• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆ.7ರಿಂದ ಏಷ್ಯಾದ ಎರಡನೇ ದೊಡ್ಡಕೆರೆ -ದಾವಣಗೆರೆಯ ಸೂಳೆಕೆರೆ ಸರ್ವೆ ಆರಂಭ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಆಗಸ್ಟ್ 31: ಏಷ್ಯಾದಲ್ಲೇ ಎರಡನೇ ದೊಡ್ಡಕೆರೆ ಎಂದು ಕರೆಸಿಕೊಂಡ ಸೂಳೆಕೆರೆ ಸರ್ವೆ ಕಾರ್ಯವು ಇದೇ ಸೆ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. "ಸತತ ಎರಡು ವರ್ಷಗಳ ಹೋರಾಟಕ್ಕೆ ಸ್ಪಂದನೆ ದೊರೆತಿದ್ದು, ಸರ್ವೇ ಕಾರ್ಯಕ್ಕೆ ಚಾಲನೆ ಸಿಗಲಿದೆ" ಎಂದು ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಅಧ್ಯಕ್ಷರಾದ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿಗಳು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಒತ್ತುವರಿಯಾಗಿರುವ ಜಾಗವನ್ನು ಸರ್ವೆ ಮಾಡುವ ಮೂಲಕ ತೆರವುಗೊಳಿಸಬೇಕೆಂದು ಕಳೆದ 2 ವರ್ಷಗಳಿಂದಲೂ ಸಂಘದ ಸದಸ್ಯರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ನೀರಾವರಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ" ಎಂದು ತಿಳಿಸಿದರು.

ಕೊಡಿಗೇಹಳ್ಳಿ ಕೆರೆಗೆ ಹೊಸ ಜೀವ ನೀಡಿದ 'ಶೆಲ್ ಇಂಡಿಯಾ'

"ಪ್ರಾಕೃತಿಕ ಸಂಪತ್ತಾಗಿರುವ ಸೂಳೆಕೆರೆಯನ್ನು ಉಳಿಸಬೇಕಿದೆ. ದಾವಣಗೆರೆಯ ಅಕ್ಕಪಕ್ಕದ ಜಿಲ್ಲೆಗಳು ಕೂಡ ಈ ಕೆರೆ ನೀರು ಬಳಸುತ್ತಿದ್ದಾರೆ. ಸುಮಾರು 6,460 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯ ಭಾಗ ಒತ್ತುವರಿಯಾಗಿದೆ. ಸುಮಾರು 14 ಗ್ರಾಮಗಳು ಒತ್ತುವರಿ ಮಾಡಿಕೊಂಡಿವೆ. ಸರ್ವೆ ಕಾರ್ಯ ನಡೆದಾಗ ಒತ್ತುವರಿ ತೆರವುಗೊಳಿಸಲಾಗುವುದು. ಈ ಕಾರ್ಯವನ್ನು ಸರ್ಕಾರ ಮಾಡಬೇಕಿದೆ" ಎಂದರು.

"ಮುಂದಿನ ಬೇಸಿಗೆ ವೇಳೆಗೆ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕಿದೆ. ಆದ್ದರಿಂದ ಶಾಶ್ವತವಾಗಿ ಉಳಿಯುವಂತಹ ಸರ್ವೆ ಕಾರ್ಯ ಮಾಡುವ ಅವಶ್ಯಕತೆಯಿದೆ. ಇದರಿಂದ ಕೆರೆಯ ನೀರು ರಕ್ಷಣೆಯಾಗುತ್ತದೆ. 11ನೇ ಶತಮಾನದಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಶತಮಾನಗಳೇ ಕಳೆದರೂ ಹೂಳು ತೆಗೆಯಲಾಗಿಲ್ಲ. ಸರ್ವೆ ಕಾರ್ಯ ಮುಗಿದ ಬಳಿಕ ಹಂತಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಪ್ರಸ್ತುತ ಕೆರೆಯಲ್ಲಿ 1.6 ಟಿಎಂಸಿ ಶೇಖರಣಾ ಸಾಮರ್ಥ್ಯವಿದ್ದು, ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ರೂಪರೇಷಗಳನ್ನು ರಚಿಸಿ ಸ್ವಚ್ಛ ಶಾಂತಿ ಸಾಗರವನ್ನು ರೂಪಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

English summary
The survey of the Sulikere, which is called as the second largest lake in Asia, will take place at 10.30 am on September 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X