Vani Vilasa Sagara Dam: ಇದೇ ಮೊಟ್ಟ ಮೊದಲ ಬಾರಿ ಹೊಸ ದಾಖಲೆ ಸೃಷ್ಟಿಗೆ ಸಜ್ಜಾದ ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಜಲಾಶಯ
Vani Vilasa Sagara Dam: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮಳೆರಾಯನ ಆರ್ಭಟ ಇದೀಗ ಮತ್ತೆ ಚುರುಕು ಪಡೆದಿದೆ. ಈಗಾಗಲೇ ಭಾರೀ ಮಳೆಯಿಂದಾಗಿ ಹಲವು ಪ್ರಮುಖ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಹಾಗೆಯೇ ಹಳೇ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಸಾಗರ (ಮಾರಿಕಣಿವೆ) ಜಲಾಶಯ ಮತ್ತೆ ತುಂಬುವ ಹಂತದಲ್ಲಿದೆ. ಹಾಗಾದ್ರೆ ಇಂದು (ಸೆಪ್ಟೆಂಬರ್ 19) ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಟೆನಾಡು ಅಂತಲೇ ಪ್ರಸಿದ್ಧಿಯಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಇದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಜಲಾಶಯ ಈಗಾಗಳೇ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭತ್ತಿಯಾಗಿತ್ತು. ಇದೀಗ ಮತ್ತೆ ಎರಡನೇ ಬಾರಿ ಭರ್ತಿಯಾಗುವ ಹಂತದಲ್ಲಿದೆ. ಭಾರೀ ಮಳೆ ಮುಂದುವರೆದರೆ, ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಭರ್ತಿಯಾಗಲಿದೆ. ಹಾಗಾದ್ರೆ ಇದೀಗ ಸದ್ಯ ಎಷ್ಟು ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಒಂದು ವೇಳೆ ಇದೀಗ ಭರ್ತಿಯಾದ್ರೆ, ವರ್ಷದದಲ್ಲಿ ಎರಡು ಬಾರಿ ತುಂಬಿದಂತಾಗಲಿದ್ದು, ಇದು ಹೊಸ ದಾಖಲೆ ಆದಂತಾಗಿದೆ. ಯಾಕಂದ್ರೆ ಇದುವರೆಗೂ ವರ್ಷದಲ್ಲೊ ಎರಡು ಬಾರಿ ತುಂಬಿದ ಇತಿಹಾಸವಿಲ್ಲ ಆದ್ದರಿಂದ. ಇದೀಗ ಮಾರಿಕಣಿವೆ ಅಥವಾ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸನಿಹದಲ್ಲಿದೆ. ಮತ್ತೊಂದೆಡೆ, ಇದುವರೆಗೂ ನಾಲ್ಕನೇ ಬಾರಿಗೆ ಕೋಡಿ ಬಿದ್ದ ಹೆಗ್ಗಳಿಕೆ ಪಡೆಯಲು ಸಜ್ಜಾಗಿದೆ.
ವಾಣಿ ವಿಲಾಸ ಸಾಗರ ಜಲಾಶಯಗಳನ್ನು ಮಾರಿಕಣಿವೆ ಅಂತಲೂ ಕರೆಯಲಾಗುತ್ತದೆ. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದೀಗ ಈ ಜಲಾಶಯ ಇದುವರೆಗೂ ನಾಲ್ಕನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಿ ಹೊಸ ಇತಿಹಾಸ ಪಟ್ಟಿಗೆ ಸೇರಲು ಸಜ್ಜಾಗಿದೆ.
2025ರ ಆರಂಭದಲ್ಲಿ ಅಂದರೆ ಜನವರಿಯಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಬದಲಾಗಿ ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ. ಇನ್ನೂ ಇದೀಗ ಮಳೆರಾಯನ ಆರ್ಭಟ ಮುಂದುವರೆದಿದ್ದು, ಪ್ರಸ್ತುತ ಸೆಪ್ಟೆಂಬರ್ 19 ಶುಕ್ರವಾರ ನೀರಿನ ಮಟ್ಟ 127.90 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ 2.10 ಅಡಿಯಷ್ಟೇ ಬಾಕಿಯಿದೆ. ಭಾರೀ ಮಳೆ ಮುಂದುವರೆದರೆ ಇದು ಸಾಧ್ಯವಾಗುವುದರಲ್ಲಿ ಆಶ್ಚರ್ಯವಿಲ್ಲೆ ಎಂದು ಹೇಳಲಾಗುತ್ತಿದೆ.
ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 127.90 ಇದ್ದರೆ, 750 ಕ್ಯೂಸೆಕ್ ಒಳಹರಿವು ಇದೆ. ಆದರೆ, ಹೊರಹರಿವಿಲ್ಲ. ಇನ್ನೂ ಕೇವಲ 2.10 ಅಡಿ ನೀರು ಬಂದ್ರೆ ಮತ್ತೆ ಭರ್ತಿಯಾಗಲಿದ್ದು, ಈ ಮೂಲಕ ಇದುವರೆಗೂ ನಾಲ್ಕೂ ಬಾರಿ ಕೋಡಿ ಬಿದ್ದ ಖ್ಯಾತಿ ಪಡೆಯಲಿದೆ.
ಪ್ರಸ್ತುತ ಡ್ಯಾಂ ನೀರಿನ ಮಟ್ಟ
* ನೀರಿನ ಸಂಗ್ರಹಣ ಸಾಮರ್ಥ್ಯ: 130 ಅಡಿ
* ಇಂದಿನ ನೀರಿನ ಮಟ್ಟ: 127.90 ಅಡಿ
* ಒಳಹರಿವು: 750 ಕ್ಯೂಸೆಕ್
* ಹೊರಹರಿವು: 0
ಯಾವ್ಯಾವಾಗ ಡ್ಯಾಂ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022ರಲ್ಲಿ 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಭರ್ತಿಯಾದ್ರೆ, ಇದು ನಾಲ್ಕನೇ ಬಾರಿ ಆದಂತಾಗಲಿದೆ.
ಯಾವ ವರ್ಷ ನೀರಿನ ಮಟ್ಟ ಎಷ್ಟು?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರವಾಗಿತ್ತು.
1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಅಂತಲೇ ಪ್ರಸಿದ್ಧಿ ಪಡಡದಿರುವ ಚಿತ್ರದುರ್ಗ ಜಿಲ್ಲೆಯ ಜೀನವಾಡಿಯೂ ಆಗಿದೆ. ಇದು ಭರ್ತಿಯಾದ್ರೆ ಸಾಕು ಈ ಭಾಗದ ರೈತರ ಮುಖದಲ್ಲಿ ಸಂತಸ ಹೆಚ್ಚಾಗಲಿದೆ.












Click it and Unblock the Notifications