Get Updates
Get notified of breaking news, exclusive insights, and must-see stories!

ಮನೆಯ ಬಾಗಿಲಿಗೆ ನಿಮ್ಮ ಸೇವಕ: ದಾವಣಗೆರೆ ಪಾಲಿಕೆ ಸದಸ್ಯನ ವಿನೂತನ ಕಾರ್ಯ

ದಾವಣಗೆರೆ, ನವೆಂಬರ್‌ 14: ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಬಗೆಹರಿಸುವಂತಹ ವಿಭಿನ್ನ ಅಭಿಯಾನ ದಾವಣಗೆರೆಯಲ್ಲಿ ನಡೆಯುತ್ತಿದೆ. ವಾರದಲ್ಲಿ ಒಂದು ದಿನ ಮುಖ್ಯರಸ್ತೆಗೆ ಹೋಗಿ ಅಲ್ಲಿನ ಸ್ಥಳೀಯ ಜನರ ಸಮಸ್ಯೆ ಆಲಿಸಿ ಮತ್ತು ಬಗೆಹರಿಸುವ ವಿಭಿನ್ನ ಪ್ರಯತ್ನ ಇದಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್‌ನ ಸದಸ್ಯ ಗಡಿಗುಡಾಳ್ ಮಂಜುನಾಥ್ "ಮನೆಯ ಬಾಗಿಲಿಗೆ ನಿಮ್ಮ ಸೇವಕ'' ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದ್ದು, ತಮ್ಮ ಈ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ.

ದಾವಣಗೆರೆ ಪಾಲಿಕೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಾರ್ಡ್‌ ಜನರ ಮನೆ, ಹಾಗೂ ರಸ್ತೆಗೆ ಭೇಟಿ ನೀಡಿ ಅಹವಾಲು ಸ್ವೀಕರಿಸುವುದರ ಜೊತೆಗೆ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಗಡಿಗುಡಾಳ್ ಮಂಜುನಾಥ್ ಮಾಡಿದ್ದರು. ಮಂಜುನಾಥ್‌ ಈ ಕಾರ್ಯವನ್ನು ಮುಂದುವರಿಸಿದ್ದು, ಸದ್ಯ ಪ್ರತಿ ಭಾನುವಾರ ಒಂದು ಮುಖ್ಯ ರಸ್ತೆಗೆ ಹೋಗಿ ಸಾರ್ವಜನಿಕರ ಭೇಟಿ ಮಾಡಿ ಸಂಕಷ್ಟ ಆಲಿಸುವ ಕೆಲಸ ಮಾಡುತ್ತಿದ್ದಾರೆ.

ಮನೆಗೆ ತೆರಳಿ ಸಮಸ್ಯೆ ಆಲಿಸುವ ಗಡಿಗುಡಾಳ್ ಮಂಜುನಾಥ್

ಮನೆಗೆ ತೆರಳಿ ಸಮಸ್ಯೆ ಆಲಿಸುವ ಗಡಿಗುಡಾಳ್ ಮಂಜುನಾಥ್

ಮನೆಯ ಬಾಗಿಲಿಗೆ ನಿಮ್ಮ ಸೇವಕ‌ ಎಂಬ ಧ್ಯೇಯವಾಕ್ಯದೊಂದಿಗೆ ತಮ್ಮ ಸೇವೆ ಆರಂಭಿಸಿದ ಗಡಿಗುಡಾಳ್ ಮಂಜುನಾಥ್, ಎಂಸಿಸಿ ಬಿ ಬ್ಲಾಕ್‌ನ 2ನೇ ಮುಖ್ಯರಸ್ತೆಯಲ್ಲಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದರು. ಸಾರ್ವಜನಿಕರೊಂದಿಗೆ ಸಂವಾದ ನಡೆಸುವುದರ ಜೊತೆ ಅವರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಈ ವೇಳೆ ಮಂಜುನಾಥ್ ಜೊತೆಗೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬೇರೆ‌ ಬೇರೆ ವಿಭಾಗಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ಜನರೊಂದಿಗೆ ಬೆರೆತು ಜನರ ಸಮಸ್ಯೆ ಆಲಿಸುವ ಕಾರ್ಪೊರೇಟರ್

