• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಡಿನಲ್ಲೇ ರಾತ್ರಿ ಕಳೆದ ಪುಟ್ಟ ಬಾಲಕಿ; ದಾವಣಗೆರೆಯಲ್ಲೊಂದು ಅಚ್ಚರಿಯ ಸಂಗತಿ...

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ನವೆಂಬರ್ 12: ಅಪ್ಪ ಅಮ್ಮನೊಂದಿಗೆ ಹೊಲಕ್ಕೆ ಹೋಗಿದ್ದಾಗ ದಾರಿ ತಪ್ಪಿ ಕಾಡು ಸೇರಿದ್ದ ಈ ಆರರ ಪುಟ್ಟ ಬಾಲಕಿ ರಾತ್ರಿಯಿಡೀ ಕೊಮಾರನಹಳ್ಳಿ ಕಾಡಿನಲ್ಲಿ ಚಳಿ, ಗಾಳಿ, ಕತ್ತಲಿನಲ್ಲಿ ಕಾಲ ಕಳೆದು 24 ಗಂಟೆಗಳ ನಂತರ ಪೋಷಕರ ಮಡಿಲು ಸೇರಿದ್ದಾಳೆ.

ಆಕೆ ಮನೆ ಮಂದಿಗೆಲ್ಲ ಮುದ್ದು ಮಗಳು. ಯಾವಾಗಲೂ ಅಮ್ಮನ ಮಡಿಲಿನಲ್ಲಿ ಕೂತು ಆಟವಾಡಿ, ಅಕ್ಕಂದಿರ ಜೊತೆ ಕೂಡಿ ಖುಷಿಯಿಂದ ಕಾಲ ಕಳೆಯುತ್ತಿದ್ದಳು. ಆದರೆ ಅಂದು ಪೋಷಕರ ಜೊತೆ ಹೊಲಕ್ಕೆ ಹೋದಾಗ ದಾರಿ ತಪ್ಪಿ ಕಾಡಿಗೆ ನಡೆದಿದ್ದಳು ಈ ಪುಟ್ಟ ಬಾಲಕಿ. ಎಷ್ಟು ಹುಡುಕಿದರೂ ಸುಳಿವು ಸಿಗದೇ ದುಃಖದಲ್ಲೇ ಮನೆಗೆ ಹಿಂದಿರುಗಿದ್ದರು ಕುಟುಂಬಸ್ಥರು. ಆದರೆ ಪವಾಡ ಎಂಬಂತೆ ಪೋಷಕರ ಮಡಿಲು ಸೇರಿದ್ದಾಳೆ. ಮುಂದೆ ಓದಿ...

 ಹೊಲದಿಂದ ಕಾಡಿನ ಹಾದಿ ಹಿಡಿದಿದ್ದ ಜೋಯಾ

ಹೊಲದಿಂದ ಕಾಡಿನ ಹಾದಿ ಹಿಡಿದಿದ್ದ ಜೋಯಾ

ದಾವಣಗೆರೆಯ ಮಲೆಬೆನ್ನೂರು ಗ್ರಾಮದ ಇಂದಿರಾನಗರದಲ್ಲಿ ಈ ಕುಟುಂಬ ವಾಸವಿದೆ. ಮಲೆಬೆನ್ನೂರಿನ ಅಗ್ಸರ್ ಹಾಗೂ ಫಾತಿಮಾ ಎನ್ನುವವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಮಗುವೇ ಈ ಜೋಯಾ. ಅಗ್ಸರ್ ಎರಡು ಎಕರೆ ಹೊಲದಲ್ಲಿ ಮೆಕ್ಕೆಜೋಳ ಹಾಕಿದ್ದು, ಅದನ್ನು ಕಟಾವು ಮಾಡಲು ಹೋಗಿದ್ದರು. ನವೆಂಬರ್ 10ರಂದು ಶಾಲೆ ಇಲ್ಲದ ಕಾರಣ ಕೊನೆ ಮಗು ಜೋಯಾ ಕೂಡ ತಂದೆ ತಾಯಿ ಜೊತೆ ಹೊಲಕ್ಕೆ ಹೋಗಿದ್ದಳು. ಟ್ರಾಕ್ಟರ್ ಮೇಲೆ ಕೂತಿದ್ದ ಜೋಯಾ ನೀರು ಕುಡಿಯಲೆಂದು ಕೆಳಗೆ ಇಳಿದಿದ್ದು, ಅದನ್ನು ಗಮನಿಸದ ಪೋಷಕರು ತೆನೆ ಮುರಿಯುತ್ತಾ ಮುಂದೆ ಹೋಗಿದ್ದಾರೆ. ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ ಜೋಯಾ ಕಾಡಿನೊಳಗೆ ಹೋಗಿ ಕಣ್ಮರೆಯಾಗಿದ್ದಾಳೆ.

ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ!

