ಕನ್ನಯ್ಯ ಕೊಲೆ: ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಬೇಕು: ರೇಣುಕಾಚಾರ್ಯ
ದಾವಣಗೆರೆ, ಜೂನ್ 29: ರಾಜಸ್ಥಾನದ ಉದಯಪುರ್‌ದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದ ಟೈಲರ್ ಕನ್ನಯ್ಯ ಲಾಲ್ ಎಂಬುವವರನ್ನು ದುಷ್ಕರ್ಮಿಗಳು ಕ್ರೂರವಾಗಿ ಕೊಲೆ ಮಾಡಿದ್ದನ್ನು ಖಂಡಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹಂತಕರ ವಿರುದ್ಧಸೇಡು ತೀರಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, "ಹಿಂದೂಗಳೇನೂ ಕೈಗೆ ಬಳೆ ತೊಟ್ಟಿಲ್ಲ. ಹಿಂದೂಗಳನ್ನು ಸೀಳಿದವರನ್ನು ನಾವು ಸೀಳಬೇಕು. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಲೇಬೇಕು, ಈ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಎಲ್ಲರೂ ಸುಮ್ಮನಿರುತ್ತಾರೆ. ಇಂತ ಅಯೋಗ್ಯರನ್ನು ಮಟ್ಟ ಹಾಕಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶದಲ್ಲಿ ಸಾಮರಸ್ಯದಿಂದ ಇರಬೇಕು ಎಂದು ನಾವು ಭಾವಿಸುತ್ತೇವೆ. ನಮ್ಮ ದೇವಾಲಯದಲ್ಲಿ ತೀರ್ಥ ಪ್ರಸಾದ ಕೊಟ್ಟರೆ, ಅವರ ಕೆಲವ ಮಸೀದಿಗಳಲ್ಲಿ ಮಾರಾಕಾಸ್ತ್ರಗಳಿವೆ. ಮದರಸಾಗಲ್ಲಿ ರಾಷ್ಟ್ರದ್ರೋಹ ಕಲಿಸುತ್ತಿದ್ದಾರೆ. ಹಿಂದುಗಳನ್ನು ಕೊಲ್ಲುವಂತಹ ಇಂತಹ ದೇಶದ್ರೋಹಿಗಳನ್ನು ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಆಗ ಮಾತ್ರ ಭಾರತ ಮಾತೆಗೆ ಗೌರವ ನೀಡಿದಂತಾಗುತ್ತದೆ" ಎಂದು ರೇಣುಕಾಚಾರ್ಯ ಹೇಳಿದರು.

"ದುಷ್ಕರ್ಮಿಗಳು ಟೈಲರ್ ಕನ್ನಯ್ಯ ಲಾಲ್ ರನ್ನು ಕೊಂದು ಪ್ರಧಾನ ಮಂತ್ರಿಗೆ ಬೆದರಿಕೆ ಹಾಕುತ್ತಾರೆ ಎಂದರೆ, ದೇಶದಲ್ಲಿ ಪರಿಸ್ಥಿತಿ ಹೇಗಿದೆ?. ಇಂತವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು. ಹಿಂದೆ ಹರ್ಷ, ರುದ್ರೇಶ್, ಕುಟ್ಟಪ್ಪ ಆಯ್ತು, ಇದೀಗ ಕನ್ನಯ್ಯ ನನ್ನು ಹತ್ಯೆ ಮಾಡಲಾಗಿದೆ" ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, 'ಹಿಂದುತ್ವದ ವಿರುದ್ಧ ಮಾತನಾಡಿದವರನ್ನ ಗುಂಡಿಟ್ಟು ಕೊಲ್ಲಬೇಕು. ಆಗ ಮಾತ್ರ ಭಾರತ ಮಾತೆಗೆ ಗೌರವ ಸಿಗುತ್ತದೆ, ಹತ್ಯೆಗೀಡಾದವರಿಗೆ ಶಾಂತಿ ಸಿಗುತ್ತದೆ" ಎಂದರು.
ಸಿದ್ದರಾಮಯ್ಯ ಖಂಡಿಸಬೇಕಿತ್ತು; "ಹೆಸರಿನಲ್ಲಿ ರಾಮನ ಹೆಸರನ್ನು ಹೊಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂತಹ ಘಟನೆಗಳನ್ನು ಖಂಡಿಸಬೇಕಿತ್ತು. ಕೇವಲ ಸಂತಾಪ ಸೂಚಿಸಿ ಮನೆಯಲ್ಲಿದ್ದರೆ ಸಾಲದು, ಕಂಡಲ್ಲಿ ಗುಂಡಿಟ್ಟು ಸಾಯಿಸಿ ಎಂದು ಹೇಳಬೇಕು, ಕಾಂಗ್ರೆಸ್ ನವರು ಅಲ್ಪಸಂಖ್ಯಾತ ಮತಗಳಿಗಾಗಿ ಇಂತಹ ಘಟನೆಗಳ ವಿರುದ್ಧ ಮಾತನಾಡುವುದಿಲ್ಲ. ನಾವು ಇಂತಹ ಘಟನೆಗಳ ವಿರೋಧಿಸುತ್ತೇವೆ. ನನಗೂ ಹಲವು ಬಾರಿ ಬೆದರಿಕೆ ಕರೆ ಬಂದಿವೆ, ಆದರೆ ನಾನು ಎರುವುದಿಲ್ಲ ಎಂದ ಅವರೂ, ಮುಸ್ಲಿಂ ಗುರುಗಳು ಇಂತಹ ಘಟನೆಗಳನ್ನು ಖಂಡಿಸಬೇಕು" ಎಂದು ಒತ್ತಾಯಿಸಬೇಕು ಎಂದರು.












Click it and Unblock the Notifications