Arecanut price: ಶೀಘ್ರದಲ್ಲೇ ಕ್ವಿಂಟಾಲ್‌ ಅಡಿಕೆ ಧಾರಣೆ 85,000 ಮುಟ್ಟುವ ಸಾಧ್ಯತೆ: ಪ್ರಸ್ತುತ ದರ ಎಷ್ಟಿದೆ?

Arecanut Price: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಸಾಗಿದ್ದ ಅಡಿಕೆ ಧಾರಣೆ ಇದೀಗ ಭರ್ಜರಿ ಏರಿಕೆಯಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಇಂದು (ಆಗಸ್ಟ್ 23) ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಜಿಲ್ಲೆಯಲ್ಲಿ ಇಂದಿನ ಕ್ವಿಂಟಾಲ್‌ ಅಡಿಕೆ ಗರಿಷ್ಠ ದರ 61,009 ರೂಪಾಯಿ ಆಗಿದೆ. ಇಳಿಕೆಯತ್ತ ಸಾಗಿದ್ದ ದರ ಮತ್ತೆ ಇದೀಗ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮತ್ತಷ್ಟು ಹೆಚ್ಚಾದಂತಾಗಿದೆ. ಈ ತಿಂಗಳಲ್ಲೇ 85,000 ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಹೇಗೆ ಎನ್ನುವ ಪ್ರಶ್ನೆಗೆ ಎನ್ನುವ ಉತ್ತರ ಇಲ್ಲಿ ನೀಡಲಾಗಿದೆ ತಿಳಿಯಿರಿ.

Arecanut Price Likely to Reach 85 000 per Quintal by August End

ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 61,009 ರೂಪಾಯಿ, ಕನಿಷ್ಠ ದರ 53,979 ರೂಪಾಯಿ ಇದ್ದು, ಸರಾಸರಿ ಬೆಲೆ 58,456 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು. ಇದೀಗ ಮತ್ತೆ ಏರಿಕೆಯಾಗಿರುವುದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಿಸದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್‌ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆಯಾಗುತ್ತಾ ಬಂದಿತ್ತು. ಏಪ್ರಿಲ್‌ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು.

ಆದರೆ, ಮೇ ಆರಂಭದಿಂದಲೂ ಜೂನ್‌ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್‌ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಆದರೆ, ಇದೀಗ ಭರ್ಜರಿಯಾಗಿ ಏರಿಕೆಯಾಗುತ್ತಲಿದೆ. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು.

2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಬಳಿಕ ಏರಿಕೆ ಆಗುತ್ತಲಿದ್ದು, ಆಗಸ್ಟ್‌ ತಿಂಗಳಿನಲ್ಲೇ ಕ್ವಿಂಟಾಲ್‌ ಅಡಿಕೆ ದರ ಶೀಗ್ರದಲ್ಲೇ 85,000 ರೂಪಾಯಿ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಧಾರಣೆಯಲ್ಲಿ ಸುಧಾರಣೆ ಆಗಿದ್ದು, ಇದರಿಂದ ರೈತರ ಬಾಯಿಗೆ ಸಕ್ಕರೆ ಹಾಕಿದಂತಾಗಿದೆ.

ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ ಮತ್ತೆ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ಮತ್ತೊಂದೆಡೆ ಮಳೆಗಾಲದಲ್ಲಿ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕವೂ ಸಹ ಬೆಳೆಗಾರರನ್ನ ಕಾಡತೊಡಗಿದೆ.

ಭಾರೀ ಮಳೆ ಹಿನ್ನೆಲೆ ಅಡಿಕೆಯನ್ನು ಒಳಗಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಅದರಲ್ಲೂ ಈ ವೇಳೆಯೇ ದರ ಹೆಚ್ಚಳ ಆಗುತ್ತಿದ್ದು, ರೈತರು ಹಾಗಾದರೂ ಮಾಡಿ ಅಡಿಕೆಯನ್ನು ಒಳಗಿಸಲಿ ಹರಸಾಹಸ ಪಡುತ್ತಿದ್ದಾರೆ. ಯಾಕಂದ್ರೆ ಮತ್ತೆ ಯಾವಾಗ ಏರಿಕೆ ಆಗುತ್ತದೆಯೋ ಗೊತ್ತಿಲ್ಲ ಎನ್ನುವ ಭಯ ರೈತರಲಿದೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಪರಿಣಾಮ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿ ಆಗಿವೆ. ಮುಂದಿನ ದಿನಗಳಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಹೀಗೆ ಏನಾದ್ರೂ ಆದರೆ ರೈತರಿಗೆ ಒಂದೆಡೆ ಸಂತಸ ಆದ್ರೆ, ಮತ್ತೊಂದೆಡೆ ಅಡಿಕೆಯನ್ನು ಹೇಗೆ ಒಣಗಿಸುವುದು ಎಂಬ ಚಿಂತೆ ಕಾಡತೊಡಗಿದೆ. ಜೊತೆಗೆ ಅಡಿಕೆ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+