ಹರಪನಹಳ್ಳಿಯ ಐತಿಹಾಸಿಕ ಉಚ್ಚಂಗಿ ದೇವಿ ದೇವಾಲಯ ತೆರವು

ಬಳ್ಳಾರಿ, ಫೆಬ್ರವರಿ 29: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಉಚ್ಚಂಗಿಯಲ್ಲಮ್ಮ ದೇವಿಯ ಪಾದುಗಟ್ಟೆ ದೇವಸ್ಥಾನವನ್ನು ಇಂದು ತೆರವು ಮಾಡಲಾಯಿತು.

ಉಚ್ಚಂಗಿದುರ್ಗ ಗ್ರಾಮದ ಮಧ್ಯದಲ್ಲಿರುವ ಉಚ್ಚಂಗಿದೇವಿಯ ಪಾದುಗಟ್ಟೆ ದೇವಸ್ಥಾನವು ಹರಪ್ಪನಹಳ್ಳಿ ಹಾಗೂ ಉಚ್ಚಂಗಿ ದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿದೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಹಶೀಲ್ದಾರ್, ಪೊಲೀಸರ ಭದ್ರತೆಯಲ್ಲಿ ದೇವಸ್ಥಾನವನ್ನು ತೆರವುಗೊಳಿಸಲಾಯಿತು.

Historical Temple In Davanagere Demolished By supreme Court Order

ನೂರಾರು ವರ್ಷಗಳ ಇತಿಹಾಸವಿರುವ ಉಚ್ಚಂಗಿ ದೇವಿಯ ದೇವಸ್ಥಾನ ಗುಡ್ಡದ ಮೇಲಿದ್ದು, ಆ ದೇವಿಯ ಪಾದಗಟ್ಟೆ ಗ್ರಾಮದ ಮಧ್ಯ ಇದೆ. ಹೀಗಾಗಿ ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನದಂದು ನೂರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಎರಡು ದಿನಗಳ ಹಿಂದೆ ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಜಿಲ್ಲಾಧಿಕಾರಿಗಳು, ಎಸ್ ಪಿ ತಹಶೀಲ್ದಾರ್ ಮನವೊಲಿಸಿದ್ದರು. ಬೆಳಿಗ್ಗೆಯಿಂದಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+