ತಂದೆಯ ಮರ್ಮಾಂಗಕ್ಕೆ ಇರುವೆ ಬಿಟ್ಟು ಹಿಂಸಿಸಿದ ಮಗ

Posted By:
Subscribe to Oneindia Kannada

ದಾವಣಗೆರೆ. ಜನವರಿ 19: ಆಸ್ತಿಗಾಗಿ ಮಗ ಸೊಸೆ ಸೇರಿ ವೃದ್ಧ ತಂದೆಯ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ದಾವಣಗೆರೆಯ ಮಲೇಬೆನ್ನೂರಿನಲ್ಲಿ ಜರುಗಿದೆ.

ಮಗ ನವೀನ್ ಮತ್ತು ಸೊಸೆ ಸೌಮ್ಯ ಇವರೇ ಕೃತ್ಯ ಎಸಗಿದವರು. ಅಪಾರ ಆಸ್ತಿಯನ್ನು ಹೊಂದಿದ್ದ ತಂದೆಗೆ ತಿಂಗಳಿಗೆ ಹೆಚ್ಚು ಪ್ರಮಾಣದಲ್ಲಿ ವೃದ್ಧಾಪ್ಯ ವೇತವೂ ಬರುತ್ತಿತ್ತು. ಆದರೆ ಅವರಿಗೆ ಆರೋಗ್ಯದಲ್ಲಿ ತೊಂದರೆ ಇದ್ದ ಕಾರಣ ಮನೆಯಲ್ಲೆ ಇರುತ್ತಿದ್ದರು ಹೀಗಾಗಿ ತಂದೆಯ ವಿರುದ್ಧ ಪಿತೂರಿ ನಡೆಸಿದ ಮಗ ಮತ್ತು ಸೊಸೆ ಆಸ್ತಿ ಕಬಳಿಸಲು ತಂದೆಯ ಮರ್ಮಾಂಗಕ್ಕೆ ಇರುವೆಯನ್ನು ಬಿಟ್ಟು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.[ಪೋಷಕರನ್ನು ಹೆದರಿಸಲು ಹೋಗಿ ಪ್ರಾಣತೆತ್ತ ವಿದ್ಯಾರ್ಥಿನಿ]

Son and his wife cruelly Leave the ants in his old father private place

ಹಿಂಸೆ ತಾಳಲಾರದೆ ಮನೆಯಿಂದ ಹೊರಬಂದು ರಿಂಗ್ ರೋಡಿನಲ್ಲಿ ಬರುವಾಗ ಕುಸಿದು ಬಿದ್ದಿದ್ದಾರೆ. ಕಷ್ಟ ಪಡುತ್ತಿದ್ದ ವೃದ್ಧರನ್ನು ನೋಡಿ ಕನಿಕರಗೊಂಡು ಬಿಎಸ್ಎನ್ಎಲ್ ರಾಜಣ್ಣ ಎನ್ನುವವರು ಕರೆದುಕೊಂಡು ಬಂದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪ್ರಸ್ತುತ ವೃದ್ಧರು ಇನ್ನು ನನ್ನ ಜೀವನ ನಾನೇ ನೋಡಿಕೊಳ್ಳುತ್ತೇನೆ ನನಗೆ ಮಗ ,ಸೊಸೆ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The son and his wife brutally violence Leave the ant his old father private place. Escaped with the help of another their aging father. This act has been attributed to assets.
Please Wait while comments are loading...