ಸಾವನ್ನೇ ಗೆದ್ದುಬಂದ ಈ ಎಳೆಗೂಸಿಗೆ ಚಪ್ಪಾಳೆಯ ಸುರಿಮಳೆ

ದಾವಣಗೆರೆ, ಮೇ 26: ಕೊರೊನಾ ವೈರಸ್ ಸೋಂಕು ಪುಟ್ಟ ಕಂದಮ್ಮಗಳನ್ನೂ ಬಿಡುತ್ತಿಲ್ಲ. ಎಳೆ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರನ್ನೂ ಕೊರೊನಾ ಕಾಡುತ್ತಿದೆ. ಇದೀಗ ಆ ಕೊರೊನಾ ವೈರಸ್ ಅನ್ನೇ ಎಂಟು ತಿಂಗಳ ಈ ಎಳೆಗೂಸು ಗೆದ್ದುಬಂದಿದೆ.

ದಾವಣಗೆರೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ತಿಂಗಳ ಮಗು ಇದೀಗ ಕೊರೊನಾದಿಂದ ಸಂಪೂರ್ಣ ಗುಣಮುಖವಾಗಿದೆ. P.632 ಸೋಂಕಿತ ಮಗು ಗುಣಮುಖವಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.

ಸ್ಟಾಫ್ ನರ್ಸ್ ಒಬ್ಬರ ಸಂಪರ್ಕದಿಂದಾಗಿ ಮಗುವಿಗೆ ಸೋಂಕು ತಗುಲಿತ್ತು. ಮಗುವಿನಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗುತ್ತಿದ್ದಂತೆಯೇ ಸರ್ವೆಕ್ಷಣಾ ಇಲಾಖೆ ಸ್ಪಂದಿಸಿ, ತುರ್ತು ಕ್ರಮ ಕೈಗೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ್ದರು.

8 Months Old Baby Recovered From Coronavirus In Davanagere

ಇದೀಗ ಈ ಪುಟ್ಟ ಮಗು ಕೊರೊನಾ ವಿರುದ್ಧ ಗೆದ್ದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಮಗುವನ್ನು ಆಸ್ಪತ್ರೆಯಿಂದ ಸಂಭ್ರಮದಿಂದ, ಚಪ್ಪಾಳೆ ತಟ್ಟುತ್ತಾ ಆರೋಗ್ಯ ಸಿಬ್ಬಂದಿ ಬಿಡುಗಡೆ ಮಾಡಿದರು. ಮಗು ಜೊತೆಯಲ್ಲಿ ಒಟ್ಟು 18 ಮಂದಿ ಬಿಡುಗಡೆ‌ಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+