ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್‌ಐಆರ್

ದಾವಣಗೆರೆ, ಮೇ 21; ಕೋವಿಡ್ ನಿಯಮ ಉಲ್ಲಂಘಿಸಿದ ಯುವ ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಬಳಿಯಿರುವ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಗೆಸ್ಟ್ ಹೌಸ್‌ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.

Recommended Video

      ಹರಿಹರ ಅತಿಥಿ ಗೃಹನಲ್ಲಿ ಸಿಕ್ಕಿಬಿದ್ದ Mrinal hebbalkar | Oneindia Kannada

      ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಮುಖಂಡ ನಿಖಿಲ್ ಕೊಂಡಜ್ಜಿ ಮತ್ತವರ ಸ್ನೇಹಿತರ ವಿರುದ್ಧ ಹರಿಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೇ 18 ರಂದು ಸಂಜೆ 4.30ರ ಸುಮಾರಿಗೆ ಗೆಸ್ಟ್ ಹೌಸ್ ಒಳಗಡೆ ಅಕ್ರಮವಾಗಿ ಆಗಮಿಸಿದ್ದರು.

      ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಸರ್ಕಾರದ ಸ್ವಾಧೀನಕ್ಕೊಳಪಟ್ಟ ಸ್ಕೌಟ್ಸ್ ಅಂಡ್ ಗೈಡ್ಸ್ ನೊಳಗೆ ಹುಬ್ಬಳ್ಳಿಯ ಸುಹಾಲ್, ದಾವಣಗೆರೆಯ ಅಂಚಲ್, ಬೆಳಗಾವಿಯ ಮೈನಾಲ್, ದಾವಣಗೆರೆಯ ಡಾ. ಹಿತಾ, ಡಾ. ಸಿಮ್ರಾನ್ ಲಾಕ್ ಡೌನ್ ಇದ್ದರೂ ಕೋವಿಡ್ ಉಲ್ಲಂಘಿಸಿ ಕುಳಿತಿದ್ದರು.

      Not Following Covid Norms FIR Against Youth Congress Leaders

      ಗ್ರಾಮಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು‌. ಈ ಘಟನೆಗೆ ಸಂಬಂಧಿಸಿದಂತೆ ಪಿಎಸ್ಐ ರವಿಕುಮಾರ್‌ಗೆ ಸ್ಥಳೀಯರು ಈ ವಿಡಿಯೋ ಕಳುಹಿಸಿಕೊಟ್ಟಿದ್ದರು.

      ಕೊರೊನಾ ಮಾರ್ಗಸೂಚಿ ಪ್ರಕಾರ ಗೆಸ್ಟ್ ಹೌಸ್ ಬಾಗಿಲು ತೆರೆಯಬಾರದು ಎಂಬ ನಿಯಮವಿದ್ದರೂ ಉಲ್ಲಂಘಿಸಿ ಒಳ ಪ್ರವೇಶಿಸಲು ಅನುಮತಿ ‌ನೀಡಿದ ಕಾರಣ ಪ್ರವಾಸಿ ಮಂದಿರದ ವಾರ್ಡನ್ ಮಂಜಪ್ಪ ಹಾಗೂ ಕಾವಲುಗಾರ ಚಂದ್ರಪ್ಪರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹ ಆದೇಶ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+