ರಾಮುಲು ಪಿಎಯದ್ದು ಎನ್ನಲಾದ ಆಡಿಯೋ ಟೇಪ್ ವಿರುದ್ಧ ಕಾಂಗ್ರೆಸ್ ದೂರು

ದಾವಣಗೆರೆ, ಡಿಸೆಂಬರ್ 04: ರಾಮುಲು ಅವರ ಪಿಎ ಮಾತನಾಡಿದ್ದ ಎನ್ನಲಾಗುತ್ತಿರುವ ಶಾಸಕರ ಖರೀದಿಗೆ ಯತ್ನಿಸುತ್ತಿರುವ ಸಂಭಾಷಣೆ ಉಳ್ಳ ಆಡಿಯೋ ಕ್ಲಿಪ್‌ ಒಂದು ವೈರಲ್ ಆಗಿದ್ದ ಆ ಬಗ್ಗೆ ರಾಜ್ಯ ಕಾಂಗ್ರೆಸ್‌ ದೂರು ನೀಡುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದಾವಣೆಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ಆಗಿರುವ ಆಡಿಯೋ ಕ್ಲಿಪ್‌ ಬಗ್ಗೆ ಇಂದು ಸಂಜೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್‌ನಲ್ಲಿ ಶಾಸಕರಿಗೆ ಆಮೀಷ ಒಡ್ಡುತ್ತಿರುವ ಧ್ವನಿ ರಾಮುಲು ಪರಮಾಪ್ತ ಸುರ್ಜಿತ್ ಎಂಬುವರದ್ದು ಎನ್ನಲಾಗುತ್ತಿದೆ. ಆದರೆ ಕೆಲವು ಬಿಜೆಪಿ ಶಾಸಕರು ಅದು ಡಿ.ಕೆ.ಶಿವಕುಮಾರ್ ಆಪ್ತನ ಧ್ವನಿ ಎಂದಿದ್ದಾರೆ.

Congress give complaint against audio clip which is about MLA purchase

ಈ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದು, ಸುರ್ಜಿತ್ ನನ್ನ ಪಿಎ ಅಲ್ಲ ಅವರು ರಾಮುಲು ಅವರ ಪಿಎ. ಹಗಲು ರಾತ್ರಿ ಅವರ ಬೆನ್ನಹಿಂದೆಯೇ ಅವರು ಓಡಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಶಾಸಕರೊಬ್ಬರಿಗೆ ಪಕ್ಷ ತ್ಯಜಿಸಲು ಭಾರಿ ಮೊತ್ತದ ಹಣದ ಆಫರ್ ನೀಡಿದ್ದಾರೆ, ಮುಂದಿನ ಚುನಾವಣೆಯ ಖರ್ಚು ನಾವೇ ಭರಿಸುತ್ತೇವೆ ಎಂದು ಸಹ ಆಡಿಯೋ ಕ್ಲಿಪ್‌ನಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+