ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 27: ಆಂಬ್ಯುಲೆನ್ಸ್‌ನಲ್ಲಿ ವೆಂಟಿಲೇಟರ್ ಸಿಗದೆ ಕೊರೊನಾ‌ ಸೋಂಕಿತ ಮಹಿಳೆ ಪರದಾಡಿದ ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಮಹಿಳೆಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಯನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರಲಾಯಿತು. ಈ ವೇಳೆ ವೆಂಟಿಲೇಟರ್ ಇಲ್ಲದೆ ಸುಮಾರು ಒಂದು ಗಂಟೆ ಆಂಬ್ಯುಲೆನ್ಸ್‌ನಲ್ಲಿ ಒದ್ದಾಡಿದರೂ ಸಿಗಲಿಲ್ಲ.

ಬಳಿಕ ದಾವಣಗೆರೆಯ ಎಸ್.ಎಸ್ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಯೂ ಬೆಡ್ ಪೂರ್ತಿಯಾಗಿದ್ದವು. ಬಳಿಕ ಸೋಂಕಿತೆಯ ಸಂಬಂಧಿಯೊಬ್ಬರು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಮನವಿ ಮಾಡಿದರು.

Davanagere: Former Minister SS Mallikarjun Helps Covid-19 Patient Treatment

ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಅವರು ಸಹ ಸೋಂಕಿತೆಗೆ ವೆಂಟಿಲೇಟರ್ ಕೊಡಿಸಲು ಪ್ರಯತ್ನ ಮಾಡಿದರು. ಬಳಿಕ ಬಾಪೂಜಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವಂತೆ ಮಲ್ಲಿಕಾರ್ಜುನ್ ಅವರು ಹೇಳಿದ ಬಳಿಕ ಸೋಂಕಿತೆಗೆ ಅರ್ಧ ಗಂಟೆಯ ಬಳಿಕ ಬೆಡ್ ಸಿಕ್ಕಿತು.

Recommended Video

SRH ತಂಡದ ಮತ್ತೊಂದು ಬ್ಯಾಡ್ ಲಕ್ | Oneindia Kannada

ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಬೆಡ್, ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಿಗದೇ ಪರದಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಕೊರೊನಾ ಹೆಮ್ಮಾರಿ ಇನ್ನಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ.

English summary
The coronavirus infected woman could not find a ventilator in the Chigateri district hospital At Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X