ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚು: ಅಮಿತ್ ಶಾ

|
Google Oneindia Kannada News

Recommended Video

ಕಾಂಗ್ರೆಸ್ ಸರ್ಕಾರದಡಿ ರೈತರು ಸುರಕ್ಷಿತವಿಲ್ಲ, ಎಂದ ಅಮಿತ್ ಶಾ | Oneindia Kannada

ದಾವಣಗೆರೆ,ಮಾರ್ಚ್ 27: ದೇಶಾದ್ಯಂತ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎನ್ನುವ ಮಾತು ಸುಳ್ಳು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾತ್ರ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಮಧ್ಯಪ್ರದೇಶ, ಹಾಗೂ ಛತ್ತೀಗಡ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ, ಉಳಿದೆಲ್ಲಾ ರಾಜ್ಯಗಳಲ್ಲಿನ ರೈತರ ಆತ್ಮಹತ್ಯೆಯ ಸಂಖ್ಯೆಗೆ ಹೋಲಿಸಿದರೆ ಈ ಮೂರು ರಾಜ್ಯದಲ್ಲಿ ಇಳಿಕೆಯಾಗಿದೆ.

'ಮುಳುಗುತ್ತಿರುವ ಕಾಂಗ್ರೆಸ್ ಹಡಗು ಉಳಿಸಲು ಸಿದ್ದು ಶತಪ್ರಯತ್ನ''ಮುಳುಗುತ್ತಿರುವ ಕಾಂಗ್ರೆಸ್ ಹಡಗು ಉಳಿಸಲು ಸಿದ್ದು ಶತಪ್ರಯತ್ನ'

ಬಿಜೆಪಿ ಸರ್ಕಾರವಿರುವ ಪ್ರದೇಶದಲ್ಲಿ ರೈತರ ಆತ್ಮಹತ್ಯೆ ಶೇ.30ರಷ್ಟು ಇಳಿಕೆಯಾಗಿದೆ, ಈ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ನಡೆದಿಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ಕೃಷಿಯಲ್ಲಿ ಸೋಲು ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ, ಕೌಟುಂಬಿಕ ಕಲಹ ಇನ್ನು ಅನೇಕ ಕಾಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Farmers suicide increased during congress administration

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿತ್ತು, ಬಿಜೆಪಿ ಆಡಳಿತಕ್ಕೆ ಬಂದ ನಂತರ ಶೇ.30ರಷ್ಟು ಕಡಿಮೆಯಾಗಿದೆ. ಕರ್ನಾಟಕದಲ್ಲಿ ತೆಂಗಿನ ರೋಗ ಹೆಚ್ಚಾಗಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದರೆ ಅದಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಯೋಗಾಲಯವನ್ನು ಸ್ಥಾಪನೆ ಮಾಡಲಾಗುತ್ತದೆ. ಜತೆಗೆ ಮಾರ್ಕೆಟಿಂಗ್ ಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಬಂದ ನಂತರ ಜಿಡಿಪಿಎನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಹಿಂದೂ, ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಆರೋಪಿಗಳನ್ನು ಬಂಧಿಸಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಬಾಯ್ತಪ್ಪಿ ಯಡಿಯೂರಪ್ಪ ಅವರದ್ದು ಭ್ರಷ್ಟ ಸರ್ಕಾರ ಎಂದ ಅಮಿತ್ ಶಾ: ಸಿದ್ದರಾಮಯ್ಯ ಸರ್ಕಾರವನ್ನು ರಾಜ್ಯದಿಂದ ಕಿತ್ತೆಸೆಯ ಬೇಕು ಎಂದು ಹೇಳುವ ತರಾತುರಿಯಲ್ಲಿ ಯಡಿಯೂರಪ್ಪ ಅವರ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಅಮಿತ್ ಶಾ ಹೇಳಿದರು. ನಂತರದಲ್ಲಿ ಎಚ್ಚೆತ್ತುಕೊಂಡ ಅವರು ಸಿದ್ದರಾಮಯ್ಯ ಸರ್ಕಾರವೆಂದು ಮಾತನ್ನು ಬದಲಿಸಿದರು.

ಸಮಾಜವಾದಿ ಸಿದ್ದು ಕೈಗೆ 40 ಲಕ್ಷದ ವಾಚ್ ಬಂದಿದ್ದು ಹೇಗೆ?: ಅಮಿತ್ ಶಾಸಮಾಜವಾದಿ ಸಿದ್ದು ಕೈಗೆ 40 ಲಕ್ಷದ ವಾಚ್ ಬಂದಿದ್ದು ಹೇಗೆ?: ಅಮಿತ್ ಶಾ

ಚುನಾವಣೆ ಹತ್ತಿರ ಬಂದಾಗ ನೆನಪಾದ ಲಿಂಗಾಯತರ ಸ್ಥಾನಮಾನ: ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುತ್ತೇವೆ ಎಂದು ಚುನಾವಣೆ ಸರಿಯಾಗಿ ಆರು ತಿಂಗಳು ಇರುವಾಗ ಮಾತ್ರ ಯಾಕೆ ಘೋಷಣೆ ಮಾಡಿದ್ದಾರೆ. ಐದು ವರ್ಷದವರೆಗೆ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ. 2013ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು.ಅಂದು ಕಾಂಗ್ರೆಸ್ ಇದೇ ವಿಚಾರವನ್ನು ತಳ್ಳಿ ಹಾಕಿದ್ದರು. ಆದರೆ ಮತ್ತದಕ್ಕೆ ಮರುಜೀವ ಬಂದಿದೆ ಎಂದರೆ ಕೇವಲ ಲಿಂಗಾಯತರ ಮತಗಳನ್ನು ಪಡೆಯಲು ನಡೆಸುತ್ತಿರುವ ಹುನ್ನಾರ ಎಂದು ಹೇಳಿದರು.
ಸಿದ್ದರಾಮಯ್ಯ ಅಹಿಂದ ರಾಜಕಾರಣಿಯಲ್ಲ, ಅಹಿಂದೂ ರಾಜಕಾರಣಿ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ತಡೆಯದೆ ಇದ್ದರೆ ಮುಂದೆ ಕಠೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯು ಉತ್ತರ ಪ್ರದೇಶದಲ್ಲಿ ಶೇ.50ರಷ್ಟು ಹೋರಾಡು ಸಿದ್ಧರಾಗಿದ್ದೇವೆ. ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತೇವೆ. ಬಿಜೆಪಿಯು ಪ್ರಚಂಡ ಬಹುಮತ ಪಡೆದು ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
BJP National president Amit shah alleged that during congress administration farmers suicide increased. Its witnessed in Karnataka and Maharashtra too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X