ದಾವಣಗೆರೆ: ಮದ್ಯದ ಅಮಲಿನಲ್ಲಿ ಪೊಲೀಸರಿಗೆ ಹಿಗ್ಗಾ ಮುಗ್ಗಾ ಥಳಿತ
Recommended Video

ದಾವಣಗೆರೆ, ಅಕ್ಟೋಬರ್ 10: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಇಬ್ಬರು ಸಂಚಾರಿ ಪೊಲೀಸರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಹದರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂಚಾರಿ ಪೊಲೀಸರು ಎಂದಿನಂತೆ ವಾಹನ ತಪಾಸಣೆ ಮಾಡುವಾಗ ರುದ್ರಪ್ಪ ಎಂಬುವರನ್ನು ತಡೆದು ವಾಹನದ ದಾಖಲೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ರುದ್ರಪ್ಪ, ಏಕಾ-ಏಕಿ ಇಬ್ಬರು ಸಂಚಾರಿ ಪೊಲೀಸರ ಮೇಲೆ ಎರಗಿದ್ದು, ಅಲ್ಲಿಯೇ ಇದ್ದ ಮಣ್ಣಿನ ಮಡಿಕೆಯಿಂದ ಸಂಚಾರಿ ಎಸ್‌ಎಸ್‌ಐ ಆಂಜಿನಪ್ಪ ಅವರ ತಲೆಗೆ ಹೊಡೆದಿದ್ದಾನೆ. ಆ ನಂತರ ಪೇದೆ ಸಿದ್ದೇಶ್ ಮೇಲೆ ಎರಗಿದ ರುದ್ರಪ್ಪ ಅವರನ್ನು ರಸ್ತೆಯಲ್ಲಿ ಕೆಡವಿ ಹಲ್ಲೆ ಮಾಡಿದ್ದಾನೆ.

ಮದ್ಯದ ಅಮಲಿನಲ್ಲಿ ರುದ್ರಪ್ಪ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆತ ಅಷ್ಟು ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದರೂ ಸಹಿತ ಸಮಾಧಾನವಾಗಿಯೇ ಆತನೊಂದಿಗೆ ಪೊಲೀಸರು ಮಾತನಾಡುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಘಟನೆಯಲ್ಲಿ ಎಎಸ್‌ಐ ಆಂಜಿನಪ್ಪ ಅವರ ತಲೆಗೆ ಪೆಟ್ಟಾಗಿದ್ದಾರೆ. ಪೇದೆ ಸಿದ್ದೇಶ ಅವರ ಕೈಗೆ ಗಾಯವಾಗಿದೆ. ರುದ್ರಪ್ಪ ಅವರ ಮೇಲೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications