ರಂಗಯ್ಯನದುರ್ಗ ಅಭಯಾರಣ್ಯ ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಣೆ
ದಾವಣೆಗೆರೆ, ಜುಲೈ 31 : ದಾವಣೆಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯವನ್ನು ಕೊನೆಗೂ ಸೂಕ್ಷ್ಮ ಪರಿಸರ (ಇಎಸ್ ಜಡ್) ಪ್ರದೇಶವೆಂದು ಘೋಷಿಸಲು ಅಧಿಸೂಚನೆಯ ಕರಡನ್ನು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದೆ.
ಒಟ್ಟು 137.14 ಸ್ಕ್ವೇರ್ ಕಿ.ಮೀ ಇದ್ದು, ಸುಮಾರು 30 ಗ್ರಾಮಗಳು ಈ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಹಲವು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ನಿಷೇಧಗೊಳ್ಳಲಿವೆ.

77.24 ಸ್ಕ್ವೇರ್ ಕಿ.ಮೀ ಪ್ರದೇಶವನ್ನು ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯ ಎಂದು 2011ರ ಜನವರಿಯಲ್ಲಿ ಗುರುತಿಸಲಾಗಿತ್ತು. ನಂತರ ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯದ ಪ್ರಾಣಿ ಪ್ರಬೇಧಗಳಿಗೆ ವಿಶೇಷ ಸ್ಥಾನಮಾನ ದೊರಕಿತ್ತು.
ಭಾರತದಲ್ಲಿ ಅಪರೂಪಕ್ಕೆ ಕಾಣ ಸಿಗುವ 4 ಕೊಂಬಿನ ಚಿಗರೆಗಳು ಈ ಅರಣ್ಯದಲ್ಲಿ ಕಂಡುಬಂದಿದ್ದವು. ಕ್ರಮೇಣ ಅವುಗಳ ಸಂಖ್ಯೆ ಕ್ಷೀಣಿಸಿವೆ.
ಕೃಷಿ ಭೂಮಿಯಾಗಿ ಪರಿವರ್ತಿಸುವಾಗ ಇಲ್ಲಿ ಅಸಾಮಾನ್ಯವಾದ ತಲೆಬುರುಡೆ, ಹಾಗೂ ನಾಲ್ಕು ಕೊಂಬುಗಳು ಭೇಟೆಗಾರರಿಗೆ ಸಿಕ್ಕಿವೆ. ಜತೆಗೆ ಮಾಂಸಕ್ಕಾಗಿ ಕೂಡ ಭೇಟೆಯಾಡಲಾಗುತ್ತದೆ.











Click it and Unblock the Notifications