ರೀ..ವಿಜಯೇಂದ್ರ ಅವರೇ.. ಪ್ರೀ ಇದ್ರೆ ಬಂದು ನನ್ನ ಹೇರ್ ಕಟಿಂಗ್ ಮಾಡಿ: ಮಧು ಬಂಗಾರಪ್ಪ ಹೀಗೆ ಹೇಳಿದ್ಯಾಕೆ?
ಚಿತ್ರದುರ್ಗ, ಮೇ, 27: ಚಿತ್ರದುರ್ಗಕ್ಕೆ ಬರುವ ಮಧು ಬಂಗಾರಪ್ಪ ಅವರು ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿಕೊಂಡು ಚಿತ್ರದುರ್ಗಕ್ಕೆ ಬರಲಿ ಎಂದು ಬಿಜೆಪಿ ರಾಜ್ಯದ್ಯಕ್ಷರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪನವರ ಪ್ರತಿಕ್ರಿಯೇ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಚಿತ್ರದುರ್ಗಕ್ಕೆ ಬರುವ ಮಧು ಬಂಗಾರಪ್ಪ ಅವರು ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿಕೊಂಡು ಚಿತ್ರದುರ್ಗಕ್ಕೆ ಬರಲಿ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದರು. ಇದಕ್ಕೆ ಚಿತ್ರದುರ್ಗದಲ್ಲಿ ಪ್ರತ್ಯುತ್ತರ ನೀಡಿದ ಮಧು ಬಂಗಾರಪ್ಪ, BJP ಪಕ್ಷದ ಅಧ್ಯಕ್ಷರಾಗಿ ಚಿತ್ರರಂಗದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಜೂನ್ 4ರಂದು ಅವರ ಹಣೆ ಬರಹ ಅವರು ನೋಡಿಕೊಳ್ಳಲಿ. ನನ್ನ ಹಣೆ ಬರಹ ನಾವು ನೋಡಿಕೊಳ್ತೇವೆ. ಇಷ್ಟು ವರ್ಷ ಅವರು ಒಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ ಎಂದರು.

ಇವರ ಹಣೆ ಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲು ಆಗಿಲ್ಲ, ನಾವು ಬಂದ ಬಳಿಕ ನೇಮಕಾತಿ ಮಾಡಿದ್ದೇವೆ. ಶಿಕ್ಷಣದ ಪವಿತ್ರತೆಯನ್ನು ಕೂಡ ಕಾಂಗ್ರೆಸ್ ಪಕ್ಷ ಕಾಪಾಡಿದೆ. ಮಕ್ಕಳ ಹಿತ ದೃಷ್ಟಿಯಿಂದ ಕೆಲ ನಿರ್ಧಾರ ಮಾಡಿದ್ದೇವೆ ಎಂದರು.
ನನ್ನ ಹೇರ್ ಕಟ್ ಮಾಡೋರು ಪ್ರೀ ಇಲ್ಲ, ವಿಜಯೇಂದ್ರ ಪ್ರೀ ಇದ್ರೆ ಬಂದು ಹೆರ್ ಕಟ್ಟಿಂಗ್ ಮಾಡಲಿ ಎಂದು ಲೇವಡಿ ಮಾಡಿದರು. ಮಾಜಿ ಮಂತ್ರಿ ಎನ್.ಮಹೇಶ್ ಪಠ್ಯದಲ್ಲಿ ಕೆಟ್ಟ ಬುದ್ದಿ ಹಾಕಿದ್ದರು. ಕೆಲ ವೇಳೆ ನನಗೆ ಕನ್ನಡ ಶಬ್ದ ಕಷ್ಟ ಆಗಿದೆ, ಟ್ರೋಲ್ ಮಾಡೊದ್ರಿಂದ ಅವರಿಗೆ ಹೊಟ್ಟೆ ತುಂಬುತ್ತದೆ. ನಮ್ಮ ಪಠ್ಯ ಪುಸ್ತಕ ಶುದ್ದಿಯಾಗಿ, ಪರಿಷ್ಕರಣೆ ಮಾಡಲಾಗಿದೆ ಎಂದರು.
ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ಪುಕ್ಸಟೆ ನೋಡಿ ಮಜಾ ಮಾಡ್ತಾರೆ, ವಿರೋಧ ಪಕ್ಷದಲ್ಲಿ ಇದ್ದು ಟೀಕೆ ಟಿಪ್ಪಣಿ ಮಾಡಬಾರದು. ಉತ್ತಮ ಕೆಲಸ ಮಾಡಿದಾಗ ದ್ವನಿ ಕೊಡಬೇಕು. ನಮ್ಮ ಸರ್ಕಾರ ಬಂದಿದ್ದು ಅವರಿಗೆ ಹೊಟ್ಟೆ ಉರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications