SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ
2017ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 67.87 ಫಲಿತಾಂಶ ಬಂದಿದೆ. ಶುಕ್ರವಾರದಿಂದ ಆನ್‌ಲೈನ್‌ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಿದೆ. ಈ ಬಾರಿ ಕೂಡಾ ಬಾಲಕಿಯರು ಮೇಲುಗೈ ಪಡೆದಿದ್ದಾರೆ.
ಬೆಂಗಳೂರು, ಮೇ 12 : 2017ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಶುಕ್ರವಾರ ಮಧ್ಯಾಹ್ನ ಪ್ರಕಟಿಸಲಾಗಿದೆ. ಈ ಬಾರಿ ಒಟ್ಟಾರೆ, ಶೇ 67.87 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಬೀದರ್ ಕೊನೆ ಸ್ಥಾನದಲ್ಲಿದೆ. ಪಿಯು ಫಲಿತಾಂಶದಲ್ಲೂ ಈ ಎರಡು ಜಿಲ್ಲೆಗಳು ಇದೇ ಸ್ಥಾನ ಪಡೆದಿರುವುದನ್ನು ಗಮನಿಸಬಹುದು.
ಶುಕ್ರವಾರದಿಂದ ಆನ್‌ಲೈನ್‌ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಿದೆ. ಈ ಬಾರಿ ಕೂಡಾ ಬಾಲಕಿಯರು ಮೇಲುಗೈ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವೆಬ್ ಸೈಟ್‌ಗಳಲ್ಲಿ ಲಭ್ಯವಿದೆ.[ಎಸ್ಎಸ್ಎಲ್ ಸಿ 2017 ಫಲಿತಾಂಶ ಪ್ರಕಟ]
http://www.karresults.nic.in
http://examresults.net
ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್ ಸಿ ಬೋರ್ಡ್ ಕಚೇರಿಯಲ್ಲಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ಶುಕ್ರವಾರ ಮಧ್ಯಾಹ್ನ ಪ್ರಕಟಿಸಿದರು.

ಉಡುಪಿ ಮೊದಲ ಸ್ಥಾನ, ಬೀದರ್ ಕೊನೆ ಸ್ಥಾನ ಪಡೆದಿದೆ. ಉಳಿದಂತೆ, ಚಿಕ್ಕೋಡಿ ಮೂರನೇ ಸ್ಥಾನ, ಶಿರಸಿ ನಾಲ್ಕನೇ ಸ್ಥಾನ, ಉತ್ತರಕನ್ನಡ ಐದನೇ ಸ್ಥಾನದಲ್ಲಿದೆ.
| ಶೈಕ್ಷಣಿಕ ಜಿಲ್ಲೆ | 2017 ಫಲಿತಾಂಶ | 2016 ಫಲಿತಾಂಶ | |||
| ಶೇಕಡಾ | ಸ್ಥಾನ | ಶೇಕಡಾ | ಸ್ಥಾನ | ||
| ಉಡುಪಿ | 84.23 | 1 | 89.52 | 2 | |
| ದಕ್ಷಿಣ ಕನ್ನಡ | 82.39 | 2 | 88.01 | 3 | |
| ಚಿಕ್ಕೋಡಿ | 80.47 | 3 | 86.00 | 6 | |
| ಶಿರಸಿ | 80.09 | 4 | 85.24 | 9 | |
| ಉತ್ತರ ಕನ್ನಡ | 79.82 | 5 | 87.83 | 4 | |
| ರಾಮನಗರ | 78.55 | 6 | 81.74 | 12 | |
| ಕೋಲಾರ | 78.51 | 7 | 78.19 | 20 | |
| ಧಾರವಾಡ | 77.29 | 8 | 85.71 | 10 | |
| ಕೊಡಗು | 77.09 | 9 | 78.93 | 18 | |
| ಬೆಂಗಳೂರು ಗ್ರಾಮಾಂತರ | 77.03 | 10 | 89.63 | 1 | |
| ಕೊಪ್ಪಳ | 76.05 | 11 | 75.92 | 26 | |
| ಚಾಮರಾಜನಗರ | 75.66 | 12 | 75.59 | 27 | |
| ಗದಗ | 75.62 | 13 | 64.09 | 33 | |
| ದಾವಣಗೆರೆ | 75.33 | 14 | 78.43 | 19 | |
| ಶಿವಮೊಗ್ಗ | 75.07 | 15 | 77.57 | 22 | |
| ಯಾದಗಿರಿ | 74.84 | 16 | 68.57 | 32 | |
| ಬಳ್ಳಾರಿ | 74.65 | 17 | 56.68 | 34 | |
| ಚಿಕ್ಕಮಗಳೂರು | 74.4 | 18 | 86.29 | 5 | |
| ಚಿತ್ರದುರ್ಗ | 72.64 | 19 | 73.19 | 29 | |
| ವಿಜಯಪುರ | 72.23 | 20 | 70.57 | 31 | |
| ಮೈಸೂರು | 72.03 | 21 | 85.56 | 8 | |
| ಮಧುಗಿರಿ | 71.84 | 22 | 80.25 | 16 | |
| ಮಂಡ್ಯ | 71.73 | 23 | 77.98 | 21 | |
| ಬೆಂಗಳೂರು ಉತ್ತರ | 71.44 | 24 | 80.52 | 15 | |
| ಬೆಳಗಾವಿ | 71.2 | 25 | 81.09 | 13 | |
| ಹಾವೇರಿ | 70.46 | 26 | 74.55 | 28 | |
| ಕಲಬುರಗಿ | 70.24 | 27 | 79.02 | 17 | |
| ಚಿಕ್ಕಬಳ್ಳಾಪುರ | 70.13 | 28 | 80.92 | 14 | |
| ಬೆಂಗಳೂರು ದಕ್ಷಿಣ | 69.92 | 29 | 72.80 | 30 | |
| ರಾಯಚೂರು | 69.69 | 30 | 82.19 | 11 | |
| ಹಾಸನ | 69.58 | 31 | 75.94 | 24 | |
| ತುಮಕೂರು | 68.15 | 32 | 76.10 | 23 | |
| ಬಾಗಲಕೋಟೆ | 64.53 | 33 | 85.71 | 7 | |
| ಬೀದರ್ | 62.2 | 34 | 75.93 | 25 | |
(ಒನ್ಇಂಡಿಯಾ ಸುದ್ದಿ)












Click it and Unblock the Notifications