ಜನರೊಂದಿಗೆ ಬೆರೆತು ಜನರ ಸಮಸ್ಯೆ ಆಲಿಸುವ ಕಾರ್ಪೊರೇಟರ್

ಚುನಾವಣಾ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಿಸುವ ಕಾರ್ಯವನ್ನು ಈ ಭಾನುವಾರ ಮಾಡಲಾಯಿತು. ಮತದಾರರ ಪಟ್ಟಿಗೆ ಹೊಸ‌ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ಕೆಲಸ ಕೂಡ ಮಾಡಲಾಯಿತು. ಜೊತೆಗೆ ಕಸ ವಿಲೇವಾರಿಯ ಬಗ್ಗೆಯೂ ಜನರಿಗೆ ಜಾಗೃತೆ ಮೂಡಿಸಲಾಯಿತು. ವಾರದಲ್ಲಿ ಪ್ರತಿದಿನ ಹಸಿ ಕಸ ಹಾಗೂ ಮಂಗಳವಾರ ಮತ್ತು ಶುಕ್ರವಾರ ಒಣ ಕಸ ತೆಗೆದುಕೊಳ್ಳಲು ಪಾಲಿಕೆಯಿಂದ ವಾಹನಗಳ ಬರಲಿದ್ದು, ಜನರು ಸಹಕರಿಸಬೇಕು. ತ್ಯಾಜ್ಯ ನಿರ್ವಹಣೆ ಮಾಡಲು ಪಾಲಿಕೆಗೆ ಸಹಕರಿಸೋಣ ಎಂದು ಜನರಿಗೆ ಅರಿವು ಮೂಡಿಸಲಾಯಿತು.

ಇದ್ದರೆ ಇರಬೇಕು, ಇಂತಹ ಜನಪ್ರತಿನಿಧಿ ಎಂದ ಸಾರ್ವಜನಿಕರು

ಇದ್ದರೆ ಇರಬೇಕು, ಇಂತಹ ಜನಪ್ರತಿನಿಧಿ ಎಂದ ಸಾರ್ವಜನಿಕರು

ಇನ್ನು ಈ ವೇಳೆ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಎಸೆದಿದ್ದ ಕಸ ವಿಲೇವಾರಿ ಮಾಡಲಾಯಿತು. ವಾರ್ಡ್‌ನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಸ ಮುಕ್ತ ವಾರ್ಡ್ ಮಾಡಬೇಕೆಂಬ ಗಡಿಗುಡಾಳ್ ಮಂಜುನಾಥ್, ಸಂಕಲ್ಪ ಈಗಾಗಲೇ ಶೇಕಡಾ 75ರಷ್ಟು ಯಶಸ್ಸು ಕಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲೆಂದರಲ್ಲಿ ಯಾರೂ ಕಸ ಹಾಕಬೇಡಿ. ಕಸ ತೆಗೆದುಕೊಂಡು ಹೋಗಲು ಬರುವ ವಾಹನಗಳಿಗೆ ಒಣ ಮತ್ತು ಹಸಿ ಕಸ ನೀಡಿ ಸಹಕರಿಸಿ ಎಂದು ಗಡಿಗುಡಾಳ್ ಮಂಜುನಾಥ್ ವಾರ್ಡ್‌ನ ಜನರಿಗೆ ಮನವಿ ಮಾಡಿದರು.

2ನೇ ಮುಖ್ಯ ರಸ್ತೆಯ ಪ್ರತಿ ಮನೆಗೂ ಭೇಟಿ ನೀಡಿದ ಗಡಿಗುಡಾಳ್ ಮಂಜುನಾಥ್‌ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಜನರು ಸಹ ಕಾರ್ಪೊರೇಟರ್ ಅವರ ಜನಪರ ಕಾಳಜಿಗೆ ಶಹಬ್ಬಾಸ್ ಗಿರಿ ನೀಡಿದರು. ಇದ್ದರೆ ಇರಬೇಕು, ಇಂತಹ ಜನಪ್ರತಿನಿಧಿ ಎಂದು ಮುಕ್ತವಾಗಿ ಶ್ಲಾಘಿಸಿದರು.

ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಪಾಲಿಕೆ ಸದಸ್ಯ

ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಪಾಲಿಕೆ ಸದಸ್ಯ

ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್, "ವಾರದಲ್ಲಿ ಒಂದು ದಿನ ತನ್ನ ವಾರ್ಡ್‌ನ ಮುಖ್ಯರಸ್ತೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಹಿತ‌ ಕಾಪಾಡುತ್ತೇನೆ. ಚುನಾವಣೆಯಲ್ಲಿ ಗೆಲ್ಲಿಸಿದ ಜನರು ಈಗಲೂ ನಮ್ಮ‌ ಮಾಲೀಕರು.‌ ಮುಂದೆಯೂ ಅವರೇ ಮಾಲೀಕರು.‌ ಸಮಸ್ಯೆಗೆ ಸ್ಪಂದಿಸುವುದು, ಸ್ಥಳದಲ್ಲಿ ಕೆಲ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಮಸ್ಯೆ ಪರಿಹರಿಸುವುದು ನನ್ನ ಕರ್ತವ್ಯ," ಎಂದು ಹೇಳಿದರು.

ಇನ್ನು ಎಂಸಿಸಿಬಿ ಬ್ಲಾಕ್‌ನ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರ ಬಳಿಕ ಜನರು ಸ್ವಚ್ಚತೆ ಇಲ್ಲ, ಎಲ್ಲೆಂದರಲ್ಲಿ ಗುಂಡಿ ಅಗೆದಿರುವುದರಿಂದ ಆಗುವ ಸಮಸ್ಯೆ, ವಿದ್ಯುತ್ ದೀಪ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡಲಾಯಿತು. ಇನ್ನು ಕೆಲ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಮಾಡುವಂತೆ ಅಧಿಕಾರಿಗಳಿಗೆ ಮಂಜುನಾಥ್ ಸೂಚನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+