10 ದಿನವಾದರೂ ಪಾಕ್ ಪರ ಪೋಸ್ಟ್ ಹಾಕಿದ್ದ ಪೇದೆಯನ್ನು ಬಂಧಿಸದ ಪೊಲೀಸರು
ದಾವಣಗೆರೆ, ಸೆಪ್ಟೆಂಬರ್ 1: ಪಾಕಿಸ್ತಾನ ಪರ ಪೋಸ್ಟ್ ಹಂಚಿಕೊಂಡಿದ್ದ ಪೊಲೀಸ್ ಪೇದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ವಹಿಸಲಾಗಿತ್ತು. ಆದರೆ ಹತ್ತು ದಿನವಾದರೂ ಪೊಲೀಸರು ಪೇದೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
Recommended Video
ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಾಕಿಸ್ತಾನದ ಪೇಜ್ ಹಂಚಿಕೊಂಡಿದ್ದರು. 2008ರ ಪೊಲೀಸ್ ಬ್ಯಾಚ್ ವಾಟ್ಸಪ್ ಗ್ರೂಪ್ ನಲ್ಲಿಯೂ ಸನಾವುಲ್ಲಾ ಅವರು ಶೇರ್ ಮಾಡಿದ್ದರು.
ದೇಶದ್ರೋಹದ ಕೇಸ್ ಹಾಕಿ ಸೇವೆಯಿಂದ ಅಮಾನತು ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದರು. ಪೊಲೀಸರು ಹತ್ತು ದಿನವಾದರೂ ಕಾನ್‍ಸ್ಟೆಬಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈವರೆಗೆ ಅವರು ಪತ್ತೆಯಾಗಿಲ್ಲ.

ಆಗಸ್ಟ್ 20 ರಂದು ಪ್ರಕರಣ ಬಯಲಿಗೆ ಬಂದಿತ್ತು. ಇಷ್ಟು ದಿನವಾದರೂ ಕಾನ್‍ಸ್ಟೆಬಲ್ ಸನಾವುಲ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣ ಬಯಲಿಗೆ ಬಂದ ನಂತರ ಸನಾವುಲ್ಲಾ ತಲೆಮರೆಸಿಕೊಂಡಿದ್ದಾರೆ.

ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲು ದಾವಣಗೆರೆ ಜಿಲ್ಲಾಧಿಕಾರಿ ಹನುಮಂತರಾಯ ಆದೇಶಿಸಿದ್ದರು, ಆದರೆ ಇದುವರೆಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.












Click it and Unblock the Notifications