ಚಳ್ಳಕೆರೆಯಲ್ಲಿ ಎರಡು ಆನೆಗಳು ಪ್ರತ್ಯಕ್ಷ, ಸ್ಥಳೀಯರಿಗೆ ಆತಂಕ

Posted By: Nayana
Subscribe to Oneindia Kannada

ಚಿತ್ರದುರ್ಗ, ಡಿಸೆಂಬರ್ 05 : ಚಿತ್ರದುರ್ಗದ ತಿಮ್ಮಪ್ಪಯ್ಯನಹಳ್ಳಿ ಬಳಿ ಎರಡು ಆನೆಗಳು ಮಂಗಳವಾರ ಬೆಳಗ್ಗೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಅತಂಕ ಮನೆ ಮಾಡಿದೆ.

ಬಂಡಿಪುರ ಕಾಡಂಚಿನ ಜನರ ನೆಮ್ಮದಿ ಕಸಿದ ಕಾಡುಪ್ರಾಣಿಗಳು

ಚಿತ್ರದುರ್ಗ ಜಿಲ್ಲೆ ಚಳ್ಳಕರೆರೆ ತಾಲೂಕಿನ ಗ್ರಾಮದ ಜಮೀನದಲ್ಲಿ ಮಂಗಳವಾರ ಎರಡು ಆನೆಗಳು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲದೆ ಜಮೀನನಲ್ಲಿದ್ದ ಗಿಡಮರಗಳನ್ನು ಹಾಳು ಮಾಡುತ್ತಿದೆ. ಸಾರ್ವಜನಿಕರು ಅದನ್ನು ಜಮೀನಿನಿಂದ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆಯಿಂದಲೇ ನೂರಾರು ಜನರು ಆನೆ ನೋಡಲು ಜಮಾಯಿಸಿದ್ದಾರೆ.

Wild elephants sighted near challakere

ಜನರಿಗೆ ಹೆದರಿ ಆನೆಗಳು ಜಮೀನಿನ ತುಂಬಾ ಓಡಾಡಿ ನಾಶ ಮಾಡುತ್ತಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಆನೆಗಳನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಆನೆಗಳು ಗುಂಪಿನೊಂದಿಗೆ ಬಂದಿದೆ ಆದರೆ ಎರಡು ಆನೆಗಳು ಅದರಿಂದ ತಪ್ಪಿಸಿಕೊಂಡು ಹಳ್ಳಿಯೊಳಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two wild elephants sighted near challakere taluk in Chitradurga district. The forest officials have rushed to the village and trying them to send back.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