ದಾವಣಗೆರೆಯಲ್ಲಿ ಗ್ರಾ.ಪಂ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ
ದಾವಣಗೆರೆ, ಮಾರ್ಚ್ 16: ಕಾಮುಕ ಕಂಪ್ಯೂಟರ್ ಅಪರೇಟರ್ ಒಬ್ಬನು, ಮಹಿಳಾ ಅಟೆಂಡರ್ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಾವಣಗೆರೆ ತಾಲ್ಲೂಕು ಹೊನ್ನೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಕಂಪ್ಯೂಟರ್ ಅಪರೇಟರ್ ವೆಂಕಟೇಶ್ ಎಂಬಾತನೇ, ಗ್ರಾ.ಪಂ ಸಹಾಯಕಿ ಮಹಿಳೆ ಮೇಲೆ ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿ. ಕಳೆದ ಫೆಬ್ರವರಿ 15 ಮತ್ತು 18 ರಂದು ನಡೆದ ಲೈಂಗಿಕ ಕಿರುಕುಳ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, ವೆಂಕಟೇಶ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ನಿತ್ಯ ಹಾಜರಾತಿ ಹಾಕಲು ಗ್ರಾಮ ಪಂಚಾಯತಿಗೆ ಬಂದ ವೇಳೆ, ಥಂಬ್ ಮೂಲಕ ಹಾಜರಾತಿ ಹಾಕುವಾಗ ವೆಂಕಟೇಶ್ ಅಸಭ್ಯವಾಗಿ ಆ ಮಹಿಳೆಯ ದೇಹ ಮುಟ್ಟುವ ಕೆಲಸ ಮಾಡುತ್ತಿರುವ ಮತ್ತು ಒಮ್ಮೆ ಆತನಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ಆ ಮಹಿಳೆ ತನ್ನ ಪತಿಗೆ ತಿಳಿಸಿದ್ದರಿಂದ ಮಹಿಳೆ ಹಾಗೂ ಅವರ ಕುಟುಂಬದವರು ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆತನನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications