ದಾವಣಗೆರೆಯಲ್ಲಿ ಮೂರು ವರ್ಷದ ಮಗುವಿಗೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡ ಅಪ್ಪ

ದಾವಣಗೆರೆ, ಫೆಬ್ರವರಿ 08: ಕೌಟುಂಬಿಕ ಕಲಹದ ಹಿನ್ನೆಲೆ ಹೆತ್ತ ಮಗಳಿಗೆ ವಿಷವಿಕ್ಕಿ ತಂದೆ ಕೂಡ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆಯ ನಿಟುವಳ್ಳಿಯಲ್ಲಿ ನಡೆದಿದೆ.

ಜಯಂತ್ (30), ಮಾನಸ (3) ಸಾವನ್ನಪ್ಪಿದ ದುರ್ದೈವಿಗಳು. ಜಯಂತ್ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಕಳೆದ ನಾಲ್ಕೈದು ದಿನಗಳಿಂದ ಜಗಳವಾಡುತ್ತಿದ್ದು, ಎರಡು ದಿನಗಳ ಹಿಂದೆ ಜಯಂತ್ ಪತ್ನಿ ತವರು ಮನೆಗೆ ಹೋಗಿ ಬಂದಿದ್ದರು ಎನ್ನಲಾಗಿದೆ.

Father Poisoned His Daughter And Committed Suicide In Davangere

ಇಂದು ಜಯಂತ್ ಪತ್ನಿ ಶಾಲೆಗೆ ಹೋಗಿದ್ದಾಗ ಮಗಳಿಗೆ ವಿಷ ಕುಡಿಸಿ ಮಂಚದ ಮೇಲೆ ಮಲಗಿಸಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಯಂತ್ ಪತ್ನಿ ಶಾಲೆಯಿಂದ ಮನೆಗೆ ಮರಳಿದಾಗ ಸಂಗತಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+