧ ಹೇರಲಾಗಿದೆ.

ಔರಂಗಜೇಬ್ ಆದರ್ಶ ಬೆಳೆಸಿಕೊಳ್ಳುವಂತಹ ಮಾನಸಿಕತೆ ಬೆಳೆಯುತ್ತಿರುವುದು ವಿಪರ್ಯಾಸ
ಔರಂಗಜೇಬ್ ರಾಗಿಗುಡ್ಡದಲ್ಲಿ ಹೊರಗೆ ಬಂದಿದ್ದೇನೆ. 37 ಬಾರಿ ಶರೀರದ ಅಂಗ ಕತ್ತರಿಸಿ ಶಿವಾಜಿ ಮಗನ ಕೊಂದ ಔರಂಗಜೇಬ್ ಕಟೌಟ್ ಹೊರಬಂದಿದೆ. ತಂದೆ ಕೊಂದವನು, 5 ಸಾವಿರಕ್ಕೂ ಹೆಚ್ಚು ದೇವಸ್ಥಾನ ಧ್ವಂಸ ಮಾಡಿದವನು ಮುಸ್ಲಿಂರಿಗೆ ಹೀರೋ ಆಗಿದ್ದಾನೆ. ಔರಂಗಜೇಬು ಆದರ್ಶ ಬೆಳೆಸಿಕೊಳ್ಳುವಂಥ ಮಾನಸಿಕತೆ ಬೆಳೆಯುತ್ತಿರುವುದು ವಿಪರ್ಯಾಸದ ಸಂಗತಿ. ಕಟೌಟ್ ಹಾಕಿದವರ ಮೇಲೆ ಕ್ರಮ ಇಲ್ಲ. ಸಾಂತ್ವನ ಹೇಳಲು ಹೊರಟವರ ಮೇಲೆ ಕ್ರಮ ಯಾಕೆ ಎಂದು ಪ್ರಶ್ನಿಸಿದರು.
ಔರಂಗಜೇಬ್ ಘೋರಿಯಿಂದ ಹೊರಬಂದು ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ಮಾನಸಿಕತೆ ಗಟ್ಟಿ ಮಾಡ್ತಿದ್ದಾನೆ. ಬಾಬರ್, ಲಾಡೆನ್ ನಂಥವರು ಸಮಾಜ ನುಂಗಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿರವುದು ಖಂಡನೀಯ. ರಾಗುಗುಡ್ಡದಲ್ಲಿ ಎಸ್ಪಿ ಮೇಲೆ ದಾಳಿ ಮಾಡಲಾಗಿದೆ. ಹಾಗಾದರೆ ಎಲ್ಲಿದೆ ಸುರಕ್ಷತೆ ಇದೆ ಎಂದು ಹೇಳಿದ ಅವರು, ನಾನು ಹೈಕೋರ್ಟ್ ಮೂಲಕ ಸ್ಟೇ ತಂದು ರಾಗಿಗುಡ್ಡಕ್ಕೆ ಹೋಗುತ್ತೇನೆ. ನಾನು ಕೋಮುದ್ರೇಕ, ಗಲಾಟೆ, ದೊಂಬಿ ಮಾಡುವಂಥನಲ್ಲ ಎಂದು ತಿಳಿಸಿದರು.
ನಾನು ಸಾವು ಗೆದ್ದಿದ್ದೇನೆ
ನಾನು ಸಾವು ಗೆದ್ದಿದ್ದೇನೆ. ದುಷ್ಟ ಶಕ್ತಿಗಳಿಗೆ ಹೆದರಲ್ಲ. ನಾನು ನನ್ನ ಹೋರಾಟ ಮುಂದುವರಿಸುತ್ತೇನೆ. ಬಸ್ ನಲ್ಲಿ ಬರುತ್ತಿದ್ದೆ. ನಾನು ಯಾವುದಕ್ಕೂ ಅಂಜುವುದಿಲ್ಲ. ಸಾವು ಯಾವಾಗ ಹೇಗೆ ಬೇಕಾದರೂ ಬರಬಹುದು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ್ದೆ. ನಾನು ಮೋದಿ ವಿರುದ್ಧ ಇಲ್ಲ. ಹಿಂದುತ್ವ ಉಳಿಯಬೇಕಾದರೆ ಮೋದಿ ಅವರಂಥವರು ಕೇಂದ್ರದಲ್ಲಿ ಅಧಿಕಾರದಲ್ಲಿರಬೇಕು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹೀಗೆ ಮಾಡಲಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆಯಾದ ನಾಲ್ಕು ದಿನಗಳ ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದಾಗಲೂ ತಡೆದಿದ್ದರು. ಈಗ ಮತ್ತೆ ಮರುಕಳಿಸಿದೆ. ಹಾಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳೂ ಒಂದೇ ಎಂದು ಕಿಡಿಕಾರಿದರು.
