ಪಿಯುಸಿ ಫಲಿತಾಂಶ: ಕೂಲಿ ಕಾರ್ಮಿಕನ ಮಗ ಜಿಲ್ಲೆಗೇ ಟಾಪರ್!

Posted By:
Subscribe to Oneindia Kannada

ದಾವಣಗೆರೆ, ಮೇ 12: ಅನಕ್ಷರಸ್ಥ ಕೂಲಿ ಕಾರ್ಮಿಕ ದಂಪತಿಯ ಮಗನೊಬ್ಬ ಮೇ 11ರಂದು ಬಿಡುಗಡೆಗೊಂಡ ಪಿಯುಸಿ ಫಲಿತಾಂಶದಲ್ಲಿ ತನ್ನ ಜಿಲ್ಲೆಗೆ ಟಾಪರ್ ಆಗಿದ್ದಾನೆ.

ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಕೂಲಿಕಾರ್ಮಿಕರಾದ, ಪರಿಶಿಷ್ಠ ಪಂಗಡಕ್ಕೆ ಸೇರಿದ ಪಿ.ಎಸ್. ಹಾಲೇಶಪ್ಪ ಹಾಗೂ ಹನುಮಮ್ಮ ದಂಪತಿಗಳ ಕಿರಿಯ ಪುತ್ರ ಪಿ.ಎಚ್. ಬಸವರಾಜ್ ಈ ಸಾಧನೆ ಮಾಡಿದ್ದಾರೆ. ಬಸವರಾಜ್, ದಾವಣಗೆರೆಯ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿ.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

PUC result: Labourer's son now district topper

ಹೌದು. ಆತ ರಾಜ್ಯಕ್ಕೆ ಟಾಪರ್ ಆಗದಿರಬಹುದು. ಆದರೆ, ಅನೇಕ ಅನಾನುಕೂಲತೆಗಳು ಹಾಗೂ ಕೊರತೆಯ ನಡುವೆಯೇ ಆತ ಒಟ್ಟು 589 ಅಂಕ ಗಳಿಸಿ, ಶೇ. 98.16 ಅಂಕಗಳೊಂದಿಗೆ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿರುವುದು ಆ ಕಾಲೇಜಿನ ಸಿಬ್ಬಂದಿ ಹಾಗೂ ಇತರ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.[ಎಸ್ಸೆಸ್ಸೆಲ್ಸಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಬ್ಬರು ರಾಜ್ಯಕ್ಕೆ ತೃತೀಯ ಸ್ಥಾನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Scheduled Tribe student who is the son of poor labourers has emerged as Davanagere district topper in recent PUC result in Karnataka. ಪಿಯುಸಿ ಫಲಿತಾಂಶ: ಕೂಲಿ ಕಾರ್ಮಿಕನ ಮಗ ಜಿಲ್ಲೆಗೇ ಟಾಪರ್!
Please Wait while comments are loading...