 ಕಾಡಿನೊಳಗೆಲ್ಲಾ ಹುಡುಕಾಡಿದರೂ ಸಿಗಲಿಲ್ಲ

ಕಾಡಿನೊಳಗೆಲ್ಲಾ ಹುಡುಕಾಡಿದರೂ ಸಿಗಲಿಲ್ಲ

ಸ್ವಲ್ಪ ಸಮಯದ ನಂತರ ಬಾಲಕಿ ಇಲ್ಲದ್ದನ್ನು ಗಮನಿಸಿದ ಪೋಷಕರು ಹೊಲಗಳಲ್ಲಿ ಹುಡುಕಾಡಿದ್ದಾರೆ. ನಂತರ ಕಾಡಿನೊಳಗೆ ಹೋಗಿರಬಹುದು ಎಂದು ತಿಳಿದು ಇನ್ನಷ್ಟು ಮುಂದೆ ಹೋಗಿ ಹುಡುಕಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ರಾತ್ರಿಯಿಡೀ ಕಾಡಿನೊಳಗೆ ನುಗ್ಗಿ ಮಗುವಿಗೆ ಹುಡುಕಾಟ ನಡೆಸಿದ್ದಾರೆ. ಆದರೂ ಬಾಲಕಿ ಸಿಕ್ಕಿಲ್ಲ.

 ಕಾಡಿನಲ್ಲಿ ಬಂಡೆ ಮೇಲೆ ಕುಳಿತಿದ್ದ ಮಗು

ಕಾಡಿನಲ್ಲಿ ಬಂಡೆ ಮೇಲೆ ಕುಳಿತಿದ್ದ ಮಗು

ಆದರೆ ಅಚ್ಚರಿ ಎಂಬಂತೆ ಮಾರನೇ ದಿನ ಸಂಜೆ ಕಾಡಿನ ಬಳಿ ಇದ್ದ ದರ್ಗಾ ಬಳಿ ಬಾಲಕಿ ಸಿಕ್ಕಿದ್ದಾಳೆ. ಈ ವಿಷಯವನ್ನು ಸ್ಥಳೀಯರು ಪೋಷಕರಿಗೆ ತಿಳಿಸಿದ್ದಾರೆ. ಕಾಡಿನಲ್ಲಿ ಕರಡಿ, ಚಿರತೆ ಹಾಗೂ ನರಿಗಳು ಸಾಕಷ್ಟು ಬಾರಿ ಜನರಿಗೆ ಕಾಣಿಸಿಕೊಂಡಿದ್ದು, ಕೆಲವೊಮ್ಮೆ ದಾಳಿ ನಡೆಸಿದ ಪ್ರಸಂಗಗಳೂ ನಡೆದಿವೆ. ಆದರೆ ಈ ಬಾಲಕಿ ಕಾಡಿನಲ್ಲಿ ಬಂಡೆಯೊಂದರ ಪಕ್ಕದಲ್ಲಿ ಕೂತಿದ್ದು ವ್ಯಕ್ತಿಯೊಬ್ಬರಿಗೆ ಕಾಣಸಿಕ್ಕಿದೆ. ಅವರು ಮಗುವನ್ನು ಕರೆದುಕೊಂಡು ಬಂದು ದರ್ಗಾದ ಬಳಿ ಇಟ್ಟುಕೊಂಡಿದ್ದರು.

ಮಣ್ಣಿನ ಮಗನಾದ ಕೊಡವೂರು ಗ್ರಾಮದ ಎಂಟರ ಹರೆಯದ ಪುಟ್ಟ ಪೋರ

  ಪತ್ರಿಕಾ ರಂಗದ ದೊಡ್ಡ ಕೊಂಡಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದೆ | Oneindia Kannada
   24 ಗಂಟೆಗಳ ನಂತರ ಪೋಷಕರ ಮಡಿಲು ಸೇರಿದ ಬಾಲಕಿ

  24 ಗಂಟೆಗಳ ನಂತರ ಪೋಷಕರ ಮಡಿಲು ಸೇರಿದ ಬಾಲಕಿ

  ಈ ವಿಷಯ ತಿಳಿದ ಪೋಷಕರು ದರ್ಗಾ ಬಳಿ ಹೋಗಿ ಬಾಲಕಿಯನ್ನು ಕರೆದುಕೊಂಡು ಬಂದಿದ್ದಾರೆ. ರಾತ್ರಿಯಿಡೀ ಕಾಡಿನಲ್ಲಿ ಓಡಾಡಿದ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾತ್ರಿ ಕಾಡು ಪ್ರಾಣಿಗಳ ನಡುವೆ ಚಳಿ, ಗಾಳಿ, ಕತ್ತಲು ಎನ್ನದೆ ಕಾಲ ಕಳೆದು, 24 ಗಂಟೆಗಳ ನಂತರ ಪೋಷಕರ ಮಡಿಲು ಸೇರಿದ್ದಾಳೆ. ಕುಟುಂಬಸ್ಥರು ಜೋಯಾ ಸಿಕ್ಕಿದ್ದಕ್ಕೆ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

  English summary
  A Six year old girl who went to farm with her parents lost her way and spent whole night at forest in davanagere
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X