ದೇಶಕ್ಕೆ ಮೋದಿ ಬೇಕು. ಅನಿವಾರ್ಯ, ಅವಶ್ಯಕತೆ ಕೂಡ
ನನಗೆ ಗೋವಾಕ್ಕೆ ಹೋಗಲು ಅನುಮತಿ ಇಲ್ಲ. ಕಳೆದ ಎಂಟು ವರ್ಷಗಳಿಂದಲೂ ನಿರ್ಬಂಧ ಹೇರಲಾಗಿದೆ. ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ದೇಶಕ್ಕೆ ಮೋದಿ ಬೇಕು. ಅನಿವಾರ್ಯ, ಅವಶ್ಯಕತೆ ಕೂಡ ಇದೆ ಎಂದು ಮುತಾಲಿಕ್ ಹೇಳಿದರು.
2024ರ ಲೋಕಸಭೆ ಚುನಾವಣೆಗೆ ಉಳಿದಿರುವುದು ಇನ್ನು ಕೆಲವೇ ತಿಂಗಳುಗಳು ಮಾತ್ರ. ಈಗಾಗಲೇ ಬಿಜೆಪಿಯು ರಣಕಹಳೆ ಮೊಳಗಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬೆಳವಣಿಗೆ ಮಧ್ಯೆ, ಶ್ರೀರಾಮಸೇನೆ ರಾಷ್ಟ್ರೀಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಮೋದಿ ಗೆಲ್ಲಿಸಿ ದೇಶ ಉಳಿಸಿ ಅಭಿಯಾನ ಆಯೋಜಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ದಾವಣಗೆರೆಯಲ್ಲಿ ಈ ವಿಷಯ ತಿಳಿಸಿದ ಪ್ರಮೋದ್ ಮುತಾಲಿಕ್, ನವೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ಈ ಅಭಿಯಾನ ನಡೆಸುವ ಗುರಿ ಹೊಂದಲಾಗಿದೆ. ಈಗಾಗಲೇ ಸಾಧು ಸಂತರು, ವಿವಿಧ ಮಠಗಳ ಮಠಾಧೀಶರು ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಪ್ರಖರ ಹಿಂದುತ್ವವಾದಿಗಳ ಸಂಪರ್ಕ ಮಾಡಲಾಗಿದ್ದು, ಅವರ ಒಪ್ಪಿಗೆಗೆ ಕಾಯಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಳಗಾವಿಯಿಂದ ಈ ಆಂದೋಲನ ಶುರು ಆಗಲಿದೆ ಎಂದು ತಿಳಿಸಿದರು.
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪ್ರವಾಸ ನಡೆಸುತ್ತೇನೆ. ಸಭೆ, ಸಮಾರಂಭ, ರ್ಯಾಲಿ ನಡೆಸಲಾಗುವುದು. ಸ್ಥಳೀಯರ ಜೊತೆಗೆ ಚರ್ಚೆ, ಸಂವಾದ ನಡೆಸುತ್ತೇವೆ. ಬೈಕ್ ರ್ಯಾಲಿ, ಪಾದಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಯಕತ್ವ ಬೇಕು. ಅಭಿವೃದ್ಧಿ, ದೇಶ ಸುರಕ್ಷಿತವಾಗಿರಲು ಮೋದಿ ಅವರಂಥವರು ಬೇಕೇ ಬೇಕು. ಹಿಂದುತ್ವ ಉಳಿಯಬೇಕು. ಹಿಂದೂಗಳಿಗೆ ದೇಶದಲ್ಲಿ ರಕ್ಷಣೆ ಸಿಗಬೇಕಾದರೆ ಮೋದಿ ಅವರಂಥವರಿಂದ ಮಾತ್ರ ಸಾಧ್ಯ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ. ಭ್ರಷ್ಟಾಚಾರ, ಭ್ರಷ್ಟ ಆಡಳಿತಕ್ಕೆ ರಾಜ್ಯದ ಜನರು ಕೇವಲ 66 ಸ್ಥಾನಗಳನ್ನು ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಎಂಬುದೇ ಇಲ್ಲ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಪರಶುರಾಮ್, ರಾಹುಲ್ ಬಿ. ಜಿ., ಅನಿಲ್, ಶ್ರೀಧರ್, ಸಾಗರ್, ಮಧುಸೂದನ್, ವಿನಯ್ ಮತ್ತಿತರರು ಹಾಜರಿದ್ದರು.
-
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications