ಚಿತ್ರದುರ್ಗ : ಪಿಎಸ್‌ಐ ಗಿರೀಶ್ ಪತ್ನಿ ಕೊಲೆ ಪ್ರಕರಣಕ್ಕೆ ತಿರುವು

Posted By:
Subscribe to Oneindia Kannada

ಚಿತ್ರದುರ್ಗ, ಜೂನ್ 10 : ಹೊಸದುರ್ಗ ಠಾಣೆ ಪಿಎಸ್ಐ ಗಿರೀಶ್ ಪತ್ನಿ ಪ್ರಫುಲ್ಲಾ ಕೊಲೆ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಗಿರೀಶ್ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ.

ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ತುಮಕೂರು ಜಿಲ್ಲೆಯ ಚೇಳೂರು ಪೊಲೀಸರು ಗಿರೀಶ್ ಮತ್ತು ಪ್ರಫುಲ್ಲಾ ತಾಯಿ ಮಹಾದೇವಮ್ಮ ಅವರನ್ನು ಗುರುವಾರ ರಾತ್ರಿ ಬಂಧಿಸಿದ್ದರು. ಈ ಸಮಯದಲ್ಲಿ ಠಾಣೆಯ ಶೌಚಾಲಯದಲ್ಲಿ ಪಿನಾಯಿಲ್ ಕುಡಿದು ಅಸ್ವಸ್ಥಗೊಂಡ ಗಿರೀಶ್‌ ಅವರನ್ನು ಬೆಂಗಳೂರಿಗೆ ಕರೆತಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಲೋಕಾಯುಕ್ತರಿಗೆ ಚಳ್ಳೆಹಣ್ಣು ತಿನ್ನಿಸಿದ ಚಿತ್ರದುರ್ಗ ಎಸಿ]

ಶುಕ್ರವಾರ ಮಧ್ಯಾಹ್ನ ಚೇತರಿಸಿಕೊಂಡ ಗಿರೀಶ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಾಳೇಗೌಡ ಮತ್ತು ಚೇಳೂರು ಪೊಲೀಸರು ಗಿರೀಶ್ ವಿಚಾರಣೆ ನಡೆಸುತ್ತಿದ್ದು, ಕೊಲೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪತ್ನಿ ಹತ್ಯೆಗೆ ಗಿರೀಶ್ ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದ್ದು, ವಿಚಾರಣೆ ತೀವ್ರಗೊಂಡಿದೆ.

girish

ಜೂನ್ 5ರಂದು ಕೊಲೆ : 2016ರ ಜೂನ್ 5ರ ರಾತ್ರಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಗನಹಳ್ಳಿಯಲ್ಲಿ ಪ್ರಫುಲ್ಲಾ ಕೊಲೆ ನಡೆದಿತ್ತು. ರಾತ್ರಿ ಊಟ ಮುಗಿಸಿಕೊಂಡು ಬೈಕ್‌ನಲ್ಲಿ ಬರುವಾಗ ಅವರನ್ನು ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. [PSI ಜಗದೀಶ್ ಪತ್ನಿಗೆ ಸರ್ಕಾರಿ ಉದ್ಯೋಗ]

ಅಕ್ರಮ ಸಂಬಂಧದ ಆರೋಪ : ಗಿರೀಶ್ ಮತ್ತು ಪ್ರಫುಲ್ಲಾ ತಾಯಿ ಮಹಾದೇವಮ್ಮ ಅವರ ನಡುವೆ ಅಕ್ರಮ ಸಂಬಂಧವಿತ್ತು. ಇಬ್ಬರು ಒಟ್ಟಿಗೆ ಇರುವುದನ್ನು ಪ್ರಫುಲ್ಲಾ ನೋಡಿ, ಗಂಡನ ಜೊತೆ ಜಗಳವಾಡಿದ್ದಳು. ಈ ವಿಷಯವನ್ನು ಬಹಿರಂಗಪಡಿಸುತ್ತಾಳೆ ಎಂದು ಹೆದರಿ ಆಕೆಯನ್ನು ಕೊಲ್ಲಲು ಗಿರೀಶ್ ಸುಪಾರಿ ಕೊಟ್ಟಿದ್ದ ಎಂಬ ಆರೋಪವಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ತುಮಕೂರು ಮೂಲದ ಚಿದಾನಂದ ಎಂಬುವವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಚಿತ್ರದುರ್ಗ : ಸೊಸೆಯನ್ನು ಕೊಂದುಹಾಕಿದ ನಿವೃತ್ತ ಶಿಕ್ಷಕ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chitradurga district Hosadurga police station Police sub-inspector Girish arrested in connection with the his wife Prafulla murder case. Prafulla murdered on June 5, 2016 at Tumakuru.
Please Wait while comments are loading...