ನಾಡಗೀತೆ ಹಾಡುವಾಗ ಬೀಡಾ ಜಗಿದು, ಪಂಚೆ ಸರಿಮಾಡಿಕೊಂಡ ಸಿಎಂ
Recommended Video

ನಾಡಗೀತೆ ಹಾಡುವಾಗ ಬೀಡಾ ಜಗಿದು, ಪಂಚೆ ಸರಿಮಾಡಿಕೊಂಡ ಸಿಎಂ | Oneindia Kannada
ದಾವಣಗೆರೆ, ಮಾರ್ಚ್ 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಗೀತೆಗೆ ಅಗೌರವ ತೋರಿದ ಘಟನೆ ನಿನ್ನೆ (ಮಾರ್ಚ್ 14) ದಾವಣಗೆರೆಯಲ್ಲಿ ನಡೆದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಿನ್ನೆ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ನಾಡಗೀತೆ ಮೊಳಗುವಾಗ ಮುಖ್ಯಮಂತ್ರಿ ಅವರು ಬೀಡಾ ಜಗಿಯುತ್ತಾ, ಬಾಯಿ ಚಪ್ಪರಿಸುತ್ತಾ, ಪಂಚೆ ಸರಿಮಾಡಿಕೊಳ್ಳುತ್ತಾ ನಿಂತಿದ್ದರು.
ಮುಖ್ಯಮಂತ್ರಿಗಳ ಈ ವರ್ತನೆಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರು ನಾಡಗೀತೆಗೆ ಅಗೌರವ ತೋರಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿ ಸಿದ್ದರಾಮಯ್ಯ ವಿರೋಧಿಗಳು ಟೀಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನಾಡಗೀತೆ ಮೊಳಗುವಾಗ ಸಿದ್ದರಾಮಯ್ಯ ಅವರು ಗೌರವ ಸೂಚಿಸಲೆಂದೇ ಎದ್ದುನಿಂತಿದ್ದರಾದರೂ ಬಾಯಲ್ಲಿನ ಬೀಡಾ ಜಗಿಯುತ್ತಾ, ಪಂಚೆ ಸರಿಪಡಿಸಿಕೊಳ್ಳುತ್ತಾ ಸಮಚಿತ್ತತೆಯಿಂದ ನಿಲ್ಲದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.











Click it and Unblock the Notifications