ಸಚಿವ ಮಲ್ಲಿಕಾರ್ಜುನ್ ವಿಡಿಯೋ ಅಪ್ಲೋಡ್: ಸಿಇಎನ್ ಠಾಣೆಯಲ್ಲಿ ದೂರು ದಾಖಲು
ದಾವಣಗೆರೆ, ಆಗಸ್ಟ್ 16: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ತೇಜೋವಧೆ ಆಗುವಂತೆ ಫೇಸ್‌ಬುಕ್‌ನಲ್ಲಿ ಅವರ ಅನುಮತಿ ಇಲ್ಲದೆ ಅಪ್ಲೋಡ್ ಮಾಡಿರುವ ವಿಜಯ್ ಕುಮಾರ್ ಹಿರೇಮಠ ವಿರುದ್ಧ ದೂರು ದಾಖಲಾಗಿದೆ.
ದಾವಣಗೆರೆಯ ಚಿಕ್ಕಬೂದಿಹಾಳ್ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು ಅಲಿಯಾಸ್ ಬೂದಾಳ್ ಬಾಬು ಅವರು ಪ್ರಕರಣ ದಾಖಲಿಸಿದ್ದು, ಈ ಸಂಬಂಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರು ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರು ಚುನಾವಣೆ ಪೂರ್ವದಲ್ಲಿ ತಮ್ಮ ಶ್ರೀಮತಿಯೊಂದಿಗೆ ತಮ್ಮ ಮನೆಯಲ್ಲಿ ನಡೆಸಿರುವ ಸಂವಾದದ ವಿಡಿಯೋವನ್ನು ಅವರ ಅನುಮತಿ ಇಲ್ಲದೇ ಫೇಸ್ ಬುಕ್‌ನಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ದೂರು ನೀಡಲಾಗಿದೆ.
ಕಾಂಗ್ರೆಸ್ ಮುಖಂಡ ನೀಡಿರುವ ದೂರಿನಲ್ಲೇನಿದೆ..?
ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ದಾವಣಗೆರೆ ತಾಲೂಕಿನಲ್ಲಿ ಚಿಕ್ಕಬೂದಿಹಾಳ ಗ್ರಾಮದ ಕಾಂಗ್ರೆಸ್ ಮುಖಂಡನಾಗಿರುತ್ತೇನೆ . ನಾನು ಈ ದಿನ ಮೊಬೈಲ್‌ನಲ್ಲಿ ಫೇ್‌ಬುಕ್ ನೋಡುತ್ತಿದ್ದಾಗ ವಿಜಯಕುಮಾರ್ ಹಿರೇಮಠ ಫೇಸ್ ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿ.
ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರು ಹಾಗೂ ದಾವಣಗೆರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ.ಎಸ್.ಎಸ್.ಮಲ್ಲಿಕಾರ್ಜುನ ರವರು ಚುನಾವಣೆ ಪೂರ್ವದಲ್ಲಿ ತಮ್ಮ ಶ್ರೀಮತಿಯೊಂದಿಗೆ ತಮ್ಮ ಮನೆಯಲ್ಲಿ ನಡೆಸಿರುವ ಸಂದರ್ಶನದ ವಿಡಿಯೋವನ್ನು ಅವರ ಅನುಮತಿಯಿಲ್ಲದೆೇ, ದುರುದ್ದೇಶಪೂರ್ವಕವಾಗಿ ಮತ್ತು ಸಚಿವರ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿ ಸಾರ್ವಜನಿಕರ ಮನಸಿನಲ್ಲಿ ಅಹಿತಕರ ಭಾವನೆಗಳನ್ನು ಉತ್ತೇಜಿಸುವಂತೆ ಮೂಲ ವಿಡಿಯೋವನ್ನು ಅಪೂರ್ಣವಾಗಿ ಫೇಸ್ ಬುಕ್‌ನಲ್ಲಿ ಅಪಲೋಡ್ ಮಾಡಿರುತ್ತಾರೆ.
ಈ ಸಂವಾದದ ಫೇಸ್‌ಬುಕ್ ವೀಡಿಯೋ ಅಪಲೋಡ್ ಮಾಡಲಾಗಿದೆ. ಸಚಿವರು ಮಾತನಾಡುತ್ತಿರುವ ವಿಡಿಯೋವನ್ನು ವಿಜಯಕುಮಾರ್ ಹಿರೇಮಠ ಎಂಬ ಫೇಸ್‌ಬುಕ್ ಪ್ರೊಫೈಲ್ ಹೊಂದಿರುವ ವ್ಯಕ್ತಿಯು ತನ್ನ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿರುವುದು ಕಂಡುಬಂದಿರುವುದರಿಂದ ಸದರಿ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ತಮ್ಮಲ್ಲಿ ಕೋರುತ್ತೇನೆ.
ಈ ದೂರು ಅರ್ಜಿಯೊಂದಿಗೆ ವಿಜಯಕುಮಾರ್ ಹಿರೇಮಠ ಎಂಬ ಫೇಸ್ ಬುಕ್ ಪ್ರೊಫೈಲ್‌ಗೆ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತು ಮಾಡಿರುತ್ತೇನೆ ಎಂದು ಚಿಕ್ಕಬೂದಿಹಾಳ್ